________________
೬೫೦ | ಪಂಪಭಾರತಂ ಕಂತನ್ನ ದೊಣೆಯಂಬುಗಳ್ ತವು
ವನ್ನೆಗಮೆಚ್ಚಂಬು ತಪ್ಪೋಡಭಿವಾದಯನ | ನೆನಗೆ ಪದನಿದಂದು ಕ ರಂ ನಗೆ ಸುರರರಿಗನಿದಿರ್ಗ ತೊಲಗಿದನಾಗಳ್ || ದಾವಶಿಖಿ ಶಿಖೆಯನಿಚಿಪುದಿ ದಾವ ಸರಳ್ ಪೇಟಿಮೆನಿಪ ಸರಲಿಂ ತಂದಂ | ದೇವರ ಪಡೆ ರಾಗಿಸೆ ಮನ ದೇವದಿನವಯವದ ಶಕುನಿಯಂ ಸಹದೇವ |
ವ|| ಅಂತು ಶಕುನಿಯಂ ತಳೆವುದುಮಿತ್ತತಿರಭುಕ್ತಿ ವಿಷಯಾಧೀಶರಪ್ಪ ಶತಬಿಂದುವಿನ ಮಕ್ಕಳಪ್ಪಯ್ರಂ ಗಾಳಿಗೊಡ್ಡಿದ ಪುಲ್ಲ ಬಿಂದುಗಳಂತ ನಕುಲಂ ನೆಲಕ್ಕೆ ಸೋವತಂ ಮಾಡಿದನಿತ್ತ ವಿಂಧ್ಯ ಮಳಯ ಹಿಮವನ್ನಿವಾಸಿಗಳಪ್ಪ ಪರ್ವತರಾಜರುಮಂ ಭೀಮಸೇನನಂತಕಾನನಮನೆಯ್ದಿಸಿದಂ ಯುಧಾಮನ್ನೂತ್ತಮೌಜಸರ್ ಗೆಲೆ ಕಾದಿ ಕೃಪನನುಪಗತಪರಿಶ್ರಮನವಿ ಮಾಡಿದರಾಗಳ ಮೆಯ್ಕೆರ್ಚಿ ಬಂದು ಪಣದ ಭೀಮ ನಕುಲ ಸಹದೇವರುಮಂ ಶಂ ವಿರಥರ್ಮಾಡಿ ಹಿಡಿದು ಕೊಂಡು ಫುಲ್ಲ ಸೂಡನಿಡಾಡುವಂತೆ ತನ್ನಳಿಯಂದಿರಿರ್ವರುಮನೀಡಾಡಿ ಭೀಮನಂ ಪೂಣರ್ದು ನೆಲಕ್ಕಿಕ್ಕಿ ಬೆನ್ನಂ ಮಟ್ಟ ದಾಂಟುವ ಮದಗಜದಂತೆ ಕೊಲಲೊಲ್ಲದ ದಾಂಟಿದಾಗ ದುರ್ಯೋಧನನಲಲ್ಲು ಕಾಣದೆಯ್ವಂದಶ್ವತ್ಥಾಮ ಮದ್ರರಾಜ ಕೃಪಕೃತವರ್ಮರನಿಂತೆಂದಂ
ವಿಕ್ರಮಾರ್ಜುನನನ್ನು ದಿವ್ಯಾಸ್ತಗಳಿಂದ ಹೊಡೆದು ಕಾದಿ ಗೆಲ್ಲಲಾರದೆ -೪೦. ತನ್ನ ಬತ್ತಳಿಕೆಯ ಬಾಣಗಳು ಮುಗಿಯುವವರೆಗೂ ಹೊಡೆದು ತೀರಿಹೋಗಲು ಇನ್ನು ಅಭಿವಾದಯೆ (ನಮಸ್ಕರಿಸುತ್ತೇನೆ) ಎನ್ನಲು ಇದು ಸಮಯವೆಂದು - ದೇವತೆಗಳೆಲ್ಲ ನಗುತ್ತಿರಲು ಅರ್ಜುನನೆದುರಿಗೆ ಆಗ ಹೊರಟು ಹೋದನು. ೪೧. ದಾವಾಗ್ನಿಯನ್ನೂ ಕೀಳುಮಾಡುತ್ತಿರುವ ಈ ಬಾಣವು ಯಾವುದು ಹೇಳಿ ಎನ್ನುವ ಬಾಣದಿಂದ ದೇವರ ಸಮೂಹವು ಸಂತೋಷಪಡುತ್ತಿರಲು ಮನಸ್ಸಿನ ಕೋಪದಿಂದ ಸಹದೇವನು ಶಕುನಿಯನ್ನು ಕತ್ತರಿಸಿದನು. ವ! ಈ ಕಡೆ ಅತಿರಭುಕ್ತಿಯೆಂಬ ದೇಶದ ರಾಜರಾದ ಶತಬಿಂದುವಿನ ಅಯ್ತುಮಕ್ಕಳನ್ನೂ ನಕುಲನು ಗಾಳಿಗೆ ಒಡ್ಡಿದ ಹುಲ್ಲಿನ ಮೇಲಿನ ಜಲಬಿಂದುಗಳಂತೆ ಭೂಮಿಗೆ ಬಲಿಕೊಟ್ಟನು. ಈ ಕಡೆ ವಿಂಧ್ಯ, ಮಳಯ, ಹಿಮವತ್ಪರ್ವತನಿವಾಸಿಗಳಾದ ಪರ್ವತರಾಜರುಗಳನ್ನು ಭೀಮನು ಯಮನ ಬಾಯನ್ನು ಸೇರಿಸಿದನು. ಯುಧಾಮನ್ಯೂತ್ತಮೌಜಸರು ಗೆಲ್ಲುವ ಹಾಗೆ ಯುದ್ಧಮಾಡಿ ಕೃಪನನ್ನು ನಷ್ಟಪರಾಕ್ರಮವನ್ನಾಗಿ ಮಾಡಿದರು. ಆಗ ಮೆಯ್ಯುಬ್ಬಿ ಹೆಣೆದುಕೊಂಡು ಒಟ್ಟಾಗಿ ಬಂದ ಭೀಮನಕುಳಸಹದೇವರನ್ನು ಶಲ್ಯನು ರಥವಿಲ್ಲದವರನ್ನಾಗಿ ಮಾಡಿ ಹಿಡಿದುಕೊಂಡು ಹುಲ್ಲಿನ ಕಂತೆಯನ್ನು ಎಸೆಯುವಂತೆ ತನ್ನಳಿಯಂದಿರನ್ನು ಎಸೆದು ಭೀಮನೊಡನೆ ಹೆಣಗಿ ಅವನನ್ನು ನೆಲಕ್ಕಿಕ್ಕಿ ಬೆನ್ನನ್ನು ತುಳಿದು ದಾಟುವ ಮದ್ದಾನೆಯಂತೆ ಕೊಲ್ಲಲು ಇಷ್ಟಪಡದೆ ದಾಟಿದನು. ಆಗ ದುರ್ಯೋಧನನು ದುಃಖಪಟ್ಟು ಕಣ್ಣಾಣದೆ ಸಮೀಪಕ್ಕೆ ಬಂದ ಅಶ್ವತ್ಥಾಮ ಕೃಪ ಕೃತವರ್ಮರನ್ನು ಕುರಿತು ಹೀಗೆಂದನು.