SearchBrowseAboutContactDonate
Page Preview
Page 654
Loading...
Download File
Download File
Page Text
________________ ತ್ರಯೋದಶಾಶ್ವಾಸಂ /೬೪೯ ವ|| ಅಂತು ಮುಟ್ಟೆವಂದೋರೋರ್ವರ ರಥದ ಕುದುರೆಯ ಪಲವಿಗೆಯ ಕುಡುಪುಗಳಿನಿವರವರೆಂದಡೆದು ಸಾತ್ಯಕಿ ಕೃತವರ್ಮನೊಳ್ ನಕುಳಂ ಶತಬಿಂದುವಿನ ಮಕ್ಕಳಯ್ಯರೊಳ್ ಸಹದೇವ ಶಕುನಿಯೊಳ್ ಯುಧಾಮನ್ನೂತ್ತಮೌಜಸ‌ ಕೃಪನೊಳ್ ಭೀಮಸೇನಂ ಪರ್ವತರಾಜರೊಳ್ ವಿಕ್ರಮಾರ್ಜುನನಶ್ವತ್ಥಾಮನೊಳ್ ಪಣೆದು ಮಂಡಳ ಭ್ರಾಂತೋದ್ಧಾಂತಸ್ಥಿತಚಕ್ರವೆಂಬ ರಥಯುದ್ಧದೊಳಮಾಲೀಢ ಪ್ರತ್ಯಾಲೀಢ ಸಮಪಾದಂ ಗಳೆಂಬಾಸನಂಗಳೊಳಂ ಪಲವುಂ ಶರಾಸನವಿದ್ಯೆಗಳೊಳತಿ ಪ್ರವೀಣರುಂ ಜಾಣರುಮಾಗಿ ಅಕ್ಕರ || ನದು ನಿರ್ವಾಯಂ ನರುವಾಯಂ ಮುಂ ಮೊನೆ ನೆರಕೆ ನಾರಾಚಂ ತಗರ್ತಲೆಯಂ ನೆನರಿವ ಕಣೆ ಗೆಲೆಯಂಬು ಕಕ್ಕಂಬು ಕೆಲ್ಲಂಬು ಮೊನೆಯಂಬು ತೀವ ಕಣ್ಣಂ | ಪೆಯ ಮುಳಗಂ ಕಣಕೆನೆ ವೋಪಂಬು ಕವಲಂಬುವೆಂಬಂಕದಂಬೆತ್ತಲುಂ ತುಲುಗಿ ನಡುವಿನಂ ಸಾರ್ದು ಸಾರ್ದಚ್ಚೆಚ್ಚು ಕಾದಿದರತಿರಥರೊಂದುಜಾವಂ || &E ವ|| ಅಂತು ಕಾದುವಾಗಳೇಕಾದಶರುದ್ರರೊಳಗೆ ತುತ್ತತುದಿಯ ರುದ್ರನುಂ ರೌದ್ರನು ಮಪ್ಪಶ್ವತ್ಥಾಮನೇವದೊಳ್ ಕಣ್ಣಾಣದೆ ಮಾರ್ಕೊಂಡು ವಿಕ್ರಮಾರ್ಜುನನಂ ದಿವ್ಯಾಸ್ತ್ರಂಗಳಿಂದ ಮೆಚ್ಚು ಕಾದಿ ಗೆಲಲಾವಿದ ಬರುತ್ತಿರುವ ವೇಗದಲ್ಲಿ ಮುಂದಕ್ಕೆ ಚಾಚಿದ ಹಲವು ರಾಜಚಿಹ್ನೆಗಳನ್ನು ಶ್ವೇತಚ್ಛತ್ರಗಳು ಸಂಘಟ್ಟಿಸಿ ಚಂಚಲವಾದ ನವಿಲುಗಳನ್ನುಳ್ಳ ಛತ್ರಿಗಳ ಸಮೂಹದಂತೆ ವಿಶೇಷ ಆಕರ್ಷಣೀಯವಾಗಿದ್ದುವು. ವ|| ಹಾಗೆ ಸಮೀಪಕ್ಕೆ ಬಂದು ಒಬ್ಬೊಬ್ಬರ ರಥದ ಕುದುರೆಯ ಬಾವುಟದ ಗುರುತುಗಳಿಂದ ಇವರು ಅವರು ಎಂದು ಗುರುತಿಸಿ ಸಾತ್ಯಕಿ ಕೃತವರ್ಮನಲ್ಲಿಯೂ ನಕುಳನು ಶತಬಿಂದುವಿನ ಅಯ್ದು ಮಕ್ಕಳಲ್ಲಿಯೂ ಸಹದೇವನು ಶಕುನಿಯಲ್ಲಿಯೂ ಯುಧಾಮನ್ನೂತ್ತಮೌಜಸರು ಕೃಪನಲ್ಲಿಯೂ ಭೀಮಸೇನನು ಪರ್ವತರಾಜರಲ್ಲಿಯೂ ವಿಕ್ರಮಾರ್ಜುನನು ಅಶ್ವತ್ಥಾಮನಲ್ಲಿಯೂ ಹೆಣೆದುಕೊಂಡು ಭ್ರಾಂತ, ಉದ್ಘಾಂತ, ಸ್ಥಿತ, ಚಕ್ರ ಎಂಬ ರಥಯುದ್ಧದಲ್ಲಿಯೂ ಆಲೀಢ, ಪ್ರತ್ಯಾಲೀಢ, ಸಮಪಾದ ಎಂಬ ಆಸನಗಳಲ್ಲಿಯೂ ಇತರ ಅನೇಕ ಬಿಲ್ವಿದ್ಯೆಗಳಲ್ಲಿಯೂ ಅತಿ ಪ್ರವೀಣರೂ ಜಾಣರೂ ಆಗಿ ೩೯, ಕೂಡಿಕೊಂಡು ನಿರ್ವಾಯ, ನರುವಾಯ, ಮುಮೊನೆ, ನೆರಕೆ, ನಾರಾಚ, ತಗರ್ತಲೆ, ಮರ್ಮಸ್ಥಾನವನ್ನು ಭೇದಿಸುವ ಕಣೆಗೆಲೆಯಂಬು, ಕಕ್ಕಂಬು, ಕೆಲ್ಲಂಬು, ಮೊನೆಯಂಬು, ಇವುಗಳು ಕಣ್ಣನ್ನು ತುಂಬಿಕೊಳ್ಳಲು, ಪೇಯಮುಟೆಗಂ, ಕಣಕೆನೆ, ಪೋಪಂಬು, ಕವಲಂಬು ಎಂಬ ಪ್ರಸಿದ್ಧವಾದ ಬಾಣಗಳು ಎಲ್ಲಕಡೆಯಲ್ಲಿಯೂ ನುಗ್ಗಿ ಹೋಗಿ ನಾಟಿಕೊಳ್ಳುವ ಹಾಗೆ ನೋಡಿನೋಡಿ ಹೊಡೆದು ಹೊಡೆದು ಅತಿರಥರು ಒಂದು ಜಾವದ ಕಾಲ ಕಾದಿದರು. ವ ಹಾಗೆ ಯುದ್ಧ ಮಾಡುವಾಗ ಹನ್ನೊಂದು ಜನ ರುದ್ರರೊಳಗೆ ಕಟ್ಟಕಡೆಯವನೂ ಭಯಂಕರನೂ ಆದ ಅಶ್ವತ್ಥಾಮನು ಕೋಪದಿಂದ ಕುರುಡನಾಗಿ ಪ್ರತಿಭಟಿಸಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy