Book Title: Vikramarjuna Vijayam
Author(s): Pampa
Publisher: Kannada Sahitya Parishattu

View full book text
Previous | Next

Page 16
________________ ಉಪೋದ್ಘಾತ | ೧೧. ವಜ್ರಜಂಘರಿಬ್ಬರನ್ನೂ ಬೆನ್ನಟ್ಟಿ ಬರುತ್ತದೆ. ಇಬ್ಬರೂ ಪರಸ್ಪರ ಸಮಾಗಮಕ್ಕೆ ಹಾತೊರೆಯುತ್ತಾರೆ. ಶ್ರೀಮತಿಯು ತನ್ನ ಹಿಂದಿನ ಜನ್ಮದ ನೆನಪುಗಳನ್ನೆಲ್ಲ ಚಿತ್ರಿಸಿದ್ದ ಚಿತ್ರಪಟದ ಸಹಾಯದಿಂದ ಅವಳ ಸಖಿಯಾದ ಪಂಡಿತೆಯೆಂಬುವಳು ಅವರಿಬ್ಬರನ್ನೂ ಒಟ್ಟುಗೂಡಿಸುತ್ತಾಳೆ. ತಂದೆಯಾದ ವಜ್ರದಂತನು ಮಗಳ ವಿವಾಹವನ್ನು ಅತಿ ವಿಜೃಂಭಣೆಯಿಂದ (ಈ ವಿವಾಹದ ವೈಭವವನ್ನು ಮೂಲದಲ್ಲಿಯೇ ಓದಿ ತೃಪ್ತಿಪಡಬೇಕು). ನಡೆಸಿ ಮಗಳನ್ನು ಅಳಿಯನೊಡನೆ ಕಳುಹಿಸುತ್ತಾನೆ. ಇಲ್ಲಿ ಪಂಪನಿಗೆ ಮಹಾಕವಿ ಕಾಳಿದಾಸನ ಶಾಕುಂತಲದ ನಾಲ್ಕನೆಯ ಅಂಕದ ನಾಲ್ಕು ಶ್ಲೋಕಗಳು ಸ್ಮರಣೆಗೆ ಬರುವುವು. ಅವುಗಳಲ್ಲಿ ಒಂದೆರಡರ ಸಾರವನ್ನು ಬಟ್ಟಿಯಿಳಿಸಿದ್ದಾನೆ. ರಾಜಾಧಿರಾಜನಾದ ವಜ್ರದಂತನು ಅಳಿಯನ ಮೊಗವನ್ನು ನೋಡಿ ಬಗೆದುಂ ನಿನ್ನನ್ವವಾಯೋನ್ನತಿಯನ್, ಇವಳ ಸ್ನೇಹಸಂಬಂಧಮಂ ನೀಂ ಬಗೆದು, ಸಂದಮ್ಮನಣಂ ಬಗದುಮಳೆಯದೇನಾನುಮೆಂದಾಗಳುಂ ಮೆ ಲ್ಯಗೆ ನೀಂ ಕಳ್ಳಿಪುದಮ್ಮ ನನೆದೆರ್ದೆಗಿಡದಂತಾಗೆ ಪಾಲಿಪುದಿಂತೀ ಮೃಗಶಾಪೇಕ್ಷಾಕ್ಷಿಯಂ ಮನ್ನಿಸುವುದಿನಿತನಾಂ ಬೇಡಿದೆಂ ವಜ್ರಜಂಘಾ || ಎಂದೂ ಲಕ್ಷೀಮತಿಮಹಾದೇವಿಯು ಪ್ರಿಯಾತ್ಮಜೆಯ ಮುಖವನ್ನು ಅತಿಪ್ರೀತಿಯಿಂದ ನೋಡಿ ಮನಮಣಿದಂಜಿ ಬೆರ್ಚಿ ಬೆಸಕೆಯ್, ನಿಜವಲ್ಲಭನೇನನೆಂದೊಡಂ , ಕಿನಿಸದಿರ್, ಒಂದಿದಗ್ರಮಹಿಷೇಪದದಲ್ಲಿ ಸದಸ್ಯೆಯಾಗು, ನಂ ದನರನಗಣ್ಯಪುಣ್ಯಧನರಂ ಪಡೆಯೆಂದಮರ್ದಪ್ತಿಕೊಂಡು ತ ತನುಜೆಯಗಲೆಯೊಳ್ ನಗಪಿದರ್, ಬಸಮಗ್ಗದ ಬಾಷ್ಪವಾರಿಯಂ || ಅಲ್ಲದೆ ಅನಂತ ಸಾಮಂತಾಂತಃಪುರಪರಿವಾರದೊಡನೆ ಕೂಡಿ ಅವರನ್ನು ಸ್ವಲ್ಪ .. ದೂರ ಕಳುಹಿಸಿ ಬರುವ ಸಂದರ್ಭದಲ್ಲಿ ಪೊಡವಡುವಪ್ಪಿಕೊಳ್ಳ, ನೆನೆಯುತ್ತಿರಿಮೆಂಬ, ಸಮಸ್ತವಸ್ತುವಂ ಕುಡುವ, ಪಲರ್ಮೆಯಿಂ ಪರಸಿ ಸೇಸೆಯನಿಕುವ, ಬುದಿವೇಂ ಕೆ. ಯೆಡೆ ನಿಮಗೆಂದೊಡಂಬಡಿಪ, ನರಗಿಗೆ ಕಣ್ಣನೀರ್ಗಳಂ | ಮಿಡಿವ ಬಹುಪ್ರಕಾರಜನಸಂಕಟಮೊಪ್ಪಿದುದಾ ಪ್ರಯಾಣದೊಳ್ ಶ್ರೀಮತಿವಜ್ರಜಂಘರು ತಮ್ಮೂರನ್ನು ಸೇರಿದರು. ಅತಿವೈಭವದಿಂದ ಅನೇಕ ಸಮಸ್ತ ಭೋಗಗಳನ್ನು ಅನುಭವಿಸಿದರು. ಹೀಗಿರುವಲ್ಲಿ ಒಂದು ದಿನ ರಾತ್ರಿ ಶಯ್ಯಾಗೃಹದಲ್ಲಿ ಈ ದಂಪತಿಗಳು ಮಲಗಿರುವಾಗ ಸೆಜ್ಜೆವಳನು ಕೇಶಸಂಸ್ಕಾರಕ್ಕೆಂದು ಧೂಪಗುಂಡಿಗೆಯಲ್ಲಿ ಅಳವರಿಯದೆ ವಾಸನಾದ್ರವ್ಯವನ್ನಿಕ್ಕಿ ಆ ಸೆಜ್ಜೆವನೆಯ ಗವಾಕ್ಷಜಾಲಗಳನ್ನು ತೆರೆದಿಡಲು ಮರೆತುಬಿಟ್ಟನು. ಇದರ ಹೊಗೆ ಸುತ್ತಿ ಶ್ರೀಮತಿ ವಜ್ರಜಂಘರು ಪ್ರಾಣ ಬಿಟ್ಟರು. ಮೊದಲೊಳ್ ನೀಳ್ಳು ಪೊದಟ್ಟು ಪರ್ವಿ ಪದಪಂ ಕೈಕೊಂಡು ಮಂದೈಸಿ ಮಾ ಇದೆ ತನ್ನಂದದೊಳೇಳೆಗುಂದದೆ ನಿರುದ್ಯೋಚ್ಛಾಸಮಪ್ಪನ್ನೆಗಂ ಪುದಿನಾ ದಂಪತಿಯ ಪುದುಂಗೊಳಿಸಿ, ಲೋಕಾಶರ್ಯಮಂ ಮಾಡಿ ಕೊಂ ದುದು ಕೃಷ್ಣಾಗರುಢಪಧಮನಿವಹಂ ಕೃಷ್ಕರಗಂ ಕೊಲ್ವವೊಲ್ |

Loading...

Page Navigation
1 ... 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75 76 77 78 79 80 81 82 83 84 85 86 87 88 89 90 91 92 93 94 95 96 97 98 99 100 101 102 103 104 105 106 107 108 109 110 111 112 113 114 115 116 117 118 119 120 121 122 123 124 125 126 127 128 129 130 131 132 133 134 135 136 137 138 139 140 141 142 143 144 145 146 147 148 149 150 151 152 153 154 155 156 157 158 159 160 161 162 ... 792