SearchBrowseAboutContactDonate
Page Preview
Page 616
Loading...
Download File
Download File
Page Text
________________ ದ್ವಾದಶಾಶ್ವಾಸಂ | ೬೧೧ ದಿನಕರನುಮಿಂದ್ರನುಂ ನಿಜ ತನಯರ ದೆಸೆಗಣಗಿದಂಕದಿಂ ಗೆಲವಿನ ಮಾ | ತನೆ ನುಡಿಯ ನುಡಿದ ಜಗಳಮ ದಿನಿಹಾನುಂ ತಿಪುರಹರನ ಕಿಎಗೆಯುವುದುಂ || ೧೪೨ ವ|| ಆಗಳ್ ದೇವೇಂದ್ರಂಗಂ ದಿವಸೇಂದ್ರಂಗು ಬಳೆಯನಟ್ಟ ಬರಿಸಿಕಂil ಜಗಳದೇಂ ದಿನಕರ ಪೊಣ ರ್ದು ಗೆಲ್ಬನೇ ನಿಜತನೂಭವಂ ಹರಿಗನೊಳೇಂ | ಬಗೆಗೆಟ್ಟೆಯೊ ಧುರದೊಳವಂ ಮಿಗಿಲೆನಗೆನೆ ನಿನಗೆ ಪಗಲೊಳೇಂ ಕತ್ತಲೆಯೇ || ೧೪೩ ವಗಿ ಎಂದು ದಿನಕರನ ಪುರಂದರನ ಜಗಳಮಂ ಪತ್ತುವಿಡೆ ನುಡಿದುಕoll ಅಳವಿನೋಳೆನ್ನುಮನಿನಿಸ ಗಳಿಸಿದ ಹರಿಗನೂಳಿದಿರ್ಚಿ ಕರ್ಣಂ ಗೆಲಲು | ಮೃಳಿಪಂ ಗಡಮಂದೋಪಳ ತಳಮಂ ಪೊಯೇಶ್ವರಂ ಮುಗುಳಗೆ ನಕ್ಕಂ | ೧೪೪ ವ|| ಅಂತು ಮುಗಿಲೂಳಿದ ಮೂರುಲೋಕವುಂ ಕರ್ಣಾರ್ಜುನರ ಯುದಮಂ ನೋಡಲ್ ನೆರೆದಲ್ಲಿ ನೆರವಿವಡದನ್ನ ಪ್ರತಿಜ್ಞೆಯಂ ನೆಂಪಲಿಂದವಸರಂಬಡೆದನೆಂದು ಕೌರವ ಕುಲಹಿಮಕರಾನಿಲಪಚಯವರ್ಷವಾರಿದನಪ್ಪ ಪವನತನಯಂ ಬದ್ಧವಪುವಾಗಿ ದುರ್ಯೋಧನಾ ಹೊಸಮಾಣಿಕ್ಯಗಳು ಎಳೆಬಿಸಿಲಿನಲ್ಲಿ ಹೊಸಚಿಗುರುಗಳಿಂದ ಮುಚ್ಚಿಕೊಂಡಿರುವ ರೀತಿಯಿಂದ ಪ್ರಕಾಶಿಸುತ್ತಿರಲು ಸರ್ಪರಾಜನಾದ ವಾಸುಕಿಯೂ ಬಂದನು. ೧೪೨. ಸೂರ್ಯನೂ ಇಂದ್ರನೂ ತಮ್ಮ ಮಕ್ಕಳ ಕಡೆಗೆ ಉಂಟಾದ ಪಕ್ಷಪಾತದಿಂದ ಜಯದ ಮಾತನ್ನೇ ಆಡುತ್ತಿರಲು ಆಡಿದ ಜಗಳವು ಒಂದಿಷ್ಟು ಈಶ್ವರನ ಕಿವಿಗಳಿಗೂ ಮುಟ್ಟಿತು. ವಆಗ ಇಂದ್ರನಿಗೂ ಸೂರ್ಯನಿಗೂ ದೂತರನ್ನು ಕಳುಹಿಸಿ ಬರಮಾಡಿ ೧೪೩. ಸೂರ್ಯನೇ ಇದೇನು ಜಗಳ, ನಿನ್ನ ಮಗನಾದ ಕರ್ಣನು ಹರಿಗನಲ್ಲಿ ಹೆಣಗಾಡಿ ಗೆಲ್ಲುತ್ತಾನೆಯೇ, ಬುದ್ಧಿಗೆಟ್ಟಿದ್ದೀಯೇನು? ಯುದ್ದದಲ್ಲಿ ಅವನು ನನಗಿಂತಲೂ ಮೇಲಾದವನು ಎನ್ನುವಾಗ ನಿನಗೆ ಹಗಲಿನಲ್ಲಿಯೇ ಕತ್ತಲೆಯೇ ? ವll ಸೂರ್ಯ ಮತ್ತು ಇಂದ್ರರ ಜಗಳವನ್ನು ಕೊನೆಗಾಣುವಂತೆ ತೀರ್ಮಾನಿಸಿ - ೧೪೪, ಪರಾಕ್ರಮ ದಲ್ಲಿ ನನ್ನನ್ನೂ ಒಂದಿಷ್ಟು ಮೀರಿರುವ ಹರಿಗನನ್ನು ಎದುರಿಸಿ ಗೆಲ್ಲುವುದಕ್ಕೆ ಕರ್ಣನು ಕಾತರನಾಗಿದ್ದಾನೆಯಲ್ಲವೇ ಎಂದು ಈಶ್ವರನು ತನ್ನ ಪ್ರಿಯೆಯಾದ ಪಾರ್ವತಿಯ ಅಂಗೈಯನ್ನು ತಟ್ಟಿ ಹುಸಿನಗೆಯನ್ನು ನಕ್ಕನು. ವ|ಹಾಗೆ ಆಕಾಶದಲ್ಲಿ ನೆರೆದಿರುವ ಮೂರುಲೋಕವೂ ಕರ್ಣಾರ್ಜುನರ ಯುದ್ಧವನ್ನು ನೋಡಲು ನೆರೆದಿರುವಾಗಲೇ ನಾನೂ ನನ್ನ ಪ್ರತಿಜ್ಞೆಯನ್ನು ಪೂರ್ಣಮಾಡಲು ಅವಕಾಶಪಡೆದೆನೆಂದು ಕೌರವವಂಶವೆಂಬ ಚಂದ್ರನ ಕೊಳೆಯ ರಾಶಿಗೆ ಮಳೆಗಾಲದ ಮೋಡವಾಗಿರುವ ಭೀಮಸೇನನು ಉಬ್ಬಿ ಸಂತೋಷಪಟ್ಟನು. ದುರ್ಯೊಧನನ ತಮ್ಮಂದಿರೊಬ್ಬ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy