SearchBrowseAboutContactDonate
Page Preview
Page 572
Loading...
Download File
Download File
Page Text
________________ ದ್ವಾದಶಾಶ್ವಾಸಂ | ೫೬೭ ನಂದದೆ ಮುಟ್ಟಿವರೆ ದುರ್ಯೋಧನನನೇಕಾಯುಧ ಶರಭರಿತಂಗಳಪ್ಪ ರಥಂಗಳಂ ದ್ರೋಣಾಚಾರ್ಯರ ಪೆಜಗೆ ನಿವಿಸಿಯಾಯುಧಾಧ್ಯಕ್ಷರು ಪೇಟ್ಟು ಚಕ್ರರಕ್ಷೆಗೆ ದುಶ್ಯಾಸನಾದಿಗಳೊರಸು ತಾನೆ ಬಂದಿರ್ದಾಗಲ್ ಚಂtು ದ್ರುಪದ ಬಳಾಂಬುರಾಶಿಯನಗುರ್ವಿಸೆ ಪರ್ವಿಪ ಬಾಡಬಾಗ್ನಿಯಾ ಯುಪಚಯಮಪ್ಪ ಬಿಲ್ಲೊವಜನಂಬಿನ ಬೆಳ್ಳರಿಯಾದಮಾ ರಥ | ದ್ವಿಪಘಟೆಯೆಂಬಿವನಂಬಿನೊಳೆ ಪೂಟ್ಟು ಪಡಲ್ವಡೆ ತಿಣ್ಣಮೆಚ್ಚನಾ ತ್ರಿಪುರಮನೆಚ್ಚ ರುದ್ರನ ನೆಗಟ್ಯುಮಂ ಗೆಲೆ ಕುಂಭಸಂಭವಂ || ೨೧ ವ|| ಅಂತು ತನ್ನ ಬಲಮೆಲ್ಲಮಂ ಜವನಂತೊಕ್ಕಲಿಕ್ಕೆ ಕೊಲ್ಯ ಕಳಶಕೇತನಂ ಯಜ್ಞಸೇನ ನೇನುಂ ಮಾಣದಾತನ ಮೇಲೆ ಬಟ್ಟನಂಬಿನ ಬೆಳ್ಳರಿಯುಮಂ ಕೆಲ್ಲಂಬಿನ ತಂದಲುಮಂ ಪಾರಯಂಬಿನ ಸೋನೆಯುಮಂ ಸುರಿಯೆ ಕಳಶಯೋನಿ ಮುಳಿದುಮll ಪದಿನೆಂಟಂಬಿನೊಳೆಚೊಡೆಚ್ಚು ಪದಿನೆಂಟಸ್ತಂಗಳಿಂ ಸೀಳು ಕೋ ಹದಿನೆಂಬತ್ತು ಸರಂಗಳಿಂ ಗುರು ಭರಂಗೆಯ್ಕೆಚೊಡೆಂಬತ್ತು ಬಾ | ಣದಿನಾಗಳ್ ಕಡಿದುಗ್ರ ಸೂತ ಹಯ ಸಂಘಾತಂಗಳಂ ತಿಣ್ಣಮೆ ಚಿದಿರೊಳ್ ನಿಲ್ಲದಿರೋಡು ಸತ್ತೆಯೆನುತುಂ ಪಾಂಚಾಳರಾಜಾಧಿಪಂ 11 ೨೨ ಹೆದರಿಸಿತು. ವ|ಅಷ್ಟರಲ್ಲಿ ಆನೆಯನ್ನು ಹಿಡಿಯುವ ಗುಳಿಯ ಮುಚ್ಚಳದಂತೆ ಸಾಂದ್ರವಾಗಿ ಮುತ್ತಿಕೊಳ್ಳುತ್ತಿರುವ ದ್ರುಪದನೆಂಬ ಪ್ರಳಯಾಗ್ನಿಯನ್ನು ದ್ರೋಣನು ಮಹಾದ್ರೋಣ ಮತ್ತು ಪುಷ್ಕಳಾವರ್ತಕಗಳೆಂಬ ಪ್ರಳಯಕಾಲದ ಕರಿಯ ಮೋಡಗಳ ಮಳೆಯಿಂದ ಆರಿಸಿದರೂ ಆರದೆ ಮುಟ್ಟುವ ಹಾಗೆ ಹತ್ತಿರಕ್ಕೆ ಬರಲು ದುರ್ಯೊಧನನು ಅನೇಕ ಆಯುಧ ಮತ್ತು ಬಾಣಗಳಿಂದ ತುಂಬಿರುವ ತೇರುಗಳನ್ನು ದ್ರೋಣಾಚಾರ್ಯರ ಹಿಂದೆ ಸ್ಥಾಪಿಸಿ ಆಯುಧಾಧ್ಯಕ್ಷರನ್ನು ನೇಮಿಸಿ ಚಕ್ರವ್ಯೂಹದ ರಕ್ಷೆಗೆ ದುಶ್ಯಾಸನಾದಿ ಗಳೊಡನೆ ತಾನೆ ಬಂದು ನಿಂತನು. ೨೧. ಅಭಿವೃದ್ದಿಯಾಗುತ್ತಿರುವ ದ್ರೋಣಾ ಚಾರ್ಯರ ಬಾಣಗಳ ಬಿಳಿಯ ಸೋನೆಯ ಮಳೆಯು ದ್ರುಪದನ ಸೈನ್ಯಸಾಗರವನ್ನು ಹೆದರಿಸುವ ಮತ್ತು ಬೆದರಿಸುವ ಬಡಬಾಗ್ನಿಯಾಯಿತು. ಆ ರಥಗಳೂ ಆನೆಯ ಸಮೂಹವೂ ಬಾಣಗಳಲ್ಲಿ ಹೂತುಹೋಗಿ ಚೆದುರಿಹೋಗುತ್ತಿರಲು ದ್ರೋಣನು ಆ ತ್ರಿಪುರವನ್ನು ಹೊಡೆದ ಈಶ್ವರನ ಕಾರ್ಯವನ್ನೂ ಮೀರಿಸಿ ತೀಕ್ಷವಾಗಿ ಹೊಡೆದನು. ವ|| ಹಾಗೆ ತನ್ನ ಸೈನ್ಯವೆಲ್ಲವನ್ನೂ ಯಮನಂತೆ ಒಕ್ಕಣೆಮಾಡಿ ಕೊಲ್ಲುತ್ತಿರುವ ದ್ರೋಣನನ್ನು ದ್ರುಪದನು ಹೇಗೂ ತಡೆಯಲಾರದೆ ಅವನ ಮೇಲೆ ಗುಂಡಾದ ಅಲಗುಳ್ಳ ಬಾಣಗಳ ಬಲವಾದ ಸೋನೆಮಳೆಯನ್ನೂ ಕಲ್ಲಂಬುಬಾಣಗಳ ತುಂತುರು ಮಳೆಯನ್ನೂ ಹಾರೆಯಾಕಾರದ ಬಾಣಗಳ ಜಡಿಮಳೆಯನ್ನೂ ಸುರಿಯಲು ದ್ರೋಣನು ಕೋಪಗೊಂಡನು. ೨೨. ಹದಿನೆಂಟು ಬಾಣಗಳಿಂದ ಹೊಡೆದರೆ ಹದಿನೆಂಟಸ್ತಗಳಿಂದ ಅವನ್ನು ಸೀಳಿದನು. ದ್ರೋಣನು ಕೋಪದಿಂದ ಎಂಬತ್ತು ಬಾಣಗಳಿಂದ ಆರ್ಭಟ ಮಾಡಿ ಹೊಡೆದರೆ ದ್ರುಪದನು ಎಂಬತ್ತು ಬಾಣಗಳಿಂದ ಆಗಲೇ ಕತ್ತರಿಸಿ ಹಾಕಿದನು. ದ್ರೋಣನ ಸಾರಥಿ ಮತ್ತು ಭಯಂಕರವಾದ ಕುದುರೆಗಳ ಸಮೂಹಗಳನ್ನು ತೀಕ್ಷವಾಗಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy