SearchBrowseAboutContactDonate
Page Preview
Page 611
Loading...
Download File
Download File
Page Text
________________ ೬೦೬/ ಪಂಪಭಾರತಂ ಕಂ।। ಇನ್ನು ಕರ್ಣನ ರೂಪ ದ ಲೆನ್ನೆರ್ದೆಯೊಳಮೆನ್ನ ಕಣೋಳಂ ಸುದಪುದಾಂ | ತೆನ್ನೆಚ್ಚ ಶರಮುಮಂ ಗ ಲೆನ್ನುಮನಂಜಿಸಿದನೆಂದೊಡಿನ್ನೇನೆಂಬೆಂ || ಅಂತಪ್ಪದಟನನಾಜಿಯೊ ಅಂತಂತಿದಿರಾಂತು ಗೆಲ್ಲಿರನ ನೃಪನಂ ಕಂ | ಸಾಂತಕನೆಂದಂ ಕರ್ಣನು ಮಾಂತಿರೆ ನೀಮಿಂದು ನೊಂದುದಂ ಕೇಳೀಗಳ್ || ಆರಯ್ಯಲೆಂದು ಬಂದವ ಪಾರ ಗುಣಾ ಕೊಂದೆವಿಲ್ಲವಿನ್ನು ಬಳವ | ತೂ ರಾರಾತಿಯನುಪಸಂ ಹಾರಿಪವೇವಿರಿಯನಾದನೆಂಬುದುಮಾಗಳ್ || ನರಕಾಂತಕನಂ ನುಡಿದಂ ನರೇಂದ್ರನಾನರಸುಗೆಯ ಪಲುವಗೆಯನದಂ | ಪರಿಹರಿಸಿದನಾತನನೀ ಕಿರೀಟಿ ಗೆಲ್ಲೆನಗೆ ಪಟ್ಟವಂ ಮಾಡುವನೇ || ಏಮೊಗ್ಗೆ ಕರ್ಣನಿಂತೀ ನಿಮ್ಮಂದಿಗರಿಕೆಯ ಸಾವನೇ ಸುಖಮಿರಿಮಿ | ನಮ್ಮ ಸುಯೋಧನನೋಳ್ ಪಗ ಯಮ್ಮದಾನುಂ ತಪೋನಿಯೋಗದೊಳಿರ್ಪೆಂ ೧೨೬ 영웅을 ೧೨೭ ೧೨೮ ೧೨೯ 080 ಉತ್ತಮಳಾದವಳು ಎಂದು ಹೊಗಳಿದುವು. ೧೨೬. ಇನ್ನೂ ನನ್ನ ಎದೆಯಲ್ಲಿಯೂ ಕಣ್ಣಿನಲ್ಲಿಯೂ ಕರ್ಣನ ಆಕಾರವೇ ಸುಳಿದಾಡುತ್ತಿದೆಯಲ್ಲ. ಎದುರಿಸಿ ನಾನು ಪ್ರಯೋಗಿಸಿದ ಬಾಣಗಳನ್ನು ಗೆದ್ದು ನನ್ನನ್ನೂ ಭಯಪಡಿಸಿದನೆಂದಾಗ ಇನ್ನೇನನ್ನು ಹೇಳಲಿ. ೧೨೭. ಅಂತಹ ಪರಾಕ್ರಮಶಾಲಿಯನ್ನು ಯುದ್ಧದಲ್ಲಿ ಹೇಗೆ ಎದುರಿಸಿ ಗೆದ್ದಿರಿ' ಎನ್ನಲು ಧರ್ಮರಾಯನನ್ನು ಕುರಿತು ಕೃಷ್ಣನು ಹೇಳಿದನು. ನೀವು ಇಂದು ಕರ್ಣನನ್ನು ಎದುರಿಸಿ ನೋವುಪಟ್ಟುದನ್ನು ಕೇಳಿ ಈಗ ೧೨೮. ವಿಚಾರಿಸುವುದಕ್ಕೆ ಬಂದೆವು; ಎಲ್ಲೆಯಿಲ್ಲದ ಗುಣಶಾಲಿಯಾದ ಧರ್ಮರಾಯನೇ ಬಲಿಷ್ಠನೂ ಕ್ರೂರನೂ ಆದ ಶತ್ರುವನ್ನು ನಾವು ಇನ್ನೂ ಕೊಂದಿಲ್ಲ; ನಾಶಪಡಿಸುತ್ತೇವೆ. ಅವನೇನು ಮಹಾದೊಡ್ಡವನು ಎನ್ನಲು ಆಗ ೧೨೬. ಕೃಷ್ಣನನ್ನು ಕುರಿತು ಧರ್ಮರಾಜನು ಹೇಳಿದನು- ಇನ್ನು ಮೇಲೆ ನಾನು ರಾಜ್ಯವಾಳುವ ವ್ಯರ್ಥವಾದ ಆಸೆಯನ್ನು ಬಿಟ್ಟಿದ್ದೇನೆ. ಅವನನ್ನು ಗೆದ್ದು ನಿಜವಾಗಿಯೂ ಅರ್ಜುನನು ನನಗೆ ಪಟ್ಟವನ್ನು ಕಟ್ಟುತ್ತಾನೆಯೇ ? ೧೩೦. ಇಂತಹ ನಿಮ್ಮಂತಹವರು ಕರ್ಣನನ್ನು ಗೆಲ್ಲುವುದು ಸಾಧ್ಯವೇ ? ಅಮ್ಮಗಳಿರಾ ಇನ್ನು ದುರ್ಯೋಧನನಲ್ಲಿ ಹಗೆತನವನ್ನು ಮರೆತು ಸುಖವಾಗಿರಿ. ನಾನೂ ತಪಸ್ಸಿನ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy