________________
೫೬೪ / ಪಂಪಭಾರತಂ
ಒಂದಕ್ಕೋಹಿಣಿ ನುರ್ಗಿದು ದಿಂದಿವನ ಕಬಂಧಘಾತದಿಂ ಸನಿತಂ | ಕೊಂದನಿವನಿವನನಳ್ಳುತಿ
ಕೊಂದಳವಿನತನಯನಲ್ಲದಂಗೋಪುಗುಮೇ ||
ವ|| ಎಂದೆರಡುಂ ಪಡೆಗಳುಂ ದೇವರ ಪಡೆಗಳು ಕರ್ಣನನೆ ಪೊಗ ಕಾದಲ್ವೇಡೆಂಬಂತುಭಯಸೈನ್ಯಂಗಳಡ್ಡವಾಗಿ ಕುಲಗಿರಿ ಕೆಡೆವಂತಯ್ಯಾವುದು ನೆಲನೊಡಲಳವಿ ಯಾಗೆ ಬಿಟ್ಟೆರ್ದ ಘಟೋತ್ಕಚನ ಸಾವಿಂಗೆ ಕರಮದಲ್ಲು ಕಣ್ಣ ನೀರಂ ಸಿಡಿವಂತಕಾತ್ಮಜನನನಂತ ನಿಂತೆಂದಂ
ಮ||
೧೫
ದಿವಿಜಾಧೀಶನ ಕೊಟ್ಟ ಶಕ್ತಿಯನದಂ ಕರ್ಣಂ ನರ೦ಗೆಂದು ಬ ಯವನಿಂದಿಂದವೆಯೇ ವಂದೊಡದಂದಿಂದಾತನಂ ಕೊಂದನಿ | ವನಂ ಕೊಲ್ವುದು ಮೊಗ್ಗದರ್ಕಲವೇಡೆಂಬನ್ನಮತ್ತೇಳೆದಂ ರವಿ ಪೂರ್ವಾಚಲಮಂ ನಿಜಾತ್ಮಜನ ಗೆಲ್ಲುಗ್ರಾಜಿಯಂ ನೋವೋಲ್ || ೧೬
ವ|| ಆಗಳ್ ಕುಂಭಸಂಭವಂ ಶೋಣಾಶ್ವಂಗಳೊಳ್ ಪೂಡಿದ ಕನಕ ಕಳಶಧ್ವಜ ವಿರಾಜಿತಮಪ್ಪ ತನ್ನ ರಥಮನೇ ಘಟೋತ್ಕಚನ ಕಳೇಬರ ಗಿರಿ ದುರ್ಗಮಲ್ಲದ ಸಮಭೂಮಿಯೊಳ್ ಚತುರ್ಬಲಂಗಳನೊಂದುಮಾಡಿ ಶೃಂಗಾಟಕವ್ಯೂಹಮನೊಡ್ಡಿ ನಿಂದಾಗಳ್ ಧೃಷ್ಟದ್ಯುಮ್ನನಂ ಪಾಂಡವ ಪತಾಕಿನಿಯುಮಂ ವಜ್ರವ್ಯೂಹಮನೊಡ್ಡಿ ನಿಲೆ ಧರ್ಮಪುತ್ರನುಂ ಸುಯೋಧನನುಮೊಡನೊಡನೆ ಕೆಯ್ದಿಸಿದಾಗಳ್
ವ|| ಎಂದು ಎರಡು ಸೈನ್ಯಗಳೂ ದೇವಸಮೂಹವೂ ಕರ್ಣನನ್ನೇ ಹೊಗಳಿದವು. ಇನ್ನು ಕಾದಬೇಡಿ ಎನ್ನುವ ಹಾಗೆ ಎರಡು ಸೈನ್ಯಗಳಿಗೆ ಅಡ್ಡಲಾಗಿ ಕುಲಗಿರಿ ಕೆಡೆಯುವಂತೆ ಅಯ್ದುಗಾವುದ ಭೂಮಿಯನ್ನು ಆಕ್ರಮಿಸುವ ಶರೀರದ ಅಳತೆಯನ್ನುಳ್ಳವನಾಗಿ ಬಿದ್ದಿದ್ದ ಘಟೋತ್ಕಚನ ಸಾವಿಗೆ ವಿಶೇಷವಾಗಿ ಧರ್ಮರಾಯನು ದುಃಖಪಟ್ಟು ಕಣ್ಣೀರನ್ನು ಚಿಮ್ಮಿಸಿದನು. ಅವನನ್ನು ಕೃಷ್ಣನು ಹೀಗೆ ಸಮಾಧಾನಪಡಿಸಿದನು. ೧೬. ಇಂದ್ರನು ವರವಾಗಿ ಕೊಟ್ಟ ಶಕ್ತಾಯುಧವನ್ನು ಕರ್ಣನು ಅರ್ಜುನನಿಗೆಂದು ಮುಚ್ಚಿಟ್ಟಿದ್ದನು. ಈ ದಿನ (ತನಗೆ) ಸಾವು ಸಮೀಪಿಸಿದ್ದರಿಂದ ಆ ಶಕ್ತಾಯುಧದಿಂದ ಘಟೋತ್ಕಚನನ್ನು ಕೊಂದನು. ಇನ್ನು ಈ ಕರ್ಣನನ್ನು ಗೆಲ್ಲುವುದು ಸುಲಭ ಸಾಧ್ಯ; ಅದಕ್ಕಾಗಿ ನೀನು ದುಃಖಪಡಬೇಡ” ಎನ್ನುವಷ್ಟರಲ್ಲಿ ಆ ಕಡೆ ಸೂರ್ಯನು ತನ್ನ ಮಗನು ಗೆದ್ದ ಭಯಂಕರವಾದ ಯುದ್ಧವನ್ನು ನೋಡುವ ಹಾಗೆ ಉದಯಪರ್ವತವನ್ನೇರಿದನು. (ಸೂರ್ಯೋದಯವಾಯಿತು). ವ|| ಆಗ ದ್ರೋಣಾಚಾರ್ಯನು ಕೆಂಪುಕುದುರೆಗಳನ್ನು ಹೂಡಿದ್ದ ಚಿನ್ನದ ಕಳಶಧ್ವಜದಿಂದ ವಿರಾಜಿತವಾಗಿರುವ ತನ್ನ ರಥವನ್ನು ಹತ್ತಿ ಘಟೋತ್ಕಚನ ಶರೀರವೆಂಬ ಬೆಟ್ಟದುರ್ಗವಿಲ್ಲದ ಸಮಭೂಮಿಯಲ್ಲಿ ಚತುರಂಗಸೈನ್ಯವನ್ನು ಒಟ್ಟುಗೂಡಿಸಿ (ನಾಲ್ಕು ಬೀದಿಗಳು ಕೂಡುವ ಸ್ಥಳದಂತಿರುವ ಒಂದು ಸೇನಾರಚನೆಯನ್ನು, ಶೃಂಗಾಟಕವ್ಯೂಹವನ್ನು) ಒಡ್ಡಿ ನಿಂತನು. ದೃಷ್ಟದ್ಯುಮ್ನನು ಪಾಂಡವಸೈನ್ಯವನ್ನು ವಜ್ರವ್ಯೂಹವನ್ನಾಗಿ ಒಡ್ಡಿನಿಂತನು. ಧರ್ಮರಾಜನೂ ದುರ್ಯೋಧನನೂ (ಯುದ್ಧಪ್ರಾರಂಭಸೂಚಕವಾಗಿ) ಕೈ ಬೀಸಿದಾಗ ಪುನಃ ಯುದ್ಧ