SearchBrowseAboutContactDonate
Page Preview
Page 568
Loading...
Download File
Download File
Page Text
________________ ದ್ವಾದಶಾಶ್ವಾಸಂ | ೫೬೩ ಕಂ11 ಸರಿದಧಿಪತಿ ಮೊಳಕಾಲ್ವರ ಮುರಂಬರಂ ಮೇರು ಮುಯ್ಯುವರೆಗಮಜಾಂಡಂ | ಬರ ತಲೆಯ ನೆಲೆಗೆ ಲೋಕಾಂ ತರಮಡೆಯಿನಿಸೆ ಪರ್ಚಿದಂ ದನುತನಯಂ || ಬೆಳ್ಳಾಳೆ ಪೊಳೆವುದೋಜುವು ದೊಳ್ಳಾಳ ಪೊಡರ್ಪುದೋರ್ಪುದಿರದಣಣೆಂ | ದೂಳ್ಳಲಗಿನ ಶರತತಿಯಿಂ ಕೊಳ್ಳ ಕೊಳೆಂದಂಗರಾಜನಸುರನನೆಚ್ಚಂ | ಉತ್ಸಾಹ || ಎಳ್ಕೊಡಸುರನಿಟ್ಟ ಬೆಟ್ಟಿನೊಂದು ವಜಶರದಿನಾ ರ್ದಚ್ಚು ದಿತಿಜನಚ್ಚ ಸಿಡಿಲ ಶರಮನುದಕಬಾಣದಿಂ | ದಚ್ಚು ದನುತನೂಜನೆಚ್ಚ ವಾರ್ಧಿಗನಲಬಾಣದಿಂ ದಚ್ಚು ನಚ್ಚುಗಿಡಿಸಿ ಕೊಂಡು ಶೂಲಮಂ ಘಟೋತ್ಕಚಂ || - ಕಂll ನೆಲನದಿರ್ವಿನಮಿದಿರಂ ಬರ ಕುಲಿಶಾಯುಧನಿತ್ತ ಶಕ್ತಿಯಿಂದಾತನುರ | ಸ್ಥಲಮನಡ ವಜ್ರಹತಿಯಿಂ ಕುಲಗಿರಿ ಕಡೆವಂತೆ ಕೆಡೆದನಾ ದನುತನಯಂ | ೧೧. ಸಮುದ್ರವು ಮೊಣಕಾಲಿನವರೆಗೂ ಮೇರುಪರ್ವತವು ಎದೆಯವರೆಗೂ ಬ್ರಹ್ಮಾಂಡವು ಭುಜದವರೆಗೂ ಬರಲು ತಲೆಯವರೆಗೆ ಲೋಕಾಂತರದಲ್ಲಿಯೂ ಸ್ಥಳವಿಲ್ಲವೆನ್ನುವಷ್ಟು ದೀರ್ಘವಾಗಿ ರಾಕ್ಷಸನಾದ ಘಟೋತ್ಕಚನು ಬೆಳೆದನು. ೧೨. ಅಂಜುಪುರಕನಿಗೆ ಆಯುಧದ ಹೊಳಪನ್ನು ತೋರಿಸತಕ್ಕದ್ದು, ಸುಪ್ರಸಿದ್ಧ ವೀರಭಟನಿಗೆ ಪರಾಕ್ರಮವನ್ನು ತೋರಿಸತಕ್ಕದ್ದು; ಆದುದರಿಂದ ಈಗ ನೀನು ನನಗೆ ಸಾವಕಾಶಮಾಡದೆ ನಿನ್ನ ಪರಾಕ್ರಮವನ್ನು ತೋರು, ತೋರು, ತೆಕೊ ತೆಕೊ ಎಂದು ಕರ್ಣನು ಒಳ್ಳೆಯ ಅಲಗಿನಿಂದ ಕೂಡಿದ ಬಾಣಗಳ ಸಮೂಹದಿಂದ ರಾಕ್ಷಸನನ್ನು ಹೊಡೆದನು. ೧೩. ರಾಕ್ಷಸನು ಎಸೆದ ಒಂದು ಬೆಟ್ಟವನ್ನು ವಾಸ್ತದಿಂದಲೂ ಅವನಿಟ್ಟ ಸಿಡಿಲ ಬಾಣವನ್ನು ಉದಕಾಸ್ತ್ರದಿಂದಲೂ ಅವನು ಇಟ್ಟ ಸಮುದ್ರಾಸ್ತ್ರವನ್ನು ಆಸ್ಟ್ರೇಯಾಸ್ತದಿಂದಲೂ ಕರ್ಣನು ಹೊಡೆದು ಅವನ ಆತ್ಮಪ್ರತ್ಯಯವನ್ನು ಹಾಳುಮಾಡಲಾಗಿ ಘಟೋತ್ಕಚನು ಶೂಲಾಯಧವನ್ನು ತೆಗೆದುಕೊಂಡು-೧೪ ನೆಲವು ನಡುಗುವಂತೆ ಎದುರಾಗಿ ಬರಲು ಕರ್ಣನು ಇಂದ್ರನು ಕೊಟ್ಟಿದ್ದ ಶಕ್ಕಾಯುಧದಿಂದ ಆತನ ಹೃದಯಸ್ಥಳವನ್ನು ಹೊಡೆದನು. ವಜ್ರಾಯುಧದ ಪೆಟ್ಟಿನಿಂದ ಕುಲಪರ್ವತಗಳುರುಳುವಂತೆ ಆ ರಾಕ್ಷಸಕುಮಾರನು ಕೆಳಗುರುಳಿದನು. ೧೫. ಇವನ ಶರೀರವು (ಮುಂಡ) ಕೆಳಗೆ ಬಿದ್ದುದರಿಂದ ಒಂದಕ್ಕೋಹಿಣಿ ಸೈನ್ಯವು ಪುಡಿಪುಡಿಯಾಯಿತು. ತಾನು ಸತ್ತೂ ಇವನು ಇಷ್ಟನ್ನು ಕೊಂದನು. ಇಂತಹವನನ್ನು ಭಯವುಂಟಾಗುವ ಹಾಗೆ ಕೊಂದ ಪರಾಕ್ರಮವು ಕರ್ಣನಲ್ಲದವನಿಗೆ ಒಪ್ಪುತ್ತದೆಯೇ?
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy