SearchBrowseAboutContactDonate
Page Preview
Page 57
Loading...
Download File
Download File
Page Text
________________ ೫೨ | ಪಂಪಭಾರತಂ ಕಲಿತನದುರ್ಕು, ಜವ್ವನದ ಸೊರ್ಕು, ನಿಜೇಶನ ನಚ್ಚು ಮಿಕ್ಕ ತೋ ಛಲದ ಪೊಡರ್ಪು ಕರ್ಣ ನಿನಗುಳನಿತು, ಏನ್, ಎನಗುಂಟೆ, ಭಾರತಂ | ಕಲಹಂ, ಇದಿರ್ಚುವನ್ ಹರಿಗಂ, ಅಪೊಡೆ ಮೊಕ್ಕಳಮೇಕೆ, ನೀಂ ಪಳಂ | ಚಲೆದಪೆಯ ಸೂಯ್ ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್ || ಎಂದು ಬಹು ವ್ಯಂಗ್ಯವಾಗಿ ನುಡಿದು ತಾವು ಅಘಟನ ಘಟನಾಸಾಮರ್ಥ್ಯದಿಂದ ಯುದ್ಧ ಮಾಡುವುದಾಗಿ ಪ್ರತಿಜ್ಞೆ ಮಾಡುವರು. ಈ ಸನ್ನಿವೇಶ ಕರ್ಣನ ಪಾತ್ರದ ಒಂದು ಮುಖಮಾತ್ರ. ಈಗ ಹೀಗೆ ವರ್ತಿಸಿದವನು ಬೇರೊಂದು ಸಮಯದಲ್ಲಿ ಹೇಗೆ ನಡೆದುಕೊಳ್ಳುತ್ತಾನೆ! ಭೀಷರು ಶರಶಯ್ಯಾಗತರಾಗಲು ದುರ್ಯೊಧನಾದಿಗಳು ಮುಂದೆ ಕರ್ಣನಿಗೆ ಸೇನಾಪತ್ಯಾಭಿಷೇಕವನ್ನು ನಿರ್ಧರಿಸುತ್ತಾರೆ. ಆಗ ಕರ್ಣನು 'ಸುರಸಿಂಧೂದ್ಭವನಿಂ ಬಲೆಕ್ಕೆ ಪುರಾರ್‌ ಸೇನಾಧಿಪತ್ಯಕ್ಕೆ ತಕ್ಕರ್, ಲೋಕೈಕಧನುರ್ಧರಂ ಕಳಶಜಂ ತಕ್ಕಂ' ನದೀನಂದನ ಅವರಿಗೆ ಪಟ್ಟವನ್ನು ಕಟ್ಟಿ; ನಾನು ಅವರಿಗೆ ಸಹಾಯಕನಾಗಿ ಯುದ್ಧ ಮಾಡುತ್ತೇನೆ ಎಂದು ಹೇಳಿ, ತನ್ನ ಪ್ರತಿಜ್ಞೆಯನ್ನು ಲಕ್ಷ್ಯ ಮಾಡದೆ ಯುದ್ಧ ಮಾಡಿ ತನಗೆ ಇದಿರಾದ ಧರ್ಮರಾಜ ಭೀಮಸೇನರನ್ನು ಸಾಯಿಸದೆ ಬಡಿದು ತಾಯಿಗೆ ತಾನು ಕೊಟ್ಟ ವಾಗ್ದಾನಕ್ಕನುಗುಣವಾಗಿ ಅವರನ್ನು ಕೊಲ್ಲದೆ ತನ್ನ ಪರಾಕ್ರಮವನ್ನು ಮೆರೆಯುತ್ತಾನೆ. ಧೃಷ್ಟದ್ಯುಮ್ಮನಿಂದ ದ್ರೋಣಾಚಾರರು ಹತರಾಗುತ್ತಾರೆ. ಸೇನಾಧಿಪತ್ಯಕ್ಕೆ ಕರ್ಣನ ಸರದಿ ಬರುತ್ತದೆ. ಪಟ್ಟಾಭಿಷಿಕ್ತನಾದ ದಿನ ಪ್ರಾತಃಕಾಲ ನಿತ್ಯಕರ್ಮಾನುಷ್ಠಾನವನ್ನು ತೀರಿಸಿಕೊಂಡು ನಿತ್ಯದಾನಕ್ಕೆಂದು ತರಿಸಿದ ಹದಿನೆಂಟು ಕೋಟಿ ಹೊನ್ನುಗಳನ್ನು ದೀನಾನಾಥರಿಗೆ ಕೊಡುಗೈಯಿಂದ ದಾನಮಾಡಿ ಸುವರ್ಣರಥವನ್ನು ಹತ್ತಿ ಓರ್ವನೆ ಶರಶಯನದೊಳಿರ್ದ ಗಾಂಗೇಯನಲ್ಲಿಗೆ ಬಂದು ರಥದಿಂದಮಿಟೆದು ಮೂರು ಸೂಳ್ ಬಲವಂದು ತದೀಯ ಪಾದಪದ್ಮಂಗಳಂ ತನ್ನ ತಲೆಯೆಸೂಳಿಟ್ಟುಕೊಂಡು ಆನ್ ಮಾತಳೆಯದೆ, ಮುಳಿದುಂ ನಿಮ್ಮಡಿಯಂ ನುಡಿದನ್, ಉಜದೆ, ಏಳಿಸಲ್, ಏನ್ ಎಮ್ಮಳವೆ? ಮಜವುದು, ಆ ಮನ ದುಮ್ಮಚ್ಚರಮನ್, ಅಜ್ಞ ನಿಮ್ಮನ್, ಎರೆಯಲೆ ಬಂದಂ” ಧುರದೊಳ್ ನಿಮ್ಮಡಿಯುಂ ಗೆಲ್ಲಲ್, ಅರಿಯದರನ್, ಆ ಪಾಂಡುಸುತರನ್, ಎಮ್ಮಂದಿಗರ್, ಅ ಚರಿಯಲ್ಲಿ ಗೆಲ್ವೆವೆಂಬುದು ಹರಿಗನೊಳ, ಉರದೆ, ಎಂತುಂ, ಎನ್ನ ಚಲಮನೆ ಮಜವಂ ಎಂದು ಅವರ ಕ್ಷಮೆಯನ್ನು ಬೇಡುವನು. ಅದಕ್ಕೆ ಭೀಷ್ಮಾಚಾದ್ಯರು 'ನುಡಿವುದು ಪತಿಭಕ್ತಿಯ ಪೆಂಪಿಂ ನೀಂ ನುಡಿದಯ್ ಪೆಜತಂದದಿಂ ನುಡಿದೆಯ, ಎಂದುದೇಂ ತಪ್ಪಾದುದೇ? ಎಮೊವಜರ್ ಜಸಂಬಡೆದ ಭಾರ್ಗವರಪ್ಪದಚೆಂದಂ ನಾಂ ನಂಟರುಮಂಗ ಮಹೀಪತಿ ಅಲ್ಲದೆಯುಂ ನೀಂ ನಮಗೆ ಕುಂತಿಯ ಗಾಂಧಾರಿಯ ಮಕ್ಕಳ ಲೆಕ್ಕದೆ ಮೊಮ್ಮನೈಸೆ'
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy