SearchBrowseAboutContactDonate
Page Preview
Page 653
Loading...
Download File
Download File
Page Text
________________ ೬೪೮) ಪಂಪಭಾರತಂ ಕರಿ ಮಕರಾಹತಹತಿಯಿಂ ಬರಿದಳಜುವ ಭೈತ್ರದಂತೆ ವಿವಿಧಾಯುಧ ದಂ | ತುರಿತಂಗಳಚಿದುವಾ ಸಂ ಗರ ಜಳನಿಧಿಯೊಳ್ ವರೂಥಕರಿನಿಕರಂಗಳ 1 ಒಂದಕ್ಕೂಹಿಣಿಬಲಮರ ಡುಂ ದೆಸೆಯೊಳಮುಂದುವನಿತೆ ಭಾರತಮಮ || ಗಿನ್ನಿಂದುಜ್ರವಣೆ ದಲೆಂದದ ಟೊಂದುತ್ತರಮಾಗೆ ಕಾದಿದರ್ ಕಟ್ಟಾಳ್ || ಸುರಿತಶರನಿಕರಪಾತಿತ ನರೋತ್ತಮಾಂಗಂ ಕಬಂಧ ನಾಟಕರಂಗಂ | ಸುರಿತನವರುಧಿರರಂಗ ತರಂಗವೊಪ್ಪಿದುದು ವೀರಭಟರಣರಂಗಂ || ವ|| ಅಂತು ಮುಂಬಗಲ್ಬರಂ ತುಮು ಕಾದುವ ಸಮರಭರಂ ಮನೋರಾಗಮಂ ಮಾಡೆಯುಂ ಮುಮ್ಮಟಿಸಿ ಪಾಂಡವ ಕೌರವ ಬಲದ ಕಲಿಕೆಯ ಪ್ರಧಾನನಾಯಕರ್ಕಳಮIು ಸll ಕಡಿಕೆಯೊಂದೂರ್ವರೊಳ್ ತವ ಬಯಕೆಯಿಂ ದಿವ್ಯ ಬಾಣಾದಿಗಳಂ ಪೊಡೆವಟ್ಟುಂ ಸೂತರಂ ಚೋದಿಸಿಮೆನುತುಮಗುರ್ವುರ್ವೆ ಕೆಯಿಕ್ಕು ಕಾದಲ್ | ನಡತರ್ಪಾವೇಗದೂಳ್ ಮುಮ್ಮಣಿಸಿದ ಪಲವುಂ ರಾಜಚಿಹ್ನಂಗಳಂ ಚ ಲೊಡೆಗಳ ತಳ್ಕೊಯ್ದದೇಂ ಕಸ್ತೂಳಿಸಿದುದೂ ಏನಕ್ಷತ್ರಕಚತ್ರಪಿಂಡಂ || ೩೮ ೩೭ ಸೈನ್ಯದ ಶೂರರೂ ಪರಸ್ಪರ ಕತ್ತರಿಸಿದರು. ೩೫. ನೀರಾನೆ ಮತ್ತು ಮೊಸಳೆಗಳ ಹೊಡೆತದಿಂದ ಬಿರಿದು ನಾಶವಾಗುವ ಹಡಗಿನಂತೆ ನಾನಾ ಆಯುಧಗಳು ವಿಶೇಷವಾಗಿ ನಾಟಿಕೊಂಡಿರುವ ರಥ ಮತ್ತು ಆನೆಗಳ ಸಮೂಹಗಳು ಯುದ್ಧಸಮುದ್ರದಲ್ಲಿ ನಾಶವಾದವು. ೩೬. ಉಭಯಪಕ್ಷದಲ್ಲಿಯೂ ಒಂದಕ್ಟೋಹಿಣಿ ಸೈನ್ಯವು ಉಳಿಯಿತು. ಭಾರತಯುದವು ಇದಿಷ್ಟೇ ಸಂಖ್ಯೆಯುಳ್ಳದು; ಈ ದಿನ ನಮಗೆ ಉದ್ಯಾಪನೆ (ಮುಗಿಯುವುದೇ)ಯಿಲ್ಲವೇ ಎಂದು ಹೇಳುತ್ತ ಅಪಾರ ಪರಾಕ್ರಮದಿಂದ ವೀರಪುರುಷರು ಕಾದಾಡಿದರು. ೩೭. ಹೊಳೆಯುತ್ತಿರುವ ಬಾಣಗಳ ಸಮೂಹಕ್ಕೆ ಸಿಕ್ಕಿಬೀಳುತ್ತಿರುವ ಮನುಷ್ಯರ ತೆಲಗಳನ್ನುಳ್ಳದೂ, ಮುಂಡಗಳು ಕುಣಿದಾಡುವ ರಂಗಸ್ಥಳವಾದುದೂ ಹೊಸ, ರಕ್ತದ ಚಂಚಲವಾದ ಅಲೆಗಳನ್ನುಳ್ಳುದೂ ಆದ ವೀರಭಟರ ರಣರಂಗವು ಪ್ರಕಾಶಮಾನವಾಯಿತು. ವ|| ಹಾಗೆ ಮುಂಬಗಲವರೆಗೆ (ಮದ್ಯಾಹ್ನದವರೆಗೆ) ತುಮುಲಯುದ್ಧವನ್ನು ಮಾಡುವ ಯುದ್ಧಕಾರ್ಯವು ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತಿರಲು ಪಾಂಡವಕೌರವಬಲಪ್ರವೀಣರಾದ ಮುಖ್ಯ ನಾಯಕರುಗಳು ಕಾದಿದರು. ೩೮. ಬಹುವೇಗದಿಂದ ಕೂಡಿ ಪರಸ್ಪರ ತಗುಲಿ ಯುದ್ಧಮಾಡುವ ಅಪೇಕ್ಷೆಯಿಂದ ದಿವ್ಯಾಸ್ತಗಳಿಗೆ ನಮಸ್ಕಾರಮಾಡಿ ಸಾರಥಿಗಳಿಗೆ ರಥವನ್ನು ನಡೆಸಿ ಎಂದು ಹೇಳಿ ಭಯವು ಹೆಚ್ಚುತ್ತಿರಲು ಶಕ್ತಿಮೀರಿ ಯುದ್ಧಮಾಡಲು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy