________________
ಉಪೋದ್ಘಾತ | ೪೯ ಗಂಗಾದೇವಿ ಆ ಕೂಸನ್ನು ಮುಳುಗಲೀಯದೆ ತನ್ನ ತೆರೆಗೈಗಳಿಂದ ದಡವನ್ನು ಸೇರಿಸಿದಳು. ಸೂತನೊಬ್ಬನದನ್ನು ಕಂಡು ನಿಧಿ ಕಂಡವನಂತೆ ಸಂತೋಷಿಸಿ ಎತ್ತಿ ಸಲಹಿದ ಆ ಮಗುವಿಗೆ ಸುಷೇಣ, ಕರ್ಣನೆಂಬ ಅನ್ವರ್ಥನಾಮಗಳಾದುವು. ಸೂತಪುತ್ರನಾಗಿಯೇ ಬೆಳೆದನಾದರೂ ಆತನ ಚಾಗದ ಬೀರದ ಮಾತು ದೇವೇಂದ್ರನನ್ನು ಮುಟ್ಟಿತು. ಮುಂದೆ ಅರ್ಜುನನಿಗೂ ಅವನಿಗೂ ಒದಗುವ ದ್ವಂದ್ವಯುದ್ಧವನ್ನು ದಿವ್ಯಜ್ಞಾನದಿಂದ ತಿಳಿದು ಮಗನ ಸಹಾಯಕ್ಕಾಗಿ ಅವನೊಡನೆ ಹುಟ್ಟಿದ ಕವಚಕುಂಡಲಗಳನ್ನು ಇಂದ್ರನು ಯಾಚಿಸಿದನು. ತಾನೆ 'ಕೊಳ್ಳೆಂದರಿದೀಡಾಡಿದನಿಂದ್ರಂಗೆ ರಾಧೇಯಂ' ಬಳಿಕ ರೇಣುಕಾನಂದನನಲ್ಲಿ ವಿದ್ಯಾಪಾರಂಗತನಾದ. ಅಲ್ಲಿಯೂ ಇಂದ್ರನ ಕುತಂತ್ರದಿಂದ ಕರ್ಣನಿಗೆ ಹಿಂಸೆಯಾಯಿತು. ಶಾಪಹತನಾಗಿ ಹಿಂತಿರುಗಿದ. ದ್ರೋಣಾಚಾರ್ಯರ ಅಸ್ತವಿದ್ಯಾಶಿಕ್ಷಣದ ವೈಭವವು ಅವನ ಕಿವಿಗೂ ಬಿದ್ದಿತು. ಕೌರವರ್ಗೆಲ್ಲಂ ಪ್ರಾಣಂ ಬರ್ಪಾಕೃತಿಯೊಳೆ ಬಾಣಾಸನ ಬಾಣಪಾಣಿ ಕರ್ಣ ಅಲ್ಲಿಗೆ ಹೋದ. ವಿಕ್ರಮಾರ್ಜುನನಿಗೂ ಇವನಿಗೂ ಸೆಣಸು ಮೊದಲಾಯಿತು. ಒಂದು ದಿನ ಬಾಲಕರ ವಿದ್ಯಾಪರೀಕ್ಷಣದ ಸಂದರ್ಭದಲ್ಲಿ ಕರ್ಣನೂ ಶರಪರಿಣತಿಯಿಂದ ಅತಿರಥಮಥನನೊಡನೆ ಸ್ಪರ್ಧಿಸಿದ. ಆಗ ದ್ರೋಣ ಕೃಪಾಚಾರ್ಯರು ಮಧ್ಯೆ ಬಂದು “ನಿನ್ನ ತಾಯ ತಂದೆಯಂ ಭಾವಿಸದೆ ಕರ್ಣ ನುಡಿವಂತೆ ಆವುದು ಸಮಕಟ್ಟು ನಿನಗಂ ಅರಿಕೇಸರಿಗಂ' ಎಂದು ಅವನ ಕುಲವನ್ನು ಅವಹೇಳನ ಮಾಡಿದರು. ದುರ್ಯೋಧನನಿಗೆ ಅದು ಸಹಿಸಲಿಲ್ಲ. 'ಕುಲಮೆಂಬುದುಂಟೆ, ಬೀರಮೆ ಕುಲಮಲ್ಲದೆ, ಕುಲಮನಿಂತು ಪಿಕ್ಕದಿರಿಂ, ಈಗಳೆ ಕುಲಜನಂ ಮಾಡಿ ತೋರ್ಪೆನ್' ಎಂದು ಅವನಿಗೆ ಅಂಗರಾಜ್ಯಾಭಿಷೇಕವನ್ನು ಮಾಡಿ ಕರ್ಣನನ್ನು ಕುರಿತು “ನೀನೆನಗೊಂದನೀಯಲ್ವೆಟ್ಟುದು'
ಪೊಡಮಡುವರ್, ಜೀಯ ಎಂಬರ್ ಕುಡು, ದಯೆಗೆಯ್, ಏಂ ಪ್ರಸಾದಂ, ಎಂಬಿವು ಪೆರೋಲ್ ನಡೆಗೆ, ಎಮ್ಮ ನಿನ್ನ ಯೆಡೆಯೊಳ್ ನಡೆಯಲ್ವೇಡ, ಎನಗೆ ಕೆಳೆಯನ್ನೆ ರಾಧೇಯ 1 ಎಂದು ಬೇಡಿಕೊಂಡ. ಮುಂದೆ ಅವರ ಮೈತ್ರಿ ಅನ್ಯಾದೃಶವಾಯಿತು. ಕರ್ಣನ ಸ್ವಾಮಿಭಕ್ತಿಯೂ ಕೊನರಿ ಮೊಗ್ಗಾಯ್ತು. ಈ ಮಧ್ಯೆ ಕೌರವ ಪಾಂಡವರ ದ್ವೇಷ ಬೆಳೆದು ವನವಾಸ ಅಜ್ಞಾತವಾಸಗಳು ಮುಗಿದುವು. ಕೃಷ್ಣನ ಸಂಧಿಯ ಪ್ರಯತ್ನವೂ ವಿಫಲವಾಯಿತು. ಇಲ್ಲಿಂದ ಮುಂದೆ ಈಗಾಗಲೇ ತಲೆದೋರಿದ್ದ ಕರ್ಣನ ದುರಂತತೆ ಇಮ್ಮಡಿಯಾಯಿತು. ಸಾಮೋಪಾಯವು ಸಾಗದಿರಲು ಕೃಷ್ಣನು ಕರ್ಣನನ್ನು ಭೇದಿಸಲು ಅವನ ಮನೆಗೇ ಬಂದು ರಥದಿಂದಿಳಿದು ಅವನನ್ನು ಬಹು ಸ್ನೇಹದಿಂದ ಸಂಬೋಧಿಸಿ ಸ್ವಲ್ಪ ದೂರ ದಾರಿ ಕಳುಹಿಸಿ ಬರುವೆಯಂತೆ ಬಾ ಎಂದು ಕರೆದುಕೊಂಡು ಹೋಗಿ ಏಕಾಂತವಾಗಿ ಒಂದು ಕಡೆ ನಿಂತು
ಭೇದಿಸಲೆಂದೆ ದಲ್ ನುಡಿದರ್ ಎನ್ನದಿರು, ಒಯ್ಯನೆ ಕೇಳ ಕರ್ಣ ನಿ ನಾದಿಯೊಳಬ್ಬೆ ಕೊಂತಿ, ನಿನಗಮ್ಮನ್ ಅಹರ್ಪತಿ, ಪಾಂಡುನಂದನರ್ ಸೋದರರ್, ಎಯ್ದ ಮಯುನನೆ ನಾನ್, ಪೆಜತೇನ್ ಪಡೆಮಾತೊ ನಿನ್ನದೀ | ಮೇದಿನಿ, ಪಟ್ಟಮುಂ ನಿನತೆ, ನೀನಿರೆ ಮತ್ತೆ ಪೆಜರ್ ನರೇಂದ್ರರೇ?11