SearchBrowseAboutContactDonate
Page Preview
Page 664
Loading...
Download File
Download File
Page Text
________________ ತ್ರಯೋದಶಾಶ್ವಾಸಂ | ೬೫೯ ಚoll ನರಶರಘಾತದಿಂ ಪಳೆದು ಪತ್ತಿಸಿದಂತೆವೊಲಿರ್ದ ಮಯ್ ಭಯಂ ಕರತರಮಾಗೆ ಮುಯ್ಯುವರೆಗಂ ತೆಗೆದಂಬಿನ ಮುಷ್ಟಿ ಬಿನ್ನಣಂ | ಚಿರಸಿರೆ ಪೊದ ಪಂದಲೆಯೋಳಾದ ಮುಗುಳ್ಳಗೆ ಭೀತರಾದರೆ ಇರುಮನಳುರ್ಕೆಯಿಂ ನಗುವವೋಲ್ ರವಿನಂದನನಿತ್ತಲಿರ್ದಪಂ || ೫೮ ವ|| ಎಂಬುದುಮಾಗಳ್ ತಪ್ಪತ್ತುಮಲ್ಲಿದನೆತ್ತಣನೆಂದು ಕರ್ಣನ ಕಳೇವರಮಂ ನೋಡಿ ನೋಡಲಾಳದ ಕಣ್ಣಳಂ ಮುಟ್ಟಿ ಮೂರ್ಛವೊಗಲ್ ಬಗೆದನಂ ಸಂಜಯ ತಬ್ಬಿಸಿಕೊಂಡಾಗ ಚೇತರಿಸಿ ಕೂರ್ಮ ಕೆಯಿಕ್ಕು ಬರೆ ಸೈರಿಸಲಾಗಿದೆಚಂ ಬೆಸನಡೆಗಳ ತೊಟ್ಟುಬೆಸನಂಗಳವುಂಕಿದೊಡಾಗದೆಂದು ಬ. ಗ್ಲಿಸುವೆಡೆಗಾಳನಿಂತು ನೆಗಳಿಂಬೆಡೆಯೊಳ್ ಗುರು ಪೆರ್ಚದೊಂದು ಬೇ | ವಸದೆಡೆಗಾಶ್ರಯಂ ಮನಮನೊಪ್ಪಿಸುವೀಯೆಡೆಯೊಳ್ ಮನಂ ವಿಚಾ. ರಿಸುವೊಡೆ ಕರ್ಣನಲ್ಲದನಗಾವಡೆಗಂ ಪಜನೊರ್ವನಾವನೋ | ೫೯ ಮ! ನೆಲನಂ ಕೊಟ್ಟನಿನಾತ್ಮಜಾತನನಗಾಂ ತಕ್ಕೂರ್ಮೆಯಿಂದಂ ಜಳಾಂ ಜಲಿಯಂ ಕೊಟ್ಟೆನುಮಿಲ್ಲ ಸೂರ್ಯತನಯಂ ತೇಜೋಗ್ನಿಯಿಂದಂ ದ್ವಿಷ | ದೃಲಮಂ ಸುಟ್ಟನುದಾತ್ತಪುಣ್ಯನವನಂ ಚೈತಾಗ್ನಿಯಿಂ ಸುಟ್ಟೆನಿ ಶ್ಲೋಲವಿಂದಿಂತರ್ದಮುಟ್ಟಿ ಕೂರ್ತನೊಳನೇ ಕರ್ಣಂಗೆ ದುರ್ಯೊಧನಂ || ೬೦ ೫೮. ಅರ್ಜುನನ ಬಾಣದ ಪೆಟ್ಟಿನಿಂದ ಹರಿದು ಹಂಚಿದ ಹಾಗಿರುವ ಶರೀರ, ಅತ್ಯಂತ ಭಯಂಕರವಾಗಿರಲು ಹೆಗಲ ತುದಿಯವರೆಗೂ ಸೆಳೆದ ಬಾಣ ಹಿಡಿದ ಮುಷ್ಟಿ, ಕೌಶಲದಿಂದ ಕೂಡಿರಲು ಕತ್ತರಿಸಿಹೋದ ಹಸಿಯ ತಲೆಯಲ್ಲಿ ಕಾಣಿಸುತ್ತಿರುವ ಮುಗುಳಗೆ, ಇವುಗಳಿಂದ ಕೂಡಿ ಹೆದರಿ ಕೊಂಡಿರುವವರನ್ನೆಲ್ಲ ಅತಿಶಯವಾದ ರೀತಿಯಲ್ಲಿ ನಗುತ್ತಿರುವ ಹಾಗೆ ಸೂರ್ಯಪುತ್ರನಾದ ಕರ್ಣನು ಈ ಕಡೆ ಇದ್ದಾನೆ. ವ|| ಎನ್ನಲು ಆಗಲೆ ಚೇತರಿಸಿಕೊಂಡು ಎಲ್ಲಿದ್ದಾನೆ ಯಾವ ಕಡೆ ಎಂದು ಕರ್ಣನ ಶರೀರವನ್ನು ನೋಡಿ ನೋಡಲಾರದೆ ಕಣ್ಣುಗಳನ್ನು ಮುಚ್ಚಿಕೊಂಡು ಮೂರ್ಛಿತನಾದವನನ್ನು ಸಂಜಯನು ತಬ್ಬಿಕೊಳ್ಳಲು ಚೇತರಿಸಿಕೊಂಡು ಪ್ರೀತಿಯು (ಸ್ನೇಹವು) ಕೈಮೀರಿ ಬರುತ್ತಿರಲು ಅದನ್ನು ಸೈರಿಸಲಾರದವನಾದನು. ೫೯. ಕಾರ್ಯಮಾಡುವ ಸಂದರ್ಭದಲ್ಲಿ ಸೇವಕನಂತೆಯೂ ವ್ಯಸನಗಳು ಮೇಲೆ ಮೇಲೆ ಒತ್ತಿ ಬರುತ್ತಿರಲು ಇದಾಗುವುದಿಲ್ಲ ಎಂದು ಬೆದರಿಸುವ ಸಮಯದಲ್ಲಿ ಯಜಮಾನನಂತೆಯೂ (ಸ್ವಾಮಿ-ಒಡೆಯ) ಹೀಗೆ ಮಾಡು ಎನ್ನುವ ಸಮಯದಲ್ಲಿ ಗುರುವಿನಂತೆಯೂ; ಅಧಿಕವಾದ ವ್ಯಥೆಯುಂಟಾದಾಗ ಅವಲಂಬನದಂತೆಯೂ ಮನಸ್ಸನ್ನೊಪ್ಪಿಸುವ ಸಂದರ್ಭದಲ್ಲಿ ಮನಸ್ಸೇ ಆಗಿಯೂ ಇದ್ದಂಥ ಕರ್ಣನನ್ನು ಬಿಟ್ಟು ನನಗೆ ಎಲ್ಲ ಸಮಯಕ್ಕೂ ಸಹಾಯಕನಾಗುವ ಮತ್ತೊಬ್ಬನಾವನಿದ್ದಾನೆ? ೬೦. ಕರ್ಣನು ನನಗೆ (ಭೂಮಿಯನ್ನು) ರಾಜ್ಯವನ್ನೇ ಸಂಪಾದಿಸಿ ಕೊಟ್ಟನು. ನಾನು ಅದಕ್ಕನುಗುಣವಾಗಿ ಪ್ರೀತಿಯಿಂದ ಅವನಿಗೆ ತರ್ಪಣವನ್ನು ಕೊಟ್ಟಿಲ್ಲ. ಸೂರ್ಯನ ಮಗನಾದ ಕರ್ಣನು ತನ್ನ ತೇಜಸ್ಸೆಂಬ ಅಗ್ನಿಯಿಂದ ವೈರಿಸೈನ್ಯವನ್ನು ಸುಟ್ಟನು. ಬಹಳ ಪುಣ್ಯಶಾಲಿಯಾದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy