SearchBrowseAboutContactDonate
Page Preview
Page 612
Loading...
Download File
Download File
Page Text
________________ ೧೩೧ ದ್ವಾದಶಾಶ್ವಾಸಂ | ೬೦೭ ವll ಎಂದು ತನ್ನ ನೋಯ ನುಡಿದ ನಿಜಾಗ್ರಜನ ನುಡಿಗೆ ಮನದೊಳೇವೈಸಿಯುಮೇಷ್ಟೆ ಸದೆ ವಿನಯಮನೆ ಮುಂದಿಟ್ಟು ವಿನಯವಿಭೂಷಣನಿಂತೆಂದಂ ಮುಳಿದಿಂತು ಬೆಸಸೆ ನಿಮ್ಮಡಿ ಮೊಳೆ ಮಾರ್ಕೊಂಡೆಂತು ನುಡಿವೆನುಸಿರೆಂ ನಿಮ್ಮ | ಮುಳಿಯಿಸಿದ ಸುರಾಸುರರುಮ ನೊಳರೆನಿಸಂ ಕರ್ಣನೆಂಬನನಗೇಎರಿಯಂ || ನರಸಿಂಗಂಗ ಜಾಕ ಬೃರಸಿಗಮಳವೊದವೆ ಪುಟ್ಟ ಪುಟ್ಟಿಯುಮರಿಕೇ | ಸರಿಯೆನೆ ನೆಗಟ್ಟುಮರಾತಿಯ ಸರಿದೊರೆಗಂ ಬಂದೆನಪೊಡಾಗಳ ನಗಿರೇ || ಪುಟ್ಟೆ ಮುಳಿಹೊಸಗೆಗಳೆ ಕಡು . ಗಟ್ಟಂ ಮುಳಿಹೊಸಗೆಯೆಂಬ ನೃಪತನಯನವಂ | ಮುಳ್ಳುಗಿಡ ಪಾರದರದೊಳ್ ಪುಟ್ಟದನರಸಂಗಮರಸಿಗಂ ಪುಟ್ಟಿದನೇ || ಎಂದರಸ ನೇಸಂದೊಳ ಗಾಂ ದಿನಕರಸುತನನಿಕ್ಕಿ ಬಂದಲ್ಲದೆ ಕಾ | ಸಂ ದಲ್ ಭವತ್ವದಾದ್ಯಮ ನೆಂದನುದಶ್ರುಜಳಲವಾದ್ರ್ರಕಪೋಳಂ | ೧೩೪ ೧೩೨ ೧೩೩ ನಿಯಮದಲ್ಲಿ ಇರುತ್ತೇನೆ. ವlt ಎಂದು ತನಗೆ ನೋವಾಗುವ ಹಾಗೆ ನುಡಿದ ತನ್ನ ಅಣ್ಣನ ಮಾತಿಗೆ ಮನಸ್ಸಿನಲ್ಲಿ ಕೋಪಬಂದರೂ (ಹೊರಗೆ) ಕೋಪಿಸಿಕೊಳ್ಳದೆ ನಮ್ರತೆಯನ್ನೇ ಪ್ರದರ್ಶಿಸಿ ವಿನಯಭೂಷಣನಾದ ಅರ್ಜುನನು ಹೀಗೆಂದನು. ೧೩೧. ಕೋಪಿಸಿಕೊಂಡು ಹೀಗೆ ಹೇಳಿದ ನಿಮ್ಮ ಪಾದದಲ್ಲಿ ಪ್ರತಿಭಟಿಸಿ ಹೇಗೆ ನುಡಿಯಲಿ ? ಮಾತಾನಾಡುವುದಿಲ್ಲ: ನಿಮಗೆ ಕೋಪವನ್ನುಂಟುಮಾಡಿದ ದೇವದಾನವರಿನ್ನೂ ಜೀವದಿಂದಿದ್ದಾರೆ ಎನ್ನಿಸುವುದಿಲ್ಲ (ಹಾಗಿರುವಾಗ) ಕರ್ಣನೆಂಬುವನು ನನಗೆಷ್ಟು ದೊಡ್ಡವನು? ೧೩೨. ನರಸಿಂಹನೆಂಬ ರಾಜನಿಗೂ ಜಾಕಬ್ಬೆಯೆಂಬ ರಾಣಿಗೂ ಪರಾಕ್ರಮವೇ ಹುಟ್ಟಿದೆಯೆಂಬ ರೀತಿಯಲ್ಲಿ ಹುಟ್ಟಿ ಹುಟ್ಟಿಯೂ ಕೂಡ ಅರಿಕೇಸರಿಯೆಂದು ಪ್ರಸಿದ್ಧನಾಗಿಯೂ ಶತ್ರುವಿನ ಸರಿಸಮಾನತೆಗೆ ಬಂದೆನಾದರೆ ನೀವೇ ತಿರಸ್ಕಾರದಿಂದ ಪರಿಹಾಸಮಾಡುವುದಿಲ್ಲವೇ? ೧೩೩. ಕೋಪಸಂತೋಷಗಳು ಹುಟ್ಟಲು ಅದು ನಿಜವಾಗಿಯೂ ಕಷ್ಟವೇ! ಆದರೆ ಆ ಕೋಪಪ್ರಸಾದಗಳನ್ನು ಪರಿಹರಿಸಲಾರದ ರಾಜಕುಮಾರನು ರಾಜ ರಾಣಿಯರಿಗೆ ಹುಟ್ಟಿದವನಲ್ಲ: ಹಾದರಕ್ಕೆ ಹುಟ್ಟಿದವನು. ೧೩೪, ಎಂಬುದಾಗಿ ಹೇಳಿ ರಾಜನೇ ಸೂರ್ಯಾಸ್ತಮಾನದೊಳಗೆ ನಾನು ಕರ್ಣನನ್ನು ಸಂಹರಿಸಿ ಬಂದಲ್ಲದೆ ನಿಮ್ಮ ಪಾದಕಮಲವನ್ನು ಕಾಣುವುದಿಲ್ಲವಲ್ಲ ಎಂದು ಚಿಮ್ಮುತ್ತಿರುವ ಕಣ್ಣೀರಿನ ಕಣಗಳಿಂದ ಒದ್ದೆಯಾದ ಕೆನ್ನೆಯನ್ನುಳ್ಳ ಅರ್ಜುನನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy