SearchBrowseAboutContactDonate
Page Preview
Page 545
Loading...
Download File
Download File
Page Text
________________ ೫೪೦ | ಪಂಪಭಾರತಂ ಹರಿ ನಿಜಯೋಗದಿಂದಲೆದು ತನ್ನಳಿಯಂ ಲಯವಾದುದಂ ಭಯಂ ಕರ ಕಪಿಕೇತನಂಗಳಿಪಲೋಲದೆ ಬಂದು ಶಮಂತ ಪಂಚಕಂ | ಬರಮಿಟೆದಲ್ಲಿ ಸಂಗರ ಪರಿಶ್ರಮಮಂ ಕಳೆಯೆಂದು ಮಯ್ತುನಂ ಬೆರಸು ಜಳಾವಗಾಹದೊಳಿರುತ್ತೆ ಮಹಾಕಪಟಪ್ರಪಂಚದಿಂ ಕ೦ll ಜಳಮಂತ್ರ ಮಂತ್ರಿತಾಶಯ ಜಳದೊಳ್ ನರನಿನಿಸು ಮುಜುಗೆ ನಿಜಸುತನ ಸುಕ್ಕ | ದೃಳ ಜಳನಿಧಿಯೊಳ್ ಫಲ್ಗುಣ ಮುಲುಗಿದನೆಂಬಿದನೆ ನುಡಿದು ಹರಿ ಮುಲುಗುವುದುಂ || ೧೧೧ ಭೋಂಕನೆ ಕೇಳೆರ್ದ ಕದಡಿ ಕ ಲಂಕಿದ ಬಗವೆರಸು ನೆಗೆದು ನಾಲ್ಕು ದೆಸೆಯಂ | ಶಂಕಾಕುಳಿತಂ ನೋಡಿ ಮ ನಂ ಕೊಳುಕೆನೆ ಮುಲುಗಿ ನೆಗೆದ ಹರಿಯಂ ನುಡಿದಂ || - ೧೧೨ ಆಕಾಶ ವಚನವಿದು ಸುತ ಶೋಕಮನನಗಳಪಿದಪುದಸ್ಯತನಯಂ | ಗೇಕೆಂದರೆಯಂ ಮರಣಮ ದಾ ಕುರುಪತಿಯಿಂದಮಾದುದಾಗಲೆವೇಲ್ಕುಂ || ಇಂದಿನ ಚಕ್ರವ್ಯೂಹಮ ನಾಂ ದಲಣಂ ಮೆಚ್ಚಲಾಯಿತೆನೆನುತುಂ ರಥಮಂ || ಬಂದೇಳಿ ಮಗನ ಮನಕತ ಮೊಂದುತ್ತರಮೆರ್ದೆಯನಲೆಯ ನರನಿಂತೆಂದಂ || ೧೧೪ ಅರ್ಜುನನು ಹಿಂತಿರುಗಿ ಬರುತ್ತಿರಲು ೧೧೦. ಕೃಷ್ಣನು ತನ್ನ ಯೋಗದೃಷ್ಟಿಯಿಂದ ತನ್ನಳಿಯನಾದ ಅಭಿಮನ್ಯುವು ಸತ್ತುದನ್ನು ತಿಳಿದನು. ಅದನ್ನು ಭಯಂಕರಾಕಾರನೂ ಕಪಿಧ್ವಜನೂ ಆದ ಅರ್ಜುನನಿಗೆ ತಿಳಿಸಲಾರದೆ ಶಮಂತಪಂಚಕವೆಂಬ ಕೊಳದವರೆಗೂ ಬಂದನು. ಅಲ್ಲಿ ಇಳಿದು ಯುದ್ಧಾಯಾಸವನ್ನು ಕಳೆಯೋಣ ಬಾ ಎಂದು ಮಯ್ತುನನಾದ ಅರ್ಜುನನೊಡಗೂಡಿ ಅಂದು ಸ್ನಾನಮಾಡುತ್ತಿರುವಾಗ ವಿಶೇಷವಾದ ಕೃತ್ರಿಮದ ರೀತಿಯಲ್ಲಿ ೧೧೧. ಜಲಸ್ತಂಭನಮಂತ್ರದಿಂದ ಮಂತ್ರಿಸಲ್ಪಟ್ಟ ಕೊಳದಲ್ಲಿ ಅರ್ಜುನನು ಸ್ವಲ್ಪ ಮುಳುಗಲು ಕೃಷ್ಣನು ಅರ್ಜುನಾ ನಿನ್ನ ಮಗನು ಶತ್ರುಸೇನಾಸಮುದ್ರದಲ್ಲಿ ಮುಳುಗಿದನು' ಎಂದು ಹೇಳಿ ತಾನೂ ಮುಳುಗಿದನು. ೧೧೨. ಥಟ್ಟನೆ (ಈ ಮಾತನ್ನು ಕೇಳಿ ಎದೆ ಕದಡಿ ಕಲಕಿದ ಮನಸ್ಸಿನಿಂದೊಡಗೂಡಿ ನೀರಿನಿಂದ ಮೇಲೆದ್ದು ಸಂದೇಹದಿಂದ ಕೂಡಿ ನಾಲ್ಕು ದಿಕ್ಕುಗಳನ್ನೂ ನೋಡಿ ಮನಸ್ಸು ಕಳಕ್ಕೆನಲು ಮುಳುಗಿ ಮೇಲೆದ್ದ ಕೃಷ್ಣನನ್ನು ಕೇಳಿದನು. ೧೧೩. ಈ ಅಶರೀರವಾಣಿಯು ಸುತಶೋಕವನ್ನು ನನಗೆ ತಿಳಿಸುತ್ತಿದೆ. ನನ್ನ ಮಗನಿಗೆ ಸಾವು ಆ ದುರ್ಯೋಧನನಿಂದಲೇ ಆಗಿರಬೇಕು. . ಏಕಾಯಿತೆಂದು ತಿಳಿಯದವನಾಗಿದ್ದೇನೆ. ೧೧೪. ಈ ದಿನದ ಚಕ್ರವ್ಯೂಹವನ್ನು ನಾನು ಸ್ವಲ್ಪವೂ ಮೆಚ್ಚಲಾರೆ ಎನ್ನುತ್ತ (ನೀರಿನಿಂದೆದ್ದು) ತೇರನ್ನು ಬಂದೇರಿ ಬೀಡಿನ ಕಡೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy