SearchBrowseAboutContactDonate
Page Preview
Page 615
Loading...
Download File
Download File
Page Text
________________ ೬೧೦ | ಪಂಪಭಾರತಂ ವ|| ಆಗಳಾ ಧ್ವನಿಯಂ ಕೇಳು ದೇವೇಂದ್ರನಿಂದ್ರಲೋಕದೊಳ್ ಮಿಟ್ಟೆಂದು ಮಿಡುಕಲಪೊಡು ದೇವರಿಲ್ಲದಂತು ದೇವನಿಕಾಯಂಬೆರಸು ತನ್ನ ಮಗನ ಕಾಳೆಗಮಂ ನೋಡಲೆಂದು ಚಿತ್ರಪಟಮಂ ಕೆದಟ ಗಗನತಳಮನಳಂಕರಿಸಿದಂತೆ ಷೋಡಶ ರಾಜರ್ವರಸು ಬಂದಿರ್ದನಾಗಳಕಂ।। ದೇವ ಬ್ರಹ್ಮ ಮುನೀಂದ್ರಾ ಸೇವಿತನುತ್ತಪ್ತ ಕನಕವರ್ಣಂ ಹಂಸ | ಗ್ರೀವ ನಿಹಿತೈಕವಾದನಿ ಳಾವಂದನನಿಂದನಬ್ಬಗರ್ಭಂ ಬಂದಂ || ವ|| ಆಗಳ್ ಕಂ ಕಂll ಏಳಯ ನಂದಿಯನಾ ಪಜ ಗೇಟದ ಗಿರಿಸುತೆಯ ಮೊಲೆಗಳಲ್ಲೇಟಿಂ ನೀ | ರೀತಿಸುತಿರೆ ಕರ್ಣಾರ್ಜುನ ರೇಂ ನೋಡ ಭೂತನಾಥಂ ಬಂದಂ || ಆರನುವರದೊಳಮನಗಣ ಮಾರದ ಕಣಲರ್ಗಳಾರ್ಗುಮರಿಗನೆನುತುಂ | ನೀರದಪಥದೊಳ್ ಮುತ್ತಿನ ಹಾರದ ಬೆಳಗೆಸೆಯ ನಾರದಂ ಬಂದಿರ್ದಂ || ರಸೆಯಿಂದಮೊಗದು ಪಡೆಗಳ ಪೊಸ ಮಾಣಿಕದಳವಿಸಿಲ್ಗಳೊಳ್ ಪೊಸದಳಿರೊಳ್ | ಮುಸುಕಿದ ತಲದಿಂದಸದಿರ ಪೊಸತನ ನಡೆ ನೋಡಲುರಗರಾಜಂ ಬಂದಂ || ೧೬೩೮ ORE ೧೪೦ ೧೪೧ ದಡದಲ್ಲಿಯೂ ಸ್ಪಷ್ಟವಾಗಿ ಸೇರಿಕೊಂಡು ಪ್ರಕಟವಾಯಿತು. ವ! ಆಗ ಆ ಧ್ವನಿಯನ್ನು ಕೇಳಿ ದೇವೇಂದ್ರನು ಇಂದ್ರಲೋಕದಲ್ಲಿ ಮಿಟ್ಟೆಂದು ಅಲುಗಾಡುವುದಕ್ಕೂ ದೇವತೆಯಿಲ್ಲದ ಹಾಗೆ ಎಲ್ಲ ದೇವತೆಗಳ ಸಮೂಹದೊಡನೆ ಕೂಡಿ ತನ್ನ ಮಗನ ಕಾಳಗವನ್ನು ನೋಡಬೇಕೆಂದು ಚಿತ್ರಪಟವನ್ನು ಹರಡಿ ಆಕಾಶಪ್ರದೇಶವನ್ನು ಅಲಂಕರಿಸುವ ಹಾಗೆ ಹದಿನಾರುರಾಜರುಗಳೊಡನೆ ಬಂದಿದ್ದನು. ೧೩೮. ಆಗ ದೇವತೆಗಳು, ಬ್ರಾಹ್ಮಣರು ಮತ್ತು ಋಷಿಶ್ರೇಷ್ಠರುಗಳಿಂದ ಸೇವಿಸಲ್ಪಟ್ಟವನೂ ಚೆನ್ನಾಗಿ ಕಾಸಿದ ಚಿನ್ನದ ಬಣ್ಣವುಳ್ಳವನೂ ಹಂಸದ ಕತ್ತಿನ ಮೇಲೆ ಇಡಲ್ಪಟ್ಟ ಒಂದು ಪಾದವುಳ್ಳವನೂ ಲೋಕಪೂಜ್ಯನೂ ಯಾರಿಂದಲೂ ನಿಂದಿಸಲ್ಪಡದವನೂ ಆದ ಬ್ರಹ್ಮನು ಬಂದನು. ವ|| ಆಗ ೧೩೯. ನಂದಿಯನ್ನೇರಿಕೊಂಡು ಹಿಂದೆ ಹತ್ತಿ ಕುಳಿತಿರುವ ಪಾರ್ವತಿಯ ಮೊಲೆಗಳ ನಯವಾದ ತಿವಿತದಿಂದ ರಸವೇರುತ್ತಿರಲು ಕರ್ಣಾರ್ಜುನರ ಕಾಳಗವನ್ನು ನೋಡಲು ಈಶ್ವರನೂ ಬಂದನು. ೧೪೦. ಯಾರ ಯುದ್ಧದಲ್ಲಿಯೂ ಸ್ವಲ್ಪವೂ ತೃಪ್ತಿಯಾಗದ ನನ್ನ ನೇತ್ರಪುಷ್ಪಗಳು ಅರ್ಜುನನಿಂದ ತೃಪ್ತಿಹೊಂದುತ್ತವೆ ಎಂದು ಹೇಳುತ್ತಾ ಆಕಾಶಮಾರ್ಗದಲ್ಲಿ ಮುತ್ತಿನ ಹಾರದ ಕಾಂತಿಯು ಪ್ರಕಾಶಿಸುತ್ತಿರಲು ನಾರದನು ಬಂದಿದ್ದನು. ೧೪೧. ಪಾತಾಳಲೋಕದಿಂದ ಹುಟ್ಟಿ ಹೆಡೆಗಳ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy