Book Title: Vikramarjuna Vijayam
Author(s): Pampa
Publisher: Kannada Sahitya Parishattu

View full book text
Previous | Next

Page 10
________________ ಉಪೋದ್ಘಾತ | ೫ ಕವಿತಾಗುಣಾರ್ಣವನಾದ ಪಂಪ, ಪಂಪನಿಗೆ ಜಿನವಲ್ಲಭನೆಂಬ ಒಬ್ಬ ತಮ್ಮನಿದ್ದನು. ಇವನು ಪಂಪನಂತೆಯೇ ಕವಿಯೂ ಪಂಡಿತನೂ ಆಗಿದ್ದನು. ವೆಂಗಿಪಳುವು ತೆಲುಗುದೇಶದ ಒಂದು ಭಾಗವಾಗಿದ್ದರೂ ಅವನು ಆ ಪ್ರಾಂತ್ಯದ ಅಂದರೆ ವೆಂಗಿಮಂಡಲದ-ವೇಮಲ ವಾಡದ ಚಾಳುಕ್ಯರ ಆಶ್ರಯದಲ್ಲಿದ್ದರೂ ಪಂಪನ ತಾಯಿಯ ತವರೂರಾದ ಅಣ್ಣಿಗೇರಿಯು ಕನ್ನಡದೇಶವೇ ಆದುದರಿಂದ ಪಂಪನಿಗೆ ಮೊದಲಿನಿಂದಲೂ ಕನ್ನಡದೇಶದ ನಿಕಟ ಸಂಬಂಧವಿದ್ದಿರಬೇಕು. ಪಂಪನು ದುಂದುಭಿಗಭೀರನಿನದ, ದುಂದುಭಿಸಂವತ್ಸರೋದ್ಭವ, 'ಕದಳೀಗರ್ಭಶ್ಯಾಮಂ ಮೃದು ಕುಟಿಲ ಶಿರೋರುಹಂ, ಸರೋರುಹವದನಂ ಮೃದು ಮಧ್ಯಮತನು, ಹಿತಮಿತ ಮೃದುವಚನಂ, ಲಲಿತಮಧುರಸುಂದರವೇಷಂ || ವತ್ಸಕುಲತಿಲಕನ್, ಅಭಿಜನ ವತ್ಸಲನ್, ಅಭಿಮಾನಮೂರ್ತಿ, ಕುಕವಿಯಶೋನಿ ರ್ಮತ್ಸರನ್, ಅಮೃತಮಯೋಕ್ತಿ, ಶ ರತ್ನಮಯಸುಧಾಂಶುವಿಶದಕೀರ್ತಿವಿತಾನಂ' ಆತನು ಲಲಿತಾಲಂಕರಣ, ರಸಿಕ, ಶಿಸ್ತುಗಾರ, ಸ್ವಾಭಿಮಾನಿ ಎಂದರೂ ಒಪ್ಪುತ್ತದೆ. ತಾನು ವನಿತಾಕಟಾಕ್ಷಕುವಲಯವನಚಂದ್ರನಾಗಿದ್ದುದನ್ನು, ಕೇರಳವಿಟೀಕಟೀ ಸೂಾರುಣಮಣಿಯಾಗಿದ್ದುದನ್ನು, ಮಲಯ ಮತ್ತು ಆಂಧ್ರ ಯುವತಿಯರು ತನ್ನ ರೂಪಕ್ಕೆ ಮಾರುಹೋಗಿ ತನಗೆ ಅಧೀನರಾಗಿದ್ದುದನ್ನು ಆತನು ನಿಸ್ಸಂಕೋಚವಾಗಿ ಹೇಳಿಕೊಂಡಿದ್ದಾನೆ. ಸ್ತ್ರೀಲಾವಣ್ಯದ ಆಕರ್ಷಣೆಯ ಒಳಗುಟ್ಟು ಆತನಿಗೆ ಗೊತ್ತು. ಆದುದರಿಂದಲೇ ಆತನು ತನ್ನ ಕಾವ್ಯದಲ್ಲಿ 'ಸಾರಂ ಅನಂಗಜಂಗಮಲತಾಲಲಿತಾಂಗಿಯರಿಂದಮಿ ಸಂಸಾರಂ' ಎಂದು ಘೋಷಿಸಿರುವುದು. ಸಂಸಾರಸಾರೋದಯನಾದ ಆತನಿಗೆ ಭೋಗಸಾಮಗ್ರಿಗಳಾದ ಸ್ನಾನ, ಅನುಲೇಪನ, ಪುಷ್ಪಧಾರಣ, ಭೋಜನ, ತಾಂಬೂಲಚರ್ವಣ, ದುಕೂಲಾಚ್ಚಾದನ, ವನವಿಹಾರ, ಜಲಕ್ರೀಡಾದಿ ಸಮಸ್ತ ವಿಷಯಗಳಲ್ಲಿಯೂ ಅತ್ಯತಿಶಯವಾದ ಅನುಭವವೂ ರಸಿಕತೆಯೂ ಇತ್ತೆಂದು ಕಾಣುತ್ತದೆ. ಈ ಅನುಭವದ ವೈಭವವನ್ನು ನೋಡಬೇಕು 'ಆದಿಪುರಾಣದ ಹನ್ನೊಂದನೆಯ ಆಶ್ವಾಸದಲ್ಲಿ ಬರುವ ಭರತ ಚಕ್ರವರ್ತಿಯ ಚೈತ್ರಯಾತ್ರಾ ಸಂದರ್ಭದಲ್ಲಿ, ಆದರೂ ಪಂಪನಿಗೆ ಭೋಗದ ಮಿತಿಯೂ ತ್ಯಾಗದ ಹಿತವೂ ಚೆನ್ನಾಗಿ ತಿಳಿದಿತ್ತು. ಧರ್ಮಾರ್ಥಕಾಮಗಳ ಇತಿಮಿತಿಯು ಸ್ಪಷ್ಟವಾಗಿತ್ತು. ಅದನ್ನೇ ಅವನು ಮುಂದಿನ ಪದ್ಯಭಾಗದಲ್ಲಿ ವಿಶದಪಡಿಸಿದ್ದಾನೆ. ಧರ್ಮ೦ ಪ್ರಧಾನಂ, ಅರ್ಥ ಧರ್ಮಾಂಘ್ರಪಥಳಂ, ಅವರ್ಕ ರಸಮದು ಕಾಮಂ | ಪಂಪನ ಬಾಲ್ಯದ ವಿವರಗಳೇನೂ ತಿಳಿದಿಲ್ಲ. ಈತನ ವಿದ್ಯಾಭ್ಯಾಸವು ಸರ್ವತೋಮುಖವಾಗಿರಬೇಕು. ರಾಮಾಯಣ, ಮಹಾಭಾರತ, ಮತ್ತು ಜೈನಧರ್ಮ

Loading...

Page Navigation
1 ... 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75 76 77 78 79 80 81 82 83 84 85 86 87 88 89 90 91 92 93 94 95 96 97 98 99 100 101 102 ... 792