SearchBrowseAboutContactDonate
Page Preview
Page 594
Loading...
Download File
Download File
Page Text
________________ ದ್ವಾದಶಾಶ್ವಾಸಂ | ೫೮೯ ವಗ ಆಗಳ್ ಧರ್ಮರಾಜನುಮಿತ್ತ ರಾಜರಾಜನುಮೊಂದೂರ್ವರಂ ಕೆಯೋಂಡು ತಂತಮ್ಮ ರಥಂಗಳನೇನೆಸಿಕೊಂಡುಯರಿತ್ತ ಕರ್ಣನುಂ ಪಾಂಡವಬಳ ಜಳನಿಧಿಯಂ ಬಡಬಾನಳನಳುರ್ವಂತಳುರ್ದು ತನ್ನೊಳ್ ಪೋಗದೆ ಪಣದ ಪ್ರಭದ್ರಕ ಬಲಮಲ್ಲಮಂ ಕೊಂದನನ್ನೆಗಮಿತ್ತ ಭೀಮಾಶ್ವತ್ಥಾಮರಿರ್ವರುಂ ಚೇತರಿಸಿ ಸೂತ ಪತಾಕಾ ತುರಂಗಮೋಪೇತ ರಥಂಗಳನೇಟಿಕೊಂಡು ಮತ್ತಮೊರ್ವರೋರ್ವರನುಸುತ್ತುಂ ಸಂಗ್ರಾಮಭೂಮಿಯೊಳಗನೆ ಬರೆ ಜರಾಸಂಧನ ಮಗಂ ಕ್ಷೇಮಧೂರ್ತಿ ತಮ್ಮಯ್ಯನಂ ಕೊಂದ ಪಗೆಯಂ ನೆನೆದು ತನ್ನೇಳಿದ ಮತ್ತಹಸ್ತಿಯಂ ಭೀಮಸೇನಂಗೆ ತೋಟಿ ಕೊಟ್ಟಾಗಲ್ ಕಂ|| ಬಡಿಗೊಂಡು ಮಸಗಿ ಚೈತ್ರಮ ನೋಡವ ಮಹಾ ಮಕರದಂತ ಕರಿಘಟೆಗಳನಾ | ರ್ದುಡಿಯ ಬಡಿದಾನವರಸಾ ಗಡೆ ಕೊಂದಂ ಕ್ಷೇಮಧೂರ್ತಿಯಂ ಪವನಸುತಂ || ೭೮ ವ|| ಅಂತು ಕ್ಷೇಮಧೂರ್ತಿಯಂ ಕ್ಷೇಮದಿಂ ಕೊಂದನನ್ನೆಗಮತ್ತ ಮರುನ್ನಂದನನ ನುಸುತ್ತುಂ ಬರ್ಪಶ್ವತ್ಥಾಮನಂ ಪಾಂಡ್ಯನೆಡೆಗೊಂಡು ಬಂದು ಮಾರ್ಕೊಂಡು ಸುರುಳಿಕೊಳ್ಳುವ ಹಾಗೆಯೂ ಚಲಿಸುತ್ತಿರುವ ಧ್ವಜಗಳು ಎಲ್ಲ ಕಡೆಗೂ ಹಾರಿ ಬೀಳುತ್ತಿರುವಂತೆಯೂ ಉಗ್ರವಾಗಿ ಕಾದಿ ಬಾಣಸಮೂಹದ ತಿವಿತದಿಂದ ಚಿಮ್ಮಿದ ರಕ್ತದಲ್ಲಿ ಇಚ್ಛಾಶಕ್ತಿಯೇ ನಷ್ಟವಾಗಲು ಆ ಭೀಮನು ಆ ಕಡೆ, ಈ ಅಶ್ವತ್ಥಾಮನು ಈ ಕಡೆ ಜೋತುಬಿದ್ದ ಯುದ್ದವನ್ನು ದೇವತೆಗಳ ಸಮೂಹವು ಹೊಗಳುತ್ತಿದ್ದಿತು. ವ| ಆ ಕಡೆ ಧರ್ಮರಾಜನೂ ಈ ಕಡೆ ಕೌರವನೂ ಒಬ್ಬೊಬ್ಬರನ್ನೂ ಕರೆದುಕೊಂಡು ತಮ್ಮ ರಥವನ್ನು ಹತ್ತಿಸಿಕೊಂಡು ಹೋದರು. ಕರ್ಣನು ಪಾಂಡವಸಮುದ್ರವನ್ನು ಬಡಬಾಗ್ನಿಯು ಸುಡುವಂತೆ ಸುಟ್ಟು ತನ್ನನ್ನು ಬಿಟ್ಟುಹೋಗದೆ ತನ್ನಲ್ಲಿಯೇ ಹೆಣೆದುಕೊಂಡಿದ್ದ ಪ್ರಭದ್ರಕಬಲವೆಲ್ಲವನ್ನೂ ಕೊಂದನು. ಅಷ್ಟರಲ್ಲಿ ಈ ಕಡೆ ಭೀಮಾಶ್ವತ್ಥಾಮರು ಚೇತರಿಸಿ ಸಾರಥಿ ಧ್ವಜ ಮತ್ತು ಕುದುರೆಗಳಿಂದ ಕೂಡಿದ ರಥಗಳನ್ನು ಹತ್ತಿಕೊಂಡು ಪುನಃ ಒಬ್ಬರು ಮತ್ತೊಬ್ಬರನ್ನು ಹುಡುಕುತ್ತ ಯುದ್ಧಭೂಮಿಯಲ್ಲಿ ಬರುತ್ತಿರಲು ಜರಾಸಂಧನ ಮಗನಾದ ಕ್ಷೇಮಧೂರ್ತಿಯು ತಮ್ಮ ತಂದೆಯನ್ನು ಕೊಂದ ಶತ್ರುತ್ವವನ್ನು ಜ್ಞಾಪಿಸಿಕೊಂಡು ತಾನು ಹತ್ತಿದ್ದ ಮದ್ದಾನೆಯನ್ನು ಭೀಮನ ಕಡೆ ಛಬಿಟ್ಟನು. ೭೮, ಪೆಟ್ಟು ತಿಂದು ರೇಗಿ ಹಡಗನ್ನು ಮುರಿಯುವ ದೊಡ್ಡ ಮೊಸಳೆಯ ಹಾಗೆ ಭೀಮಸೇನನು ಆನೆಯ ಸಮೂಹವನ್ನು ನಾಶಮಾಡುವಂತೆ ಹೊಡೆದು, ಆರ್ಭಟಮಾಡಿ, ಕ್ಷೇಮಧೂರ್ತಿ ಯನ್ನು ಆಗಲೇ ಕೊಂದು ಹಾಕಿದನು. ವ|| ಅಷ್ಟರಲ್ಲಿ ಆ ಕಡೆ ಭೀಮನನ್ನು ಹುಡುಕುತ್ತ ಬರುತ್ತಿದ್ದ ಅಶ್ವತ್ಥಾಮನನ್ನು ಪಾಂಡ್ಯನು ಮಧ್ಯೆ ಬಂದು ಎದುರಿಸಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy