SearchBrowseAboutContactDonate
Page Preview
Page 593
Loading...
Download File
Download File
Page Text
________________ ೫೮೮ / ಪಂಪಭಾರತಂ ಕಂ।। ಅಳವೆನಿತು ಚಾಪವಿದ್ಯಾ ಬಳವೆನಿತುಂಟನಿತುಮೆಯವಂದಿಲ್ಲಿ ಪುದುಂ | ಗೊಳಿಳಿದುದೆನೆ ಕಾನಲ ವಿಳಯಾಂತಕರೂಪನಾದನಶ್ವತ್ಥಾಮಂ || 2.9% ವ|| ಆಗಳ್ ಸವ್ಯಾಪಸವ್ಯ ಭ್ರಾಂತೋದ್ಧಾಂತಂಗಳೆಂಬ ರಥಕಲ್ಪ ವಿಶೇಷ ವಿನ್ಯಾಸಂಗಳ ನಡೆದು ಸಾರಥಿಗಳ ಚೋದಿಸುವಾಗಳಿರ್ವರ ರಥಂಗಳು ಸುಟ್ಟುರೆಯೊಳಗಣ ತಗೆಲೆಯಂತ ತಿನ ತಿರಿಯ ಚoll ಮುಳಿಸಳುರ್ದೆಯ ಕಣ್ಣಳೊಳೆ ಪೀರ್ವವೊಲುಗ್ರಶರಾನಲಾರ್ಚಿಯಿಂ ದಳುರ್ವವೊಲೆಯ ಚೋದಿಸಿ ವರೂಥಮನಿಂ ಬರ್ದುಕಾಡೆಯೆಂದಸುಂ | ಗೊಳೆ ಮೊನೆಯಂಬುಗಳ ತನುವನಳಳಿವೋಪಿನಮೆಚ್ಚು ನೆತ್ತರು ಚಳಿಸಿ ರಥಂಗಳೊಳ್ ಕೊಳಗೊಳುತ್ತಿರೆ ಕಾದಿದರೋರ್ವರೋರ್ವರೊಳ್ || 22 ವ|| ಅಂತು ಮುಳಿಸಿನ ಮೋಪಿನ ಗಂಡಮಚ್ಚರದ ಮೆಚ್ಚುವಣಿಗೆಯಂಕಕಾರಕ್ಕತುಳ ಕೈಕೆಯಿಂ ಸೂವಂತೊರ್ವರೋರ್ವರೊಳ್ ಕಾದೆ 6211 ಸೂತರುರುನಂ ರಥ ತುರಂಗಮರಾಜ ಸುರುಳಿನಂ ಚಳ ತೇತುಗಳೆತ್ತಮವ್ವಳಿಸಿ ಬೀಟ್ಟಿನಮಳ್ಳು ಕಾದಿ ಬಾಣ ಸಂ | ಘಾತದ ಕೋಳೊಳುಚ್ಚಳಿದ ನೆತ್ತರೊಳಿಚ್ಚೆಯೆ ಕೆಟ್ಟೋಡಾತನ ತನುಮಿತ್ತ ಜೋಲ್ದ ರಣಮಂ ಪೊಗಲುತ್ತಿರೆ ದೇವಕೋಟಿಗಳ ೭೭ ಬಿಸಿರಕ್ತವು ಕಣ್ಣನ್ನು ಆವರಿಸಲು ಅದನ್ನು (ಬೆರಳಿನಿಂದ) ಸೀಂಟಿ ಕಳೆದು ಬಾಣದ ಮಧ್ಯದವರೆಗೂ ನಾಟಿಕೊಂಡಿದ್ದ ಹರಿತವಾದ ಬಾಣಗಳನ್ನು ಗರಿಗಳೊಡನೆ ಕಿತ್ತು ಬಿಸಾಡಿದನು. ೭೫. ತನ್ನ ಶಕ್ತಿಯೆಷ್ಟಿದೆ, ಬಿಲ್ವಿದ್ಯೆಯ ಬಲವೆಷ್ಟಿದೆ ಅಷ್ಟನ್ನೂ ಇಲ್ಲಿ ಸಂಪೂರ್ಣವಾಗಿ ಹೊಂದಾಣಿಕೆಯಾಗುವ ಹಾಗೆ ಸೇರಿಸಿದೆ ಎನ್ನುವ ಹಾಗೆ ಅಶ್ವತ್ಥಾಮನು ಪ್ರಳಯಾಗ್ನಿಯ ಮತ್ತು ಪ್ರಳಯಕಾಲದ ಯಮನ ರೂಪವುಳ್ಳವನಾದನು. ವ|| ಆಗ ಸವ್ಯ, ಅಪಸವ್ಯ, ಭ್ರಾಂತ ಮತ್ತು ಉದ್ಧಾಂತಗಳೆಂಬ ರಥವಿದ್ಯೆಯ ನಾನಾರೀತಿಗಳನ್ನು ತಿಳಿದು ಸಾರಥಿಗಳು ನಡೆಸುತ್ತಿರಲು ಇಬ್ಬರ ತೇರುಗಳೂ ಸುಂಟರುಗಾಳಿಯ ಮಧ್ಯದಲ್ಲಿರುವ ತರಗೆಲೆಯ ಹಾಗೆ ತಿರನೆ ಸುತ್ತುತ್ತಿದ್ದುವು. ೭೬. ಕೋಪವು ಹರಡಿ ಕಣ್ಣುಗಳಿಂದಲೇ ಕುಡಿಯುವ ಹಾಗೆ ಭಯಂಕರವಾದ ಬಾಣಾಗ್ನಿಯ ಜ್ವಾಲೆಯಿಂದ ಸುಡುವ ಹಾಗೆ ರಥವನ್ನು ಹತ್ತಿರಕ್ಕೆ ನಡೆಸಿ 'ಇನ್ನು ನೀನು ಬದುಕಲಾರೆ' ಎಂದು ಮೊನಚಾದ ಬಾಣಗಳು ಪ್ರಾಣಾಪಹಾರಮಾಡುವಂತೆ ಶರೀರವನ್ನು ನಾಟಿ ನಾಶವಾಗುತ್ತಿರಲು ಬಾಣ ಪ್ರಯೋಗಮಾಡಿ ರಕ್ತವು ಚಿಮ್ಮಿ ರಥದಲ್ಲಿಯೇ ಕೊಳವಾಗುತ್ತಿರಲು ಒಬ್ಬರೊಡನೊಬ್ಬರು ಕಾದಿದರು. ವ|| ಹಾಗೆ ಕೋಪದ, ಆಸಕ್ತಿಯ, ಪೌರುಷದ, ಮಾತ್ಸರ್ಯದ, ಪರಸ್ಪರ ಮೆಚ್ಚಿಗೆಯುಳ್ಳ ಜಟ್ಟಿಗಳು ಮಲ್ಲಯುದ್ಧಕ್ಕೆ ಅಂಕಕಾರರು ಮೇಲಿಂದ ಮೇಲಕ್ಕೆ ಸರದಿಯ ಪ್ರಕಾರ ಹತ್ತಿ ಇಳಿದು ಯುದ್ಧಮಾಡುವ ಹಾಗೆ ಒಬ್ಬರೊಡನೊಬ್ಬರು ಕಾದಿದರು ೭೭. ಸಾರಥಿಗಳು ಉರುಳಿ ಬೀಳುವ ಹಾಗೆಯೂ ರಥಕುದುರೆಗಳ ಗುಂಪು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy