SearchBrowseAboutContactDonate
Page Preview
Page 567
Loading...
Download File
Download File
Page Text
________________ ಬೆಅಗಾದ ಸುಯೋಧನನ ೫೬೨) ಪಂಪಭಾರತಂ - ವl ಅಂತು ರಕ್ಕಸವಡ ತನ್ನ ಪಡೆಯೆಲ್ಲಮಂ ತರಳ್ಳಿ ತೇರಯಿಸಿ ನುಂಗಿದೊಡೆ ಧನನಂ ಬಕಾಸುರ ಜಟಾಸುರರ ಮಕ್ಕಳಪ್ಪಳಂಭೂಪ ಹಲಾಯುಧ ಮುಸಲಾಯುಧ ಕಾಳ ನೀಳ ರೂಕ್ಷರಾಕ್ಷಸರ್ ಮುನ್ನ ತಮ್ಮಣ್ಣನ ತಂದೆಯ ಪಗೆಯಂ , ನೆಂಪಲೆಂದು ಬೆಸನಂ ಬೇಡಿದಾಗಳ್ಚಂಗಿ ಪ್ರತಿವಿಷಮಗ್ರಿಗಗಿ ವಿಷಕಂ ವಿಷಮಂಬವೊಲಾ ನಿಶಾಚರಂ ಗತಿ ಬಲರೀ ನಿಶಾಟರಿವರಕ್ಕೆನುತುಂ ಬೆಸವೇ ತಾಗಿದಾ | ದಿತಿಸುತರಂ ಘಟೋತ್ಕಚನಸುಂಗೊಳೆ ಕಾದಿ ನಿಶಾಟಕೋಟ ಸಂ ತತಿಗಳನಿಕ್ಕಿ ಪಾಂಡವಬಲಕ್ಕನುರಾಗಮನುಂಟುಮಾಡಿದಂ || ವ|| ಅಂತು ಕುರುಬಲಮೆಲ್ಲಮಂ ಜೀರಗೆಯೊಕ್ಕಲ್ಮಾಡಿ ತುಟಿದು ಕೊಲೆ ರಾಜರಾಜನ ಬೆಸದೋಳಂಗರಾಜಂ ಬಂದು ತಾಗ ಮlು ಸಮದೇಭೇಂದ್ರ ಸಮೂಹದಿಂದಮಿಡುತುಂ ಕಂಠೀರವಧಾನದಿಂ ದಮಗುರ್ವವಿನಮಾರುತುಂ ಪೆಣಗಳಂ ನುಂಗುತ್ತುಮಾಕಾಶದಂ | ತಮನೆಯುತ್ತುಮಿದಿರ್ಚಿ ಕಾದುವೆಡೆಯೊಳ್ ಕಾಣುತ್ತೆ ದೇವರ್ಕಳಿ ನ್ನುಮೊಳಂ ರಾವಣನೆಂಬಿನಂ ನೆಗಟ್ಟುದಾ ಹೈಡಿಂಬನಾಡಂಬರಂ || ೧೦ ನುಂಗಿದರು. ಮತ್ತೆ ಕೆಲವು ಬಹಳ ಉತ್ಸಾಹಶಾಲಿಗಳಾದ (ಕುಡಿಯುವ ಸ್ವಭಾವವುಳ್ಳ ?) ರಾಕ್ಷಸರು ಅಂಬಾರಿ ಸಹಿತವಾಗಿ ಭಯಂಕರವಾದ ಆನೆಗಳನ್ನು ವಿಕಾರವಾದ ರೀತಿ ಯಲ್ಲಿ ನುಂಗಿ ಬಿಸಿರಕ್ತದ ಪ್ರವಾಹಗಳನ್ನು ಹೀರಿ ಕುಡಿದರು. ವ|| ರಾಕ್ಷಸಸೈನ್ಯವು ತನ್ನ ಸೈನ್ಯವನ್ನೆಲ್ಲ ಉಂಡೆಮಾಡಿ ಆತುರದಿಂದ ನುಂಗಲು ಆಶ್ಚರ್ಯಪಡುತ್ತಿದ್ದ ದುರ್ಯೋಧನನನ್ನು ಬಕಾಸುರ ಮತ್ತು ಜಟಾಸುರರ ಮಕ್ಕಳಾದ ಅಳಂಭೂಷ, ಹಲಾಯುಧ, ಮುಸಲಾಯುಧ, ಕಾಳ ನೀಳರೆಂಬ ರೂಕ್ಷ ರಾಕ್ಷಸರು ತಮ್ಮಣ್ಣನ ಮತ್ತು ತಂದೆಯ ಹಿಂದಿನ ದ್ವೇಷವನ್ನು ತೀರಿಸಿಕೊಳ್ಳುವುದಕ್ಕಾಗಿ ತಮಗೆ ಆ ಕಾರ್ಯದಲ್ಲಿ ಭಾಗವಹಿಸಲು ಅಪ್ಪಣೆಯಾಗಬೇಕೆಂದು ಕೇಳಿಕೊಂಡರು. ೯. ವಿಷಕ್ಕೆ ವಿಷವೂ ಅಗ್ನಿಗೆ ಅಗ್ನಿಯೂ ಪ್ರತಿವಿಷವೆನ್ನುವ ಹಾಗೆ ಆ ಘಟೋತ್ಕಚನೆಂಬ ರಾಕ್ಷಸನಿಗೆ ಅತಿ ಬಲಿಷ್ಠರಾದ ಈ ರಾಕ್ಷಸರು ಪ್ರತಿಶಕ್ತಿಯಾಗಲಿ ಎನ್ನುತ್ತ ದುರ್ಯೋಧನನು ಆಗಬಹುದೆಂದು ಅವರಿಗೆ ಆಜ್ಞೆಮಾಡಿದನು. ಬಂದು ತಗುಲಿದ ಆ ರಾಕ್ಷಸರನ್ನು ಘಟೋತ್ಕಚನು ಪ್ರಾಣಾಪಹಾರ ಮಾಡುವ ಹಾಗೆ ಕಾದಿ ಆ ರಾಕ್ಷಸಸಮೂಹವನ್ನು ಸಂಹರಿಸಿ ಪಾಂಡವಸೈನ್ಯಕ್ಕೆ ಪ್ರೀತಿಯನ್ನುಂಟುಮಾಡಿದನು. ವ|| ಕೌರವಸೈನ್ಯವನ್ನೆಲ್ಲ ಜೀರಿಗೆಯನ್ನು ಒಕ್ಕಣೆಮಾಡುವಂತೆ ಮಾಡಿ ತುಳಿದು ಕೊಲ್ಲಲು ದುರ್ಯೊಧನನ ಆಜ್ಞೆಯ ಪ್ರಕಾರ ಕರ್ಣನು ಬಂದು ತಾಗಿದನು. ೧೦. ಶ್ರೇಷ್ಠವಾದ ಮದ್ದಾನೆಗಳ ಸಮೂಹದಿಂದ ಹೊಡೆಯುತ್ತಲೂ ಸಿಂಹದ ಧ್ವನಿಯಿಂದ ಭಯವುಂಟಾಗುವ ಹಾಗೆ ಆರ್ಭಟಿಸುತ್ತಲೂ ಹೆಣಗಳನ್ನು ನುಂಗುತ್ತಲೂ ಆಕಾಶದ ಕೊನೆಗೂ ಹೋಗಿ ಎದುರಿಸಿ ಕಾದುವ ಸನ್ನಿವೇಶವನ್ನು ನೋಡಿ ದೇವತೆಗಳು ರಾವಣನೆಂಬುವನು ಇನ್ನೂ ಇದ್ದಾನೆ ಎನ್ನುವಷ್ಟು ಆ ಘಟೋತ್ಕಚನ ಆಡಂಬರವು ಪ್ರಸಿದ್ಧವಾಯಿತು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy