SearchBrowseAboutContactDonate
Page Preview
Page 665
Loading...
Download File
Download File
Page Text
________________ ೬೬೦) ಪಂಪಭಾರತಂ ವಗ ಎಂದು ನೊಂದು ನುಡಿದ ದುರ್ಯೋಧನನಂ ಸಂಜಯನಿಂತೆಂದಂಶಾll ಕೊಟ್ಟೆ ಕಿರ್ಚನುದಗ್ರಶೋಕಶಿಖಿಯಿಂ ಕಣ್ಣೀರ್ಗಳಿಂದಯ್ದೆ ನೀ ರ್ಗೋಟೆ. ಸೂರ್ಯಸುತಂಗೆ ಲೌಕಿಕಮನೇನಿಂ ದಾಂಟಿದೆ ಪೋಜು ನೀ || ಟ್ವೆಟ್ಟಿಂ ವೈರಿಯನೊಡ್ಡಿ ತತ್ತಿಶಿತದಿಂದಾತಂಗೆ ನೀಂ ಕೂರ್ಪೊಡೇ ಗೆಟ್ಟನ್ನಡೆ ಮಾಡು ತದ್ದಿಜಗಣಕ್ಕಾಹಾರಮಂ ಭೂಪತೀ || ೬೧ ವ|| ಎಂದು ಪೆರ್ಚದ ಶೋಕರಸಮಂ ಕೋಪರಸದ ಮೇಲಿಕ್ಕಿ ಭೀಷಂ ಶರಶಯನ ತಳವಿಗತನಾಗಿರ್ದಲ್ಲಿವರಮೆಂತಾನುಮೊಡಗೊಂಡು ಬಂದಾಗಳ್ಚಂ!! ಇಡಿದಿರೆ ರೋಮ ಕೂಪದೊಳಗುರ್ಚಿದ ಸಾಲ ಸರಳುಂ ತೇಜಂ ಬಡಿದರೆ ಬೆಟ್ಟುವೊರ್ಗುಡಿಸಿದಂತೆ ನೆರೆ ಸುಯ್ಯ ಪುಳಿಂ | ಬಡನಡುವಂ ಶರಾಳಿಭಯದಿಂ ನಡುಪಂತಿರೆ ಚಿತ್ತದೊಳ್ ಮೃಡಂ ತೊಡರ್ದಿರೆ ಬಿದ್ದಿದೇನೆಸೆದನೋ ಶರಶಯ್ಕೆಯೊಳಂದು ಸಿಂಧುಜಂ || ೬೨ ಹರನೊಳೆ ಪತಿ ತೆತ್ತಿಸಿದ ಚಿತ್ತಮನಿರ್ಬಗಿಯಾಗೆ ಮೋಹವೂ ತರಿಸಿ ಸುಯೋಧನಂಗೆ ರಣಭೂಮಿಯೊಳೆಂತುಟವಸ್ಥೆಯೋ ಕನ || ಲ್ಕುರಿದಪುದೆನ್ನ ಮೆಯ್ಕೆನುತುಮತ್ತಣ ಪಂಬಲ ಬಂಬಲೊಳ್ ತೆಂ ದಿರಿದುದು ಚಿತ್ರಮಾ ದೊರೆಯ ಯೋಗಿಗಮಿಂತುಂಟೆ ಮೋಹಮಾಗದೇ l೬೩ ಅವನನ್ನು ಚಿತೆಯ ಬೆಂಕಿಯಿಂದ ಸುಟ್ಟಿಲ್ಲ: ಹೀಗೆ ಕರ್ಣನಲ್ಲಿ ಎದೆಸೋಂಕಿ ಪ್ರೀತಿಯಿಂದ ಇರುವವನು ದುರ್ಯೊಧನನ ಹಾಗೆ ಬೇರೆಯಾದವನು ಉಂಟೆ ? ವರ ಎಂದು ದುಃಖಿಸಿ ಆಡಿದ ದುರ್ಯೋಧನನಿಗೆ ಸಂಜಯನು ಹೀಗೆ ಹೇಳಿದನು - ೬೧. ತೀವ್ರವಾದ ಶೋಕಾಗ್ನಿಯಿಂದ ಚಿತಾಗ್ನಿಯನ್ನು ಕೊಟ್ಟಿದ್ದೀಯೆ. ಕಣ್ಣೀರುಗಳಿಂದ ಸಂಪೂರ್ಣವಾಗಿ ತರ್ಪಣವನ್ನು ಕೊಟ್ಟಿದ್ದೀಯೆ. ಲೋಕವ್ಯವಹಾರದಲ್ಲಿ ಏನನ್ನು ದಾಟಿದ್ದೀಯೆ ? ಶತ್ರುವನ್ನು ಹೋಳುಮಾಡಿ ಸೀಳಿ ರಾಶಿಹಾಕಿ ಆ ಮಾಂಸದಿಂದಕರ್ಣನನ್ನು ನೀನು ಪ್ರೀತಿಸುವುದಾದರೆ ಆ ಪಕ್ಷಿಸಮೂಹಕ್ಕೆ (ಹದ್ದುಗಳಿಗೆ) ಆಹಾರವನ್ನು ಮಾಡು. ನಷ್ಟವಾದುದೇನು ? ಇನ್ನು ಮುಂದೆ ನಡೆ, ವ! ಎಂದು ಹೇಳಿ ಹೆಚ್ಚಾದ ಶೋಕರಸವನ್ನೂ ಮೀರಿ ಕೋಪರಸವು ಹೆಚ್ಚುತ್ತಿರಲು ಭೀಷ್ಮನು ಬಾಣದ ಹಾಸಿಗೆಯಲ್ಲಿ ಮಲಗಿದ್ದ ಸ್ಥಳದವರೆಗೆ ಹೇಗೋ ಜೊತೆಯಲ್ಲಿ ಕರೆದುಕೊಂಡು ಹೋದನು. ೬೨. ಕೂದಲಿನ ಒಂದೊಂದು ಹಳ್ಳ(ಕುಳಿ)ಗಳಲ್ಲಿಯೂ ಸಾಲವೃಕ್ಷದಿಂದ ಮಾಡಿದ ಬಾಣಗಳು ನಾಟಿಕೊಂಡು ದಟ್ಟವಾಗಿ ತುಂಬಿರಲು ನಾನಾರೀತಿಯಾಗಿ ಪರ್ವತಗಳುರುಳಿದಂತೆ ಬಿದ್ದು ನಿಶ್ಲೇಷ್ಟನಾಗಿ ಸ್ಪಂದನವಾಗುತ್ತಿರುವ (ದುಡಿಯುತ್ತಿರುವ) ಹುಣ್ಣುಗಳಿಂದಲೂ ಬಾಣಗಳ ನೋವಿನಿಂದಲೂ ಬಡವಾಗಿರುವ ಸೊಂಟವನ್ನು ನಡುಗಿಸುತ್ತ ಮನಸ್ಸಿನಲ್ಲಿ ಶಿವನನ್ನು ಧ್ಯಾನಿಸುತ್ತ ಭೀಷ್ಮನು ಬಾಣದ ಹಾಸಿಗೆಯಲ್ಲಿ ಮಲಗಿ ಅತ್ಯಂತ ಶೋಭಾಯಮಾನನಾಗಿದ್ದನು. ೬೩. ಈಶ್ವರನಲ್ಲಿ ಸೇರಿಕೊಂಡಂತಿದ್ದ ಮನಸ್ಸನ್ನು ಮೋಹವು ಎರಡು ಭಾಗವಾಗಿ ಮಾಡಲು ದುರ್ಯೋಧನನಿಗೆ ಯುದ್ಧ ರಂಗದಲ್ಲಿ ಇಂತಹ ಅವಸ್ಥೆಯಾಯಿತೇ! ನನ್ನ ಶರೀರವು ಕೆಂಡದಂತೆ ಹೊಳೆದು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy