SearchBrowseAboutContactDonate
Page Preview
Page 571
Loading...
Download File
Download File
Page Text
________________ ೫೬೬ | ಪಂಪಭಾರತಂ ಹರಿಣೀಪುತಂ |ಗುರುಗಳೆನಗಂ ಭಾರದ್ವಾಜಂಗಮೊರ್ವರ ವಿದ್ದೆಯೊಳ್ ಪುರುಡ ಪಿರಿದುಂಟೆನ್ನಂ ಬಿಲ್ಕಲೆಯೊಳ್ ಮಿಗಲೆಯ ಬೇ || ರ್ವರಿದ ಪಗೆಯುಂ ಬನ್ನಂಬಟ್ಟೆನ್ನ ಮುನ್ನಿನ ಬನ್ನಮುಂ ಪಿರಿದದೆ ನೆವಂಗೊಂಡಾನಿಂದಿಲ್ಲಿ ನೀಗದ ಮಾಸ್ಟನೇ || ೧೯ ವ|| ಎಂದೊಂದಕ್ಕೋಹಿಣೀ ಬಲಂಬೆರಸು ಪ್ರಳಯದ ಮಾರಿಯುಮಾಕಾಶದ ಕವಿಯುಂ ನೆಲದ ಕಲ್ಲಯುಂ ಮುನ್ನವೆ ಮೇರೆದಪ್ಪುವುದುಮಂ ತನ್ನೊಳಳವಡಿಸಿಕೊಂಡು ತಾಗಿದಾಗ ಶಲ್ಯನೊಳ್ ಸಾತ್ಯಕಿ ಶಾರದ್ವತನೊಳ್ ಕೃತಾಂತನಂದನಂ ಕೃತವರ್ಮನೊಳ್ ನಕುಳಂ ಶಕುನಿಯೊಳ್ ಸಹದೇವಂ ಕರ್ಣನೊಳ್ ಭೀಮಸೇನನಶ್ವತ್ಥಾಮನೊಳಕಳಂಕ ರಾಮಂ ದ್ವಂದ್ವಯುದ್ಧದೊಳ್ ತಾಗಿದಾಗ ಮ|| ಸ ದೆಸೆಯೆಲ್ಲಂ ತೀವ್ರ ಬಾಗಾಳಿಯೋಳೆ ಮಡದಂತಂಬರಂ ಬಾಣದಿಂದಂ ಮುಸುಕಿಟ್ಟಂತಾಗ ಬೇಗಂ ತುಡುವ ಬಿಡುವ ಸೂಳಯ್ಯ ಬೇಗಂಗಳಂ ನಿ | ಟ್ವಿಸಲಾರ್ಗ೦ ಬಾರದಂತಾಗಸದಳವಿಸೆ ತದ್ರಾಜಚಕ್ರ ಪೊದಟ್ಟ ರ್ಬಿಸಿದತ್ತುದ್ದಾಮ ಮೌರ್ವಿ ರವ ಮುಖರ ಮಹಾಚಾಪ ಚಕ್ರಾಂಧಕಾರಂ ೨೦ ವlt ಅನ್ನೆಗಂ ಕಪ್ಪಂಗವಿಯಾಗಿ ಕವಿದ ದ್ರುಪದ ವಿಳಯಾನಳನಂ, ದೊಣಂ ಮಹಾದ್ರೋಣ ಪುಷ್ಕಳಾವರ್ತಕಂಗಳೆಂಬ ವಿಳಯ ಕಾಳ ನೀಳ ಜಳಧರವರ್ಷಂಗಳಿಂ ನಂದಿಸೆಯುಂ ಹರಿತವಾದ ಬಾಣರಾಶಿಯಿಂದ ಬೇಲಿಯನ್ನು ಹಾಕಿ ವೀರರಸಕ್ಕೆ ಆವಾಸಸ್ಥಾನವಾಗಿದ್ದ ದ್ರೋಣಾಚಾರ್ಯನನ್ನು ದ್ರುಪದನು ನೋಡಿ ಸೈರಿಸಲಾರದೆ ಮುಂದೆ ಬಂದು ೧೯. ನನಗೂ ದ್ರೋಣನಿಗೂ ವಿದ್ಯಾಭ್ಯಾಸದಲ್ಲಿ ಒಬ್ಬರೇ ಗುರು. ನನ್ನನ್ನು ಧನುರ್ವಿದ್ಯೆ ಯಲ್ಲಿ ಮೀರಿಸಬೇಕೆಂಬ ಸ್ಪರ್ಧೆಯೂ ಅವನಲ್ಲಿ ಉಂಟು. ನನಗೆ ರೂಢಮೂಲವಾದ ಶತ್ರುತ್ವವೂ ತಿರಸ್ಕೃತವಾದ ಮೊದಲಿನ ಅವಮಾನವೂ ಹಿರಿದಾಗಿಯೇ ಇದೆ. ಅದನ್ನೇ ಕಾರಣವನ್ನಾಗಿ ಮಾಡಿಕೊಂಡು ಇಂದು ಇಲ್ಲಿ ಅವುಗಳನ್ನು ಪರಿಹರಿಸದೆ ಬಿಡುತ್ತೇನೆಯೇ? ವ| ಎಂದು ಒಂದಕ್ಟೋಹಿಣಿ ಸೈನ್ಯದಿಂದ ಕೂಡಿ ಪ್ರಳಯಕಾಲದ ಮಾರಿದೇವತೆಯೂ ಆಕಾಶದ ಮುಚ್ಚಳವೂ ನೆಲದ ಮೇರೆಯಾದ ಸಮುದ್ರವೂ ಮೊದಲೇ ತಮ್ಮ ಎಲ್ಲೆಯನ್ನು ಮೀರುವಂತೆ ತಾಗಿದನು. ಶಲ್ಯನೊಡನೆ ಸಾತ್ಯಕಿಯೂ ಕೃಪನೊಡನೆ ಧರ್ಮರಾಯನೂ ಕೃತವರ್ಮನೊಡನೆ ನಕುಳನೂ ಶಕುನಿಯೊಡನೆ ಸಹದೇವನೂ ಕರ್ಣನೊಡನೆ ಭೀಮನೂ ಅಶ್ವತ್ಥಾಮನೊಡನೆ ಅಕಳಂಕರಾಮನಾದ ಅರ್ಜುನನೂ ದ್ವಂದ್ವಯುದ್ಧದಲ್ಲಿ (ಇಬ್ಬರು ಜೊತೆಜೊತೆಯಾಗಿ ಮಾಡುವ ಯುದ್ದ ಸಂಧಿಸಿದರು. ೨೦. ದಿಕ್ಕುಗಳೆಲ್ಲವೂ ತೀಕ್ಷವಾದ ಬಾಣಸಮೂಹದಿಂದ ಹೆಣೆದ ಹಾಗಾದುವು. ಆಕಾಶವು ಬಾಣದಿಂದ ಮುಸುಕಿಕ್ಕಿದಂತಾಯಿತು. ಬಾಣಗಳನ್ನು ಬಿಲ್ಲಿಗೆ ಹೂಡುವ ಮತ್ತು ಅದನ್ನು ಪ್ರಯೋಗಿಸುವ ಸರದಿಯ ಕೈಗಳ ವೇಗವನ್ನು ನೋಡುವುದಕ್ಕೆ ಯಾರಿಗೂ ಸಾಧ್ಯವಿಲ್ಲದ ಹಾಗಾಯಿತು. ಆ ರಾಜಸಮೂಹವು ವಿಶೇಷವಾಗಿ ಬಾಣಪ್ರಯೋಗ ಮಾಡುವುದಕ್ಕಾಗಿ (ಮೊದಲು) ಮಾಡಿದ ಹೆದೆಯ ಟಂಕಾರ ಶಬ್ದದಿಂದ ಶಬ್ದಾಯಮಾನವಾಗಿರುವ ಬಿಲ್ಲುಗಳ ಸಮೂಹದ ಕತ್ತಲೆಯು ವ್ಯಾಪಿಸಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy