SearchBrowseAboutContactDonate
Page Preview
Page 614
Loading...
Download File
Download File
Page Text
________________ ದ್ವಾದಶಾಶ್ವಾಸಂ | ೬೦೯ ದೊಣೆಗಳನೆರಡುಂ ದೆಸೆಯೊಳಂ ಬಿಗಿದು ತಾಳವಟ್ಟದ ಬಿಲ್ಲಂ ಕೆಂದಳದೊಳಮರೆ ನೀವಿ ಜೇವೂಡೆದಾಗಳಸೃದ್ಧಿ | ಮಹಾ ಪ್ರಳಯ ಭೈರವ ಕ್ಷುಭಿತ ಪುಷ್ಕಳಾವರ್ತಮಾ ಮಹೋಗ್ರ ರಿಪು ಭೂಭುಜ ಶ್ರವಣ ಭೈರವಾಡಂಬರಂ || ಗುಹಾ ಗಹನ ಗಹ್ವರೋದರ ವಿಶೀರ್ಣಮಾದಂದದೇಂ | ಮುಹುಃ ಪ್ರಕಟವಾದುದಾ ರವಿತನೂಭವ ಜ್ಯಾರವಂ | ೧೩೬ ವ|| ಅಂತು ಯುಗಾಂತ ವಾತಾಹತ ಕುಲಗಿರಿಯ ನೆಲೆಯಿಂ ತಳರ್ವಂತೆ ತಳರ್ದು ಧ್ವಾಂಕ್ಷಧ್ವಜವಂಬರತಳದೊಳ್ ಮಿಳಿರೆ ತನಗಿದಿರಂ ಬರ್ಪ ಕರ್ಣನ ರಥಕ್ಕೆ ತನ್ನ ರಥಮನಾಸನಮಾಗೆ ಪರಿಯಿಸಿ ವಿಂಧ್ಯ ಮಳಯ ಮಹೀಧರಂಗಳೊಂದೊಂದಳೊಳ್ ತಾಗುವಂತೆ ತಾಗಿ ದೇವದತ್ತ ಶಂಖಮಂ ಪೂರೈಸಿ ಗಾಂಡೀವಮನೇಚಿಸಿ ನೀವಿ ಜೇವೊಡೆದಾಗಳ್ಮll ಸll ಎನಿತಾ ಬ್ರಹ್ಮಾಂಡದಿಂದಿತ್ತುದಧಿ ಕುಲ ನಗ ದ್ವೀಪ ಸಂಘಾತಮಂತಂ ತನಿತುಂ ಬತ್ತಿತ್ತು ತೂಳತುಡುಗಿದುದೆನೆ ದಿಕ್ಕಾಲರಾ ದೇವದತ್ತ | ಧನಿ ಸಂಮಿಶ್ರ ಸಮುದದ್ರಜತಗಿರಿತಟ ಸಷ ಸಂಶಿಷ, ಮಾರ್ವಿ "ನಿನದು ಪರ್ವಿಕಾಂಡ ಪ್ರಳಯ ಘನ ಘಟಾಟೋಪ ಗಂಭೀರನಾದಂ | ೧೩೭ ಮರೆಯನ್ನು ಪ್ರವೇಶಿಸಿದುವು. ನನ್ನ ಇಷ್ಟಾರ್ಥವು ಈ ದಿನ ಪೂರ್ಣವಾಯಿತು ಎಂದು ಕರ್ಣನು ತನ್ನ ಎರಡು ಭುಜಗಳನ್ನೂ ನೋಡಿ ಯುದ್ದಾನಂದದಿಂದ ಕೂಡಿ ಶಲ್ಯನನ್ನು ತೇರನ್ನು ನಡೆಸುವಂತೆ ಹೇಳಿ ದಿವ್ಯಾಸ್ತಗಳ ಬತ್ತಳಿಕೆಯನ್ನು ಎರಡು ಪಕ್ಕದಲ್ಲಿಯೂ ಬಿಗಿದುಕೊಂಡು ತಾಳವಟ್ಟವೆಂಬ ಬಿಲ್ಲು ಕೆಂಪಗಿರುವ ತನ್ನ ಅಂಗೈಯನ್ನು ಸೇರಿಕೊಂಡಿರಲು ಬಿಲ್ಲಿನ ಹದೆಯನ್ನು ಎಳೆದು ಮೀಟಿ (ಜೇವೊಡೆ)ದನು. ೧೩೬. ಪ್ರಳಯಕಾಲದ ಕಾಲಭೈರವನಿಂದ ಕಲಕಲ್ಪಟ್ಟ ಪುಷ್ಪಲಾವರ್ತ ಮೋಡದಂತೆ ಆ ಅತಿಭಯಂಕರವಾದ ಶತ್ರುರಾಜರ ಕಿವಿಗೆ ಭೈರವಾಡಂಬರವಾಗಿ ಗುಹೆಗಳ ಆಳವಾದ ಕಣಿವೆಗಳ ಒಳಭಾಗವನ್ನು ಭೇದಿಸಿದ ಕರ್ಣನ ಬಿಲ್ಲಿನ ಹೆದೆಯ ಶಬ್ದವು ಆ ದಿನ ಪುನಃ ಪುನಃ ಪ್ರಕಟವಾಯಿತು. ವ|| ಪ್ರಳಯಕಾಲದ ಗಾಳಿಯಿಂದ ಹೊಡೆಯಲ್ಪಟ್ಟ ಕುಲಪರ್ವತಗಳು (ತಾವಿರುವ) ನೆಲೆಯಿಂದ ಚಲಿಸುವಂತೆ ಕರ್ಣನು ಚಲಿಸಿದನು. ಕಾಗೆಯ ಬಾವುಟವು ಆಕಾಶಪ್ರದೇಶದಲ್ಲಿ ಅಲುಗಾಡುತ್ತಿರಲು ತನಗೆ ಎದುರಾಗಿ ಬರುತ್ತಿರುವ ಕರ್ಣನ ತೇರಿಗೆ ತನ್ನ ತೇರನ್ನು ಸಮೀಪವಾಗುವ ಹಾಗೆ ಹರಿಯಿಸಿ ವಿಂಧ್ಯ ಮಲಯಪರ್ವತಗಳು ಒಂದರೊಡನೊಂದು ತಾಗುವಂತೆ ತಾಗಿ ಅರ್ಜುನನು ದೇವದತ್ತಶಂಖವನ್ನು ಊದಿ ಗಾಂಡೀವಕ್ಕೆ ಹೆದೆಯನ್ನೇರಿಸಿ ಚೆನ್ನಾಗಿ ಸೆಳೆದು ಶಬ್ದಮಾಡಿದನು. ೧೩೭. ಬ್ರಹ್ಮಾಂಡದಿಂದೀಕಡೆ ಎಷ್ಟು ಸಮುದ್ರ, ಕುಲಪರ್ವತದ್ವೀಪ ಸಮೂಹವಿದ್ದಿತೋ ಅವನ್ನೂ ಕ್ರಮವಾಗಿ ಬತ್ತಿತು, ತಳ್ಳಲ್ಪಟ್ಟಿತು ಮತ್ತು ಸುಕ್ಕಿಹೋಯಿತು ಎಂದು ದಿಕ್ಷಾಲಕರು ಹೇಳುತ್ತಿರಲು ದೇವದತ್ತವೆಂಬ ಶಂಖಧ್ವನಿಯಿಂದ ಕೂಡಿಕೊಂಡಿರುವುದೂ ಪ್ರಳಯಕಾಲದ ಮೋಡಗಳ ಸಮೂಹದ ಆಡಂಬರವುಳ್ಳದೂ ಆದ ಆ ಹೆದೆಯ ಟಂಕಾರಶಬ್ದವು ಎತ್ತರವಾದ ಕೈಲಾಸಪರ್ವತದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy