________________
22
ಸಪ್ತಮಾಶ್ವಾಸಂ |೩೩೧ ಬಟ್ಟೆಯಂ ಮುದುಗಳ್ ಮಗು ಕುಡಿಸುವರೆಂಬ ಬಗೆಯೊಳಂ ವಿಕ್ರಮಾರ್ಜುನನುಂ ಭೀಮನುಂ ಯಮಳರುಮೆದುಕೊಳ್ಳರೆಂಬ ಸಂಕೆಯೊಳಮಂತಲು ನಿನ್ನ ನನ್ನಿಯೊಳಂ ವರ್ಷಾವಧಿಯೊಳಲ್ಲದೆ ನೆಲನನೊತ್ತೆವಿಡಿಯನೆಂದೊಡೆ ಧರ್ಮಪುತ್ರಂ ಪನ್ನೆರಡು ವರುಷಂಬರಂ ನಾಡು ಪುಗದರಣ್ಯದೊಳಿರ್ಪಂತುಮಜ್ಞಾತವಾಸವೆಂದೊಂದು ವರುಷದೊಳಾರಾನು ಮಂದರಪೊಡ ಮತ್ತಂ ದ್ರಾದಶಾಂಬರಂ ನಾಡ ದೆಸೆಯಂ ನೋಡದಂತಾಗೆಯೊಂದೆ ಪಲಗೆಯೊಳ ಗೆಲ್ಲಸೋಲಮಪ್ಪಂತು ನನ್ನಿ ನುಡಿದು ನೆಲನನೊತ್ತೆಯಿಟ್ಟಾಡಿ
ಕoll ಆ ಪಲಗೆಯುಮಂ ಸೋಲು ಮ
ಹೀಪತಿ ಚಲದಿಂ ಬಟಕ್ಕೆ ಸೋಲಂ ಗಡಮಾ | ದೌಪದಿಯುಮನೇನಾಗ
ಪಾಪದ ಫಳಮೆಯೆವಂದ ದವಸದೊಳಾರ್ಗಂ ||
ವ|| ಅಂತು ದುರ್ಯೋಧನನಜಾತಶತ್ರುವಿನ ಸರ್ವಸ್ವಮೆಲ್ಲಮಂ ಗೆಲ್ಲು ಗೆಲ್ಲ ಕಸವರ ಮೆಲ್ಲಂ ಬಂದುದು ಪಾಂಚಾಳರಾಜತನೂಜೆಯೋರ್ವಳ್ ಬಂದಳಿಲ್ಲಾಕೆಯಂ ತನ್ನಿಮೆಂದು ಯುಧಿಷ್ಠಿರಂ ಕೊಟ್ಟ ನನ್ನಿಯ ಬಲದೊಳ್ ತನಗೆ ಲಯವಿಲ್ಲದುದನಡೆದು ಮೇಗಿಲ್ಲದ ಗೊಡ್ಡಾಟಮಾಡಲ್ ಬಗೆದು ಕರ್ಣನ ಲೆಂಕಂ ಪ್ರಾತಿಕಾಮಿಯೆಂಬನುಮಂ ತನ್ನ ತಮ್ಮಂ
೪
ತೋರಿಸಿಯೂ ಒತ್ತೆಗಳನ್ನು ಕೂಗಿ ಹೇಳುತ್ತಲೂ ಆಡಿ ಎನ್ನಲು ಬೇರೆ ಉಪಾಯ ವಿಲ್ಲದೆ ಧರ್ಮರಾಜನು 'ನಾವು ಆಳುತ್ತಿರುವ ರಾಜ್ಯವೇ ಒತ್ತೆ'ಯೆಂದೊಡನೆಯೇ ಯೋಚನೆಮಾಡಿ ಗೆದ್ದ ಬಳಿಕ (ಇದನ್ನು) ಈ ಮುದಿಕಣ್ಣಳು ಪುನಃ ಹಿಂದಕ್ಕೆ ಕೊಡಿಸಿಬಿಡುತ್ತಾರೆಂಬ ಯೋಚನೆಯಿಂದಲೂ ಅರ್ಜುನಭೀಮನಕುಳರು ಸೆಳೆದುಕೊಳ್ಳುತ್ತಾರೆಂಬ ಸಂದೇಹದಿಂದಲೂ ದುರ್ಯೋಧನನು (ಧರ್ಮರಾಜನನ್ನು ಕುರಿತು) ಹಾಗಲ್ಲ ನಿನ್ನ ಮಾತಿನಲ್ಲಿ ನಂಬಿಕೆಯಿಲ್ಲದಿಲ್ಲ. ಆದರೂ ವರ್ಷದ ಕಾಲನಿರ್ದಿಷ್ಟವಾದಲ್ಲದೆ ನಿನ್ನ ಭೂಮಿಯನ್ನು ಒತ್ತೆಯಾಗಿ ಸ್ವೀಕರಿಸುವುದಿಲ್ಲ ಎನ್ನಲು ಧರ್ಮರಾಜನು 'ಹನ್ನೆರಡು ವರ್ಷದವರೆಗೆ ನಾಡನ್ನು ಪ್ರವೇಶಮಾಡದೆ ಕಾಡಿನಲ್ಲಿರುತ್ತೇವೆ. ಒಂದು ವರ್ಷ ಅಜ್ಞಾತವಾಸಮಾಡುತ್ತೇವೆ. ಆ ಅಜ್ಞಾತವಾಸವೆಂಬ ಒಂದು ವರ್ಷದಲ್ಲಿ ಯಾರಾದರೂ ತಿಳಿದರಾದರೆ ಪುನಃ ಹನ್ನೆರಡು ವರ್ಷದವರೆಗೆ ರಾಜ್ಯದ ಕಡೆಗೆ ನೋಡುವುದಿಲ್ಲ. ಒಂದು ಹಲಗೆ(ಆಟ)ಯಲ್ಲಿಯೇ ಗೆಲುವು ಸೋಲುಗಳನ್ನು ನಿಷ್ಕರ್ಷಿಸೋಣ' ಎಂದು ಹೇಳಿ ರಾಜ್ಯವನ್ನು ಒತ್ತೆಯಿಟ್ಟು ಆಡಿ ೪. ಆ ಹಲಗೆಯನ್ನೂ ಸೋತನು. ಧರ್ಮರಾಜನು ಅಷ್ಟಕ್ಕೇ ಬಿಡದೆ ಬಳಿಕ ಹಟದಿಂದ ದೌಪದಿಯನ್ನೂ ಸೋತನು. ಪಾಪದ ಫಲ ಕೂಡಿಬಂದ ದಿವಸ ಯಾರಿಗೆ ಏನು ತಾನೇ ಆಗುವುದಿಲ್ಲ. ವ|| ಹಾಗೆ ದುರ್ಯೋಧನನು ಶತ್ರು ಹುಟ್ಟದೆಯೇ ಇರುವ (ಸರ್ವಸಖನಾದ) ಯುಧಿಷ್ಠಿರನ ಸರ್ವಸ್ವವನ್ನೂ ಗೆದ್ದು, ಗೆದ್ದ ಬೆಲೆಯುಳ್ಳ ವಸ್ತುಗಳೆಲ್ಲವೂ ಬಂದುವು. ದೌಪದಿಯೊಬ್ಬಳು ಮಾತ್ರ ಬಂದಿಲ್ಲ. ಆಕೆಯನ್ನು ತನ್ನಿಯೆಂದು ಧರ್ಮರಾಜನು ಕೊಟ್ಟ ಸತ್ಯವಾಕ್ಕಿನ ಬಲದಿಂದಲೇ ತನಗೆ ಆಜ್ಞೆಗೆ ಕೇಡಿಲ್ಲವೆಂದು ತಿಳಿದು ಉತ್ತಮವಲ್ಲದ ತುಂಟಾಟವಾಡಲು (ಚೇಷ್ಟೆ ಮಾಡಲು)