SearchBrowseAboutContactDonate
Page Preview
Page 595
Loading...
Download File
Download File
Page Text
________________ ೫೯೦ | ಪಂಪಭಾರತಂ ಕಂ ನೀನಲ್ಲದೆನ್ನ ಶರಸಂ ಧನಮನಾನ ನೆವರಿಲ್ಲೀ ಪಡೆಯೊಳ್ | ನೀನಿನಿಸನಾಂಪುದೆಂಬುದು ಮಾನಲ್ಲದೆ ನಿನ್ನನಾಂಪ ಗಂಡರುಮೊಳರೇ || ಎನೆ ಬೆಳಸೆಯಂಬಿನ ಸರಿ ಮೊನೆಯಂಬಿನ ಸೋನೆ ಪಾಯಂಬಿನ ತಂದಲ್ | ಘನವಾದುದಲ್ಲಿ ಕಿತ್ತಂ ಬಿನ ಬಡಪಮಿದೆನಿಸಿ ಪಾಂಡ್ಯನಂಬಂ ಕದಂ || ಕದೊಡವನಿತುಮನಂತಂ ತುಳಿದೆಚ್ಚು ಕಡಂಗಿ ತಡೆದು ಶರವರ್ಷದಿನಂ | ದಣಿಯ ಕಡಿಕೆಯ್ದು ಬಿಡದೆಡೆ ವನಂ ಮಾಡಿದುವು ಗುರುತನೂಜನ ಕಣೆಗಳ್ || ಎಡೆವ ದೊಳೆಗಿ ಬಳಿಸಿಡಿ ಲಿಡುಮುಡುಕನೆ ಪೊಡೆದುದೆನಿಸಿ ಪಾಂಡ್ಯನ ರಥದ | ಚುಡಿದ ತಟ್ಟ ಕೊಂಡುವು ಕಡುಗೂರಿದುವೆನಿಪ ಗುರುತನೂಜನ ಕಣೆಗಳ || ವಿರಥಂ ಪಾಂಡ್ಯಂ ಕೋಪ ಸುರಿತಾಧರನುಡಿದು ಕಡೆಯ ಪಯಿಗೆಯುಂ ಬಿ । ಬರ ಬಿರಿಯೆ ಗುರುತನೂಭವ ನುರಮಂ ಬರಿಯೆಚ್ಚು ಬೆಂಗೆವಂದಂ ಗಜದಾ 26 90 63 ೮೨ ೮೩ ೭೯. ನನ್ನ ಬಾಣಪ್ರಯೋಗವನ್ನು ಎದುರಿಸುವುದಕ್ಕೆ ನಿನ್ನನ್ನು ಬಿಟ್ಟು ಈ ಸೈನ್ಯದಲ್ಲಿ ಸಮರ್ಥರಾದವರು ಬೇರೆ ಯಾರೂ ಇಲ್ಲ, ನೀನೇ ಒಂದಿಷ್ಟು ತಾಳುವುದು ಎನ್ನಲು ನಾನಲ್ಲದೇ ನಿನ್ನನ್ನು ಪ್ರತಿಭಟಿ ತಕ್ಕ ಶೂರರೂ ಇದ್ದಾರೆಯೇ ? ೮೦. ಎನ್ನಲು ಬೆಳ್ಳಗೆ ಮಸೆದಿರುವ ಬಾಣದ ಮಳೆ, ಮೊನಚಾದ ಬಾಣಗಳ ತುಂತುರುಮಳೆ- ಇವು ಅತಿಶಯವಾದವು. ಅಲ್ಲಿಯ ಕಿರಿಯಬಾಣಗಳ ನಿರಂತರವಾದ ಮಳೆ ಇದು ಎನಿಸಿ ಪಾಂಡ್ಯನು ಬಾಣಗಳನ್ನು ಕರೆದನು. ೮೧. ಅವಷ್ಟನ್ನೂ ಹಾಗೆ ಹಾಗೆಯೇ ಉತ್ಸಾಹಗೊಂಡು ಜಾಗ್ರತೆಯಾಗಿ ಕತ್ತರಿಸಿ ಬಾಣದ ಮಳೆಯಿಂದ (ಶರವರ್ಷ) ಸಂಪೂರ್ಣವಾಗಿ ತುಂಡರಿಸಿ, ನಿಲ್ಲದೆ ಅಶ್ವತ್ಥಾಮನ ಬಾಣಗಳು ನಡುವೆ ಬರಗಾಲವನ್ನು ಉಂಟುಮಾಡಿದುವು. ೮೨. ಬರಗಾಲದ ಮಧ್ಯದಲ್ಲಿ ಬರಸಿಡಿಲು ಇಡುಕುಮುಡುಕುಗಳಲ್ಲಿಯೇ ಶಬ್ದಮಾಡಿ ಹೋಯಿತು ಎನ್ನಿಸಿ ಅಶ್ವತ್ಥಾಮನ ಬಹಳ ಹರಿತವಾದ ಬಾಣಗಳು ಪಾಂಡ್ಯನ ರಥದ ಅಚ್ಚುಮುರಿದು ನಾಶವಾಗಿ ಕುಸಿಯುವಂತೆ ಹೊಡೆದುವು. ೮೩. ರಥವಿಲ್ಲದ ಕೋಪದಿಂದ ನಡುಗುತ್ತಿರುವ ತುಟಿಯಳ್ಳ ಪಾಂಡ್ಯನು ಮುರಿದು ಬೀಳಲು ಬಾವುಟವೂ ಪೂರ್ಣವಾಗಿ ಬಿರಿಯಲು (ಪಾಂಡ್ಯನು) ಅಶ್ವತ್ಥಾಮನ ಎದೆಯನ್ನೂ ಬಿರಿದುಹೋಗುವಂತೆ ಹೊಡೆದು ಆನೆಯ ಬೆನ್ನಿಗೆ ಬಂದನು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy