SearchBrowseAboutContactDonate
Page Preview
Page 56
Loading...
Download File
Download File
Page Text
________________ ಉಪೋದ್ಘಾತ | ೫೧ ಪಿಡಿಯಂ ಪುರಿಗಣೆಯಂ ನರನ್, ಎಡೆಗೊಂಡೊಡಂ, ಉಟದ ನಿನ್ನ ಮಕ್ಕಳನ್, ರ್ಇ, ಏ ರ್ದೊಡಂ ಅಟಿಯಂ ಪರ್ಜಸಮನೆ ಪಿಡಿದು, ಎನ್ನನೆ ರಣದೊಳ್‌, ಅಚವೆಂ ಇರದಡಿಯಂ ಎಂತಹ ನಿರ್ಧಾರ! ಮುಂದೆ ಯುದ್ಧವೇ ಕೈಗಟ್ಟಿತು. ಕರ್ಣನ ಸ್ವಾಮಿನಿಷ್ಠೆ ಸ್ವಲ್ಪವೂ ಸಡಿಲವಾಗಲಿಲ್ಲ. ಕುರುಕುಲಪಿತಾಮಹರಾದ ಭೀಷ್ಮರಿಗೆ ಪ್ರಥಮ ಸೇನಾಪಟ್ಟಾಭಿಷೇಕ ವಾಯಿತು. ಕರ್ಣನಿಗೆ ಆ ವಿಷಯದಲ್ಲಿ ಬಹಳ ಅಸಮಾಧಾನ. ಅವರು ಈ ಕಾವ್ಯದಲ್ಲಿ ಮನಸ್ಸು ಮಾಡುವುದಿಲ್ಲವೆಂದು, ಸ್ವಾಮಿಗೆ ಜಯ ಲಭಿಸುವುದಿಲ್ಲವೆಂದು ಅವನ ಸಂದೇಹ. ಆದಿಯೊಳವರುಂ ಪಿರಿದೊಂ ದಾದರದಿಂ ನಡಸಿದ, ಅಜ್ಜರಪ್ಪರ್‌, ಅದಳೆಂದಂ ಕಾದರ್, ಇವರವರೋ, ಅವರುಂ ಕಾದ‌ ನೆರೆದಿವರೋಳ್...... - ಸತ್ಯವನ್ನು ಮರೆಮಾಚುವುದರಿಂದೇನು ಪ್ರಯೋಜನ! ಸ್ವಾಮಿಹಿತಕ್ಕೆ ಭಂಗಬಂದರೆ ಕರ್ತವ್ಯಪರಾಜುಖನಾದ ಹಾಗಾಗಲಿಲ್ಲವೇ? ಆದುದರಿಂದ ಧೈಯ್ಯದಿಂದಲೇ ಕರ್ಣನು “ಗುರುಗಳಂ ಕುಲವೃದ್ಧರಂ ಆಜಿಗುಯ್ದು ಕೆಮ್ಮಗೆ ಪಗೆವಾಡಿಯೊಳ್ ನಗಿಸಿಕೊಂಡೊಡೆ ಬಂದಪುದೇಂ ಸುಯೋಧನಾ, ಪಗೆವರ ನಿಟೈಲ್ವಂ ಮುಲೆವೊಡೆನಗೆ ಪಟ್ಟಂಗಟ್ಟಾ' ಎಂದು ನಿಸ್ಸಂಕೋಚದಿಂದ ಹೇಳುತ್ತಾನೆ. - ದ್ರೋಣಾಚಾರರು ಕರ್ಣನ ಹೃದಯವನ್ನು ಅರಿಯಲಿಲ್ಲ. ಕುಲಜರೂ ಭುಜಬಲಯುತರೂ ಆದ ಭೀಷರನ್ನು ಹೀಗೆ ತೆಗಳಿದನಲ್ಲಾ ಎಂದು ಕುಲಜರಂ.... ಈ ಸಭಾಮಧ್ಯದೊಳಗ್ಗಲಿಸಿದ ಮದದಿಂ ನಾಲಗೆ ಕುಲಮಂ ತುಬ್ಬುವವೋಲ್ ಉಳಿದೆ ನೀಂ ಕೆಡೆನುಡಿದೆ' ಎಂದು ಅವನ ಕುಲದ ವಿಷಯವಾಗಿ ಕೆಣಕಿದರು. ಕರ್ಣನಿಗೆ ರೇಗಿಹೋಯಿತು. ಕುಲಮನೆ ಮುನ್ನ, ಉಗ್ಗಡಿಪಿರೇಂ ಗಳ, ನಿಮ್ಮ ಕುಲಂಗಳಾಂತು ಮಾ ರ್ಮಲೆವರನ್, ಅಟ್ಟಿ ತಿಂಬುವ, ಕುಲಂ ಕುಲಮಲ್ತು ಚಲಂ ಕುಲಂ, ಗುಣಂ ಕುಲಂ, ಅಭಿಮಾನಮೊಂದೆ ಕುಲಂ, ಅಣು ಕುಲಂ ಬಗವಾಗಳೀಗಳ ಈ ಕಲಹದೊಳಣ್ಣ ನಿಮ್ಮ ಕುಲಂ, ಆಕುಲಮಂ, ನಿಮಗುಂಟುಮಾಡುಗುಂ || ಗಂಗಾಸುತಂ ಪೃಥಾಸುತ ರಂ ಗೆಲ್ಗೊಡೆ ತಪಕೆ ಪೋಪನ್, ಅವರ್ಗಳ ಕೈಯೊಳ್ ಗಾಂಗೇಯನ್, ಅಟೆದೂಡ, ಆಂತರನ್, ಆಂ ಗೆಲೆ ತಳ್ಳಿದೆವೆನ್, ಅನ್ನೆಗಂ ಬಿಲ್ವಡಿಯಂ. ಎಂದು ಪ್ರತಿಜ್ಞೆ ಮಾಡುವನು. ಭೀಷ್ಮರೇನು ಸಾಮಾನ್ಯರೇ ? ಮುದಿಸಿಂಹ, ಅನನ್ಯ ಸಾಮಾನ್ಯವಾದ ಅನುಭವ. ಸ್ವಲ್ಪವೂ ಉದ್ರೇಕಗೊಳ್ಳದೆ ನಿಧಾನದಿಂದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy