________________
ಟ
ದ್ವಾದಶಾಶ್ವಾಸಂ |೬೩೫
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್
ದ್ವಾದಶಾಶ್ವಾಸಂ
ದುಂಬಿಗಳ ಸಮೂಹದಿಂದ ಕೂಡಿದ ಹೂವಿನ ಮಾಲೆಯನ್ನೇ ಹೋಲುತ್ತಿರಲು, ಬ್ರಹ್ಮಮತ್ತು ರುದ್ರರ ಒಳ್ಳೆಯ ಆಶೀರ್ವಾದವನ್ನು ಪಡೆದು ಕರ್ಣನ ನಾಶವು ತನಗೆ ಆನಂದವನ್ನುಂಟುಮಾಡುತ್ತಿರಲು ಅಮ್ಮನ ಗಂಧವಾರಣನಾದ ಅರ್ಜುನನು ಕೃಷ್ಣನೊಡಗೂಡಿ ಆ ದಿನ ಅತಿಶಯದಿಂದ ಅರಮನೆಗೆ ಬಂದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಹನ್ನೆರಡನೆಯ ಆಶ್ವಾಸ.