SearchBrowseAboutContactDonate
Page Preview
Page 613
Loading...
Download File
Download File
Page Text
________________ ೬೦೮) ಪಂಪಭಾರತಂ ವ|| ಅಂತು ಭೂನಾಥಂ ತನ್ನಳವನಳೆದುಮರೆಯದ ಕಡೆನುಡಿದು ತಪೋವನದೊಳಲ್ಲದೆ ನೀಗೆನೆಂದೆಟ್ಟು ನಿಂದಿರ್ದನನಸುರಾಂತಕನು ತಾನುಮಂತಾನುಂ ಪ್ರಾರ್ಥಿಸಿದೊಡಂಬಟ್ಟಜಾತ ಶತ್ರುಗೆ ಪೊಡೆವಟ್ಟು ರಥಮನೇ ಕೌರವಧ್ವಜಿನಿಗೆ ಭಯಜ್ವರಂ ಬರ್ಪಂತ ಬಂದು ಪವನ ತನಯಂಗಂತಕತನಯನಸಮಾವಸ್ಥೆಯಂ ಪೇಜ್ಜಿಂದಿನನುವರಮೆಲ್ಲಮಂ ನಿಮ್ಮೋರ್ವರ ಮೇಲಿಕ್ಕಿ ಪಿರಿದುಂ ಪೊಲ್ಕು ತಡೆದಿರ್ಪವೆನೆ ಹಿಡಿಂಬಾಂತಕನಿಂತೆಂದಂಮll ನರ ಮಾತಂಗ ತುರಂಗ ಸೈನಮಿದಿರಾಂತೀರೆಂಟು ಲಕ್ಕಂಬರಂ ಕರಗಿತನ ನಿಶಾತ ಹೇತಿ ಹತಿಯಿಂ ಮತಂತುಮಿ ತೂಳ ತೀನ್ | ಕರಗಲಾರ್ತಪುದಿಲ್ಲದಕರಿಗ ಪೇಮ್ ನೀಂ ಬೇಟ್ಟುದೇ ಸಂಗರಾ | ಜರದೊಳ್ ಕೌರವರೆಂಬ ಕಾಕಕುಳಕೆಯೊಂದ ಬಿಲ್ ಸಾಲದೇ || ೧೩೫ ವಗ ಎಂದ ಭೀಮನನಕಲಂಕರಾಮಂ ನಿಮ್ಮ ಭುಜಬಲಕ್ಕದೇವಿರಿದೆಂದು ನೀಮನ್ನ ಕಾಳೆಗಮಂ ಸುರಿಗೆಗಾಳೆಗಮಂ ನೋಟ್ಟಂತೆ ತೊಡೆಯಂ ಪೊಯಾರ್ದು ನೋಡುತ್ತುಮಿರಿಮೆಂದು ಪವನಜನನೊಡಗೊಂಡು ಪವನಜವದಿಂ ಕರ್ಣನ ರಥಮಲ್ಲಿತತ್ರ ಪೋದುದನುತುಂ ಬರ್ಪತಿರಥ ಮಥನನ ರಥದ ಬರಮ ಕಂಡು ಕೌರವಬಲಮೆಲ್ಲಮೆಲ್ಲನುಲಿದೋಡಿ ವೈಕರ್ತನನ ಮಜಯಂ ಪುಗುವುದುಂ ಮದೀಯ ಮನೋರಥಮಿಂದು ದೊರೆಕೊಂಡುದೆಂದು ದಿನಕರತನೂಜನೆರಡು ಮುಯ್ಯುಮಂ ನೋಡಿ ಸಮರಾನಂದಂಬೆರಸು ಶಲ್ಯನಂ ರಥವನೆಸಗು ದಿವ್ಯಾಸ್ತಂಗಳ ಎದ್ದನು. ವ|| ಹೀಗೆ ರಾಜನಾದ ಧರ್ಮರಾಯನು ತನ್ನ ಪರಾಕ್ರಮವನ್ನು ಅರಿತೂ ಅರಿಯದೆ ಕೆಟ್ಟಮಾತುಗಳನ್ನಾಡಿ ತಪೋವನದಲ್ಲಲ್ಲದೆ (ತನ್ನ ಜೀವನವನ್ನು ಬೇರೆ ಕಡೆಯಲ್ಲಿ ಕಳೆಯುವುದಿಲ್ಲವೆಂದು ಎದ್ದು ನಿಂತಿದ್ದವನನ್ನು ಕೃಷ್ಣನೂ ಅರ್ಜುನನೂ ಹೇಗೋ ಬೇಡಿಕೊಳ್ಳಲಾಗಿ ಒಪ್ಪಿಕೊಂಡ ಧರ್ಮರಾಜನಿಗೆ ನಮಸ್ಕಾರಮಾಡಿ ತೇರನ್ನು ಹತ್ತಿಕೊಂಡು ಕೌರವಸೈನ್ಯಕ್ಕೆ ಭಯಜ್ವರ ಬರುವ ಹಾಗೆ ಬಂದು ಭೀಮನಿಗೆ ಧರ್ಮರಾಯನ ಮನಃಸ್ಥಿತಿಯನ್ನು ಹೇಳಿ ಈ ದಿನದ ಯುದ್ದಭಾರವೆಲ್ಲವನ್ನೂ ನಿಮ್ಮೊಬ್ಬರ ಮೇಲೆಯೇ ಹೇರಿ ಬಹಳ ಹೊತ್ತು ತಡೆದಿದ್ದೆವು ಎನ್ನಲು ಭೀಮನು ಹೀಗೆಂದನು - ೧೩೫. ನನ್ನನ್ನು ಎದುರಿಸಿದ ಸುಮಾರು ಹದಿನಾರುಲಕ್ಷದವರೆಗಿನ ಆನೆ ಕುದುರೆ ಪದಾತಿಗಳು ನನ್ನ ಹೊಡೆತಕ್ಕೆ ಸಿಕ್ಕಿ ಕರಗಿದುವು. ಅಷ್ಟಾದರೂ ಈ ನನ್ನ ತೋಳಿನ ನವೆಯು ಮಾತ್ರ ಕರಗುವುದಕ್ಕೆ ಸಮರ್ಥವಾಗಿಲ್ಲ. (ಆ ಸೈನ್ಯಕ್ಕೆ ನೀನು ಹೇಳಬೇಕೇ - ನಾನೊಬ್ಬನೇ ಸಾಕು) ಅರ್ಜುನ, ಅದಕ್ಕೆ ನೀನೂ ಬರಬೇಕೆ? ಯುದ್ಧದಲ್ಲಿ ಕೌರವರೆಂಬ ಕಾಗೆಯ ಗುಂಪಿಗೆ ನನ್ನ ಈ ಒಂದೇ ಬಿಲ್ಲು ಸಾಲದೇ? ವ|| ಎಂದು ಹೇಳಿದ ಭೀಮನನ್ನು ಕುರಿತು ಅರ್ಜುನನು ನಿಮ್ಮ ತೋಳಬಲಕ್ಕೆ ಅದೇನು ದೊಡ್ಡದು ಎಂದು ಹೇಳಿ ನೀವು ಕಾಳಗವನ್ನು ನೋಡುವಂತೆ ತೊಡೆಯನ್ನು ತಟ್ಟಿ ಆರ್ಭಟಮಾಡಿ ನೋಡುತ್ತಿರಿ ಎಂದನು. ಭೀಮನೊಡಗೂಡಿ ವಾಯುವೇಗದಿಂದ ಕರ್ಣನ ತೇರೆಲ್ಲಿದೆ ಯಾವಕಡೆ ಹೋಯಿತು ಎನ್ನುತ್ತ ಬರುತ್ತಿರುವ ಅತಿರಥಮಥನನಾದ ಅರ್ಜುನನ ಬರವನ್ನು ಕಂಡು ಕೌರವಸೈನ್ಯವೆಲ್ಲ ಮೆಲ್ಲಗೆ ಕೂಗಿಕೊಂಡು ಓಡಿಹೋಗಿ ಕರ್ಣನ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy