SearchBrowseAboutContactDonate
Page Preview
Page 570
Loading...
Download File
Download File
Page Text
________________ ದ್ವಾದಶಾಶ್ವಾಸಂ | ೫೬೫ ಮ|| ಸ || ಎಳೆಯುಂ ಬ್ರಹ್ಮಾಂಡಮುಂ ತಾಗುವವೊಲುಭಯಸೈನ್ಯಾಬ್ರಿಗಳ ತಾಗಿ ಬಿಲ್ ಬಿ ಲೊಳುದದ್ವಾಶ್ವಂಗಳೊಳಣಿಯಣಿಯೊಳ್ ಸ್ಕಂದನಂ ಸ್ಕಂದನೆಘಂ 1 ಗಳೊಳುಿಭಂ ಮದೇಭಂಗಳೊಳಿಟಿಯ ತೆರಳರ್ಪ ಕೆನ್ನೆತ್ತರಿಂದೋ ಕುಳಿಯಂ ಖಂಡಂಗಳೋಂದಿಂಡೆಯೊಳ ಜವನಡುರ್ತಾಡಿದಂತಾದುದಾಗಳ್ || ೧೭ ವ|| ಅಂತು ವೀರರಸದ ತೋಯುಂ ನೆತ್ತರ ತೊಳೆಯುಮೊಡನೊಡನೆ ಬೆಳ್ಳಂಗೆಡೆದು ಪರಿಯ ಚತುರ್ಬಲಂಗಳ್ ಕಾದಿ ಬಸವಳದು ಪಂಪಿಂಗಿ ನಿಂದಾಗಳ್ ವಿರಾಟಂ ತನ್ನ ಚತುರ್ಬಲಂಗಳನೊಂದುಮಾಡಿಕೊಂಡು ಪಾಂಡವರ್ ತನ್ನ ಮಾನಸಿಕೆಯಂ ನಚ್ಚಿ ತನ್ನ ಪೋಲಲೋಳಜ್ಞಾತವಾಸಂ ಮಾಡಿದುದುಮಂ ದಕ್ಷಿಣೋತ್ತರ ಗೋಗ್ರಹಣದೊಳ್ ತನಗಾಗಿ ಕಾದಿ ತುಣುವಂ ಮಗುಟ್ಟಿದುದುಮಂ ನೆನೆದುಮll ಸ ! ಮಗಳಂ ಪಾರ್ಥಾತ್ಮಜಂಗಂ ತಲೆ ಬತಿವೆಯೆಂದಿತ್ತುದಂ ತನ್ನ ಮಕ್ಕಳೇ ನೆಗಚ್ಚಾ ಸಂಗ್ರಾಮದೊಳ್ ಸತ್ತುದುಮನೆ ಮನದೋಳ್ ತಾಲ್ಲಿ ತಾಪಾಗಳಾ ಜೆ | ಟೈಗನಂ ಕುಂಭೋದ್ಭವಂ ಬಂದದಿರದಿದಿರನಾಂತೊಂದೆ ಕೆಲ್ಲಂಬಿನಿಂ ಮೆ ಗೆ ಪಾರ್ದಾರ್ದೆಚನೇಸಿಂ ತಲೆಪಳೆದು ಸಿಡಿಲತ್ತ ಬೀಳ್ವನ್ನಮಾಗಳ್ || ೧೮ ವll ಅಂತು ವಿರಾಟನನಿಕ್ಕಿ ಮನದೊಳಳ್ಳಾಟಮಿಲ್ಲದರಿತೃಪಕೋಟಿಯನಾಟರಲೆಂದಾ ಸ್ಫೋಟಿಸಿ ನಿಶಿತ ಶರಕೋಟಿಯೊಳ್ ತಳಿಗೋಂಟೆಯನಿಕ್ಕಿ ವೀರರಸನಿಕೇತನನಾಗಿರ್ದ ಕಳಶಕೇತನನಂ ನೋಡಿ ದ್ರುಪದಂ ಸೈರಿಸದೆಪ್ರಾರಂಭವಾಯಿತು. ೧೭. ಭೂಮಿಯೂ ಬ್ರಹ್ಮಾಂಡವೂ ತಾಗುವ ಹಾಗೆ ಎರಡು ಸೇನಾಸಮುದ್ರಗಳೂ ತಾಗಿದುವು. ಬಿಲ್ದಾರರು ಬಿಲ್ದಾರರಲ್ಲಿಯೂ ಅತ್ಯುತ್ತಮವಾದ ಅಶ್ವಾರೋಹಕರು ಅಶ್ವಾರೋಹಕರಲ್ಲಿಯೂ ಕಾಲುಬಲದವರು ಕಾಲುಬಲ ದವರಲ್ಲಿಯೂ ತೇರು ತೇರುಗಳ ಸಮೂಹದಲ್ಲಿಯೂ ಶ್ರೇಷ್ಠವಾದ ಆನೆಗಳು ಮದ್ದಾನೆಗಳಲ್ಲಿಯೂ ಸೇರಿಕೊಂಡು ಯುದ್ಧಮಾಡಿದುವು. ಅಲ್ಲಿ ಹರಿದು ಬರುತ್ತಿರುವ ರಕ್ತದಿಂದಲೂ ಮಾಂಸಖಂಡಗಳ ರಾಶಿಯಿಂದಲೂ ಯಮನು ಮೇಲೆಬಿದ್ದು ಓಕುಳಿಯಾಟವನ್ನಾಡಿದಂತಾಯಿತು. ವ|| ವೀರರಸದ ಪ್ರವಾಹವೂ ರಕ್ತಪ್ರವಾಹವೂ ಜೊತೆ ಜೊತೆಯಲ್ಲಿಯೇ ಹುಚ್ಚುಹೊಳೆಯಾಗಿ ಹರಿದುವು. ಚತುರಂಗಸೈನ್ಯವೂ ಕಾದಿ ಶಕ್ತಿಗುಂದಿ ಹಿಂದಕ್ಕೆ ಹೋಗಿ ನಿಂತವು. ವಿರಾಟನು ತನ್ನ ನಾಲ್ಕು ತೆರನಾದ ಸೈನ್ಯವನ್ನೂ ಒಟ್ಟುಗೂಡಿಸಿ ಪಾಂಡವರು ತನ್ನ ಪೌರುಷವನ್ನು ನಂಬಿ ತನ್ನ ಪಟ್ಟಣದಲ್ಲಿ ಅಜ್ಞಾತವಾಸಮಾಡಿದುದನ್ನೂ ದಕ್ಷಿಣೋತ್ತರ ಗೋಗ್ರಹಣದಲ್ಲಿ ತನಗಾಗಿ ಯುದ್ದಮಾಡಿ ಗೋವುಗಳನ್ನು ಹಿಂತಿರುಗಿಸಿದುದನ್ನೂ ಜ್ಞಾಪಿಸಿಕೊಂಡು ೧೮. ತನ್ನ ಮಗಳಾದ ಉತ್ತರೆಯನ್ನು ಅರ್ಜುನನ ಮಗನಾದ ಅಭಿಮನ್ಯುವಿಗೆ ಬಳುವಳಿಯಾಗಿ ಕೊಟ್ಟುದನ್ನೂ ಆ ಪ್ರಸಿದ್ಧವಾದ ಯುದ್ದದಲ್ಲಿ ತನ್ನ ಮಕ್ಕಳು ಸತ್ತುದನ್ನೂ ಮನಸ್ಸಿನಲ್ಲಿ ಜ್ಞಾಪಿಸಿಕೊಂಡು ತಾಗಿದನು. ದ್ರೋಣನು ಹೆದರದೆ ಬಂದು ಪ್ರತಿಭಟಿಸಿ ಒಂದೆ ಕೆಲ್ಲಂಬಿ (?) ನಿಂದ ಮೆಲ್ಲಗೆ ಗುರಿಯಿಟ್ಟು ಆರ್ಭಟಮಾಡಿ ತಲೆಹರಿದು ಸಿಡಿದು ಅತ್ತ ಕಡೆ ಬೀಳುವ ಹಾಗೆ ಹೊಡೆದನು. ವll ಹಾಗೆ ವಿರಾಟನನ್ನು ಹೊಡೆದು ಮನಸ್ಸಿನಲ್ಲಿ ಸಂಶಯವೇ ಇಲ್ಲದೇ ಶತ್ರುರಾಜಸಮೂಹದ ಮೇಲೆ ಬೀಳಬೇಕೆಂದು ತೋಳನ್ನು ತಟ್ಟಿ ಶಬ್ದಮಾಡಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy