SearchBrowseAboutContactDonate
Page Preview
Page 666
Loading...
Download File
Download File
Page Text
________________ ತ್ರಯೋದಶಾಶ್ವಾಸಂ | ೬೬೧ ವಗ ಎಂಬನ್ನೆಗಮವರಿರ್ವರ ಕಾಲ ಸೊಪ್ಪುಳನಾಲಿಸಿ ಸುರನದೀನಂದನಂ ಪೇಟೆಮಾ ಬಂದರಾರೆಂದನೇಕ ವ್ರಣವೇದನಾಪರವಶಶರೀರಂ ಬೆಸಗೊಳುದುಂ ಸಂಜಯಂ ಕುರುಪಿತಾ ಮಹನ ಕರ್ಣಪಾಂತಮಂ ಸಾರ್ದು ಕುರುಕುಳಗಗನಮೃಗಧರಂ ಬಂದನೆಂದು ಬಿನ್ನಪಂ ಗೆಲ್ಲುದುಂ ಯೋಗಾಭ್ಯಾಸದೊಳರೆಮುಗುಳ ರಕ್ತಾಂಭೋಜದಳ ವಿಳಾಸೋಪಹಾಸಿಗಳಪ್ಪ ಕಣ್ಣಳನೊತ್ತಂಬದಿಂ ತೆನೆದುಚಂti ಎಣಗಿದ ಕೌರವೇಶ್ವರನೊಳಾದಮಿದಿರ್ಚಿದಲಂಪಲರ್ಚಿದ ಬೈಜಿನೊಳಕೊಬ್ಬಿನಂ ಪರಸಿ ಮೆಯ್ಯೋಳೆ ಬಂದ ತೆಕ್ಕೆ ಮಯ್ ಕರಂ || ಮುಗಿಪುದಿಂತು ಪೇಮ್ ಮಗನೆ ಬೆಳೊಡೆಯೆಲ್ಲಿದುದತ್ತ ಪೋಯ್ತು ಸು ತಿಳಿದ ಚತುರ್ಬಲಂ ನಿನಗಮಾಯಿರವಾದುದೆ ವೈರಿಭೂಪರಿಂ || ೬೪ ವ|| ಎಂದು ಕಣ್ಣ ನೀರಂ ನೆಗಪಿ ನಿನ್ನ ಬಂದ ಬರವೇ ಸಮರವೃತ್ತಾಂತವನಜೆಪಿ ದಪ್ಪುದಿಂ ನಿನ್ನ ಗೆದ್ದ ನಿಯೋಗಮಾವುದೇಗೆಯ್ಯಲ್ ಬಗೆದಷೆಯೆನೆಚಂ|| ಬಗೆ ಪತುಂಟೆ ವೈರಿನೃಪರಂ ತಲೆದೂಟ್ಟುವುದಲ್ಲದೆಂತುಮಿ | ಲಿಗೆ ಬರವಂ ಭವತ್ವದಸರೋಜವನಾಂ ಬಲಗೊಂಡು ಮತ್ತಮಾ || ಜಿಗೆ ನಡೆಯಲೆ ಬಂದೆನೆನೆ ದೇವನದೀಸುತನಾತ್ಮಚಿತ್ತದೊಳ್ || ಬಗೆದನಿದೇನಖಂಡಿತಮೊ ಶೌರ್ಯಗುಣೋನ್ನತಿ ರಾಜರಾಜನಾ || ೬೫ ಉರಿಯುತ್ತಿದೆಯಲ್ಲಾ ಎಂದು ಹೇಳುತ್ತ ಆ ಕಡೆಯ ಹಂಬಲದ ಆಧಿಕ್ಯದಿಂದ ಮನಸ್ಸು ನಾನಾ ರೀತಿಯಾಗಿ ಅಲೆದಾಡಿತು. ಅಂತಹ ಯೋಗ್ಯತೆಯನ್ನುಳ್ಳ ಯೋಗಿಗೂ ಹೀಗೆಯೇ ಮಮತೆ ಉಂಟಾಗುವುದಿಲ್ಲವೇ ? ವರ ಎನ್ನುವಷ್ಟರಲ್ಲಿ ಇಬ್ಬರ ಹೆಜ್ಜೆಯ ಶಬ್ದವನ್ನು ಕೇಳಿ ಅನೇಕ ಗಾಯಗಳ ನೋವಿನಿಂದ ಪರವಶವಾಗಿದ್ದ ಶರೀರವನ್ನುಳ್ಳ ಭೀಷ್ಮನು 'ಈಗ ಬಂದವರು ಯಾರು ಹೇಳಿ' ಎಂದು ಕೇಳಿದನು. ಸಂಜಯನು ಕುರುಪಿತಾಮಹನಾದ ಭೀಷ್ಮನ ಕಿವಿಯ ಹತ್ತಿರಕ್ಕೆ ಹೋಗಿ 'ಕುರುವಂಶವೆಂಬ ಆಕಾಶದ ಚಂದ್ರನಾದ ದುರ್ಯೋಧನನು ಬಂದಿದ್ದಾನೆ' ಎಂದು ವಿಜ್ಞಾಪನೆ ಮಾಡಿದನು. ಭೀಷ್ಕನು ಯೋಗಾಭ್ಯಾಸದಲ್ಲಿ ಅರ್ಧಮುಚ್ಚಿಕೊಂಡಿದ್ದ ಕನೈದಿಲೆಯ ದಳದ ಕಾಂತಿಯನ್ನು ಹಾಸ್ಯಮಾಡುವ ಹಾಗಿದ್ದ ತನ್ನ ಕಣ್ಣುಗಳನ್ನು ಬಲಾತ್ಕಾರದಿಂದ ತೆಗೆದು-೬೪. ತನಗೆ ನಮಸ್ಕಾರ ಮಾಡಿದ ಕೌರವೇಶ್ವರನನ್ನು ಎದುರಿನಲ್ಲಿ ಕಂಡ ಸಂತೋಷವು ಪ್ರೀತಿಯನ್ನು ಅಧಿಕಗೊಳಿಸಲು ಆಶೀರ್ವಾದಮಾಡಿ ನೀನು ಏಕಾಕಿಯಾಗಿ ಬಂದ ಸ್ಥಿತಿಯನ್ನು ನೋಡಿ ನನ್ನ ಮನಸ್ಸು ವಿಶೇಷದುಃಖಪಡುತ್ತಿದೆ. ಮಗು, ಶ್ವೇತಚ್ಛತ್ರಿ ಎಲ್ಲಿ? ಸುತ್ತಲೂ ಬಳಸಿ ಬರುತ್ತಿದ್ದ ಚತುರಂಗಸೈನ್ಯವೆಲ್ಲಿ? ಯಾವ ಕಡೆಗೆ ಹೋಯಿತು. ಶತ್ರುರಾಜರಿಂದ ನಿನಗೂ ಈ ಸ್ಥಿತಿಯುಂಟಾಯಿತೆ? ವll ಎಂದು ಕಣ್ಣೀರನ್ನು ತುಂಬಿಕೊಂಡು ನೀನು ಬಂದಿರುವ ಬರುವಿಕೆಯೇ ಯುದ್ದ ಸಮಾಚಾರವನ್ನು ತಿಳಿಸುತ್ತದೆ. ಇನ್ನು ಮುಂದೇನು ಮಾಡುತ್ತೀಯೆ ? ಹೇಗೆ ಯೋಚಿಸಿದ್ದೀಯೆ ಎಂದು ಕೇಳಿದರು. ೬೫. ದುರ್ಯೋಧನನು ಮತ್ತೇನಜ್ಜ ಶತ್ರುರಾಜರನ್ನು ಕತ್ತರಿಸಿ ರಾಶಿಹಾಕುವುದಲ್ಲದೆ ಬೇರೆ ಯೋಚನೆಯುಂಟೇ? ನಿಮ್ಮ ಪಾದಕಮಲಗಳನ್ನು ಪ್ರದಕ್ಷಿಣೆಮಾಡಿ ಪುನಃ ಯುದ್ಧಕ್ಕೆ ಹೋಗೋಣವೆಂದು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy