SearchBrowseAboutContactDonate
Page Preview
Page 610
Loading...
Download File
Download File
Page Text
________________ ಕಂ।। ತಾನುಂ ಹರಿಯುಂ ಭೂಪತಿ ಗಾನತರಾಗಲೊಡಮೊಸೆದು ಪತಿ ಪರಸಿ ಯಮ | ಸ್ಥಾನಮನೆಂತೆಯ್ದಿಸಿದಿರೋ ಕಾನೀನನ ದೊರೆಯ ಕಲಿಯನುಗ್ರಾಹವದೊಳ್ || ದ್ವಾದಶಾಶ್ವಾಸಂ | ೬೦೫ ನರ ನಾರಾಯಣರೆಂಬಿ ರ್ವರುಮೊಡಗೂಡಿದೊಡೆ ಗೆಲ್ವರಾರುರ್ವರೆಯೊಳ್ | ನಿರುತಮನ ನೆಗಟ್ಟಿ ನಿಮ್ಮ ವರ ದೊರೆಗಂ ಬಗೆವೊಡಗಳಂ ನರರೊಳರೇ || ಎಂತನೆ ಮುಖ್ಯ ಸೂಳೆ ಯಂ ತಳದೊಳೆ ಒಂದನಾತನಂಬುದನಾಂ ಮು | ನ್ನೆಂತುಂ ನಂಬೆನೆ ನಂಬಿದೆ ನಿಂತಿ೦ದಿನ ಗಂಡವಾತಿನೊಳ್ ಸೂತಜನಂ || ಪಳ್ ಕೊಂತಿಯ ಮಕ್ಕ ರೈತರೊಳೆಂಬವರೆ ಕೊಂತಿ ಮಾದೇವಿಗಂ | ದುತ್ತರವಾದ ಕರ್ಣಂ ಬೆತ್ತಕ್ಕನೆ ಎಂದು ಪೊಗಟ್ಟುವೆರಡುಂ ಪಡೆಗಳ 11 GGO ೧೨೩. ೧೨೪ ೧೨೫ ಸರಿಸಮಾನರಾದ ಬಲಶಾಲಿಗಳಾರೂ ಇಲ್ಲ; ಆದುದರಿಂದ ಎದುರಿಸಿದ ಕೌರವಸೈನ್ಯದ ಅಹಂಕಾರವನ್ನು ಸ್ವಲ್ಪ ಕಡಿಮೆ ಮಾಡಿ ರಾಜನಲ್ಲಿಗೆ ಹೋಗೋಣ ಎಂದು ಶತ್ರುಸೈನ್ಯವನ್ನು ಬಗ್ಗಿಸಿದವನಾದ ಅರ್ಜುನನು ಶತ್ರುಸೈನ್ಯಸಾಗರವನ್ನು ಬಾಣಗಳೆಂಬ ಬಡಬಾನಲನಿಂದ ನಾಶಮಾಡಿ ಅಲ್ಲಿಯ ಯುದ್ಧಕ್ಕೆ ಭೀಮನನ್ನು ಇರಹೇಳಿ ಸಾವಕಾಶಮಾಡದೆ ಧರ್ಮರಾಜನನ್ನು ಸೇರಿದನು. ೧೨೨. ತಾನೂ ಕೃಷ್ಣನೂ ಧರ್ಮರಾಯನಿಗೆ ನಮಸ್ಕಾರಮಾಡಲು ಧರ್ಮರಾಯನು ಹರಸಿ ಈ ಭಯಂಕರವಾದ ಯುದ್ಧದಲ್ಲಿ ಕರ್ಣನಂತಹ ಸಾಮರ್ಥ್ಯವುಳ್ಳ ಶೂರನನ್ನು ಯಮಪಟ್ಟಣಕ್ಕೆ ಹೇಗೆ ಸೇರಿಸಿದಿರೋ ? ೧೨೩. ನರನಾರಾಯಣರೆಂಬ ಇಬ್ಬರೂ ಒಟ್ಟುಗೂಡಿದರೆ ಈ ಭೂಮಿಯಲ್ಲಿ ನಿಮ್ಮನ್ನು ನಿಶ್ಚಯವಾಗಿ ಗೆಲ್ಲುವರಾರೂ ಇಲ್ಲ. ವಿಚಾರಮಾಡುವುದಾದರೆ ನಿಮ್ಮಿಬ್ಬರನ್ನು ಮೀರಿದ ಮನುಷ್ಯರು ಇಲ್ಲವೇ ಇಲ್ಲ. ೧೨೪. ಹಿಂದೆ ಕರ್ಣನು ಮೂರು ಏಳುಸಲ (ಇಪ್ಪತ್ತೊಂದು ಸಲ) ಭೂಮಿಯನ್ನು ಅಂಗೈಯಲ್ಲಿಯೇ ಹಿಂಡಿದವನು ಎಂಬುದನ್ನು ನಾನು ಮೊದಲು ಹೇಗೂ ನಂಬಿರಲಿಲ್ಲ. ೧೨೫. ಮಕ್ಕಳನ್ನು ಹೆತ್ತವರಲ್ಲಿ ಪಾಂಡವರನ್ನು ಹೆತ್ತ ಕುಂತೀದೇವಿಯೇ ಮಕ್ಕಳನ್ನು ಹೆತ್ತವಳು (ಉತ್ತಮಳಾದವಳು) ಎಂದು ಹೇಳುತ್ತಿದ್ದ ಎರಡು ಸೈನ್ಯಗಳೂ ಇಂದು ಕರ್ಣನನ್ನು ಹೆತ್ತವಳು ಕುಂತೀದೇವಿಗಿಂತ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy