SearchBrowseAboutContactDonate
Page Preview
Page 546
Loading...
Download File
Download File
Page Text
________________ ಏಕಾದಶಾಶ್ವಾಸಂ | ೫೪೧ ಕದನದಿನಾಂ ಬರೆ ನಿಚ್ಚಲು ಮಿದಿರ್ವಂದು ಕೊರ ವಾಯ್ತು ಬಾಯ್ಕಾಯೊಳಲು | ಪಿದಿರ್ಗೊಳೆ ತಂಬುಲಮಂ ಕೊ ಇದೆ ಮಾಣಿ ಮಗನ ತಡವಿದೇನಸುರಾರೀ || ೧೧೫ ವ|| ಎನುತ್ತುಂ ಬೀಡನೆಯೆ ಎಂದು ಶೋಕಸಾಗರದೊಳ್ ಮುಲುಗಾಡುವ ಪರಿಜನಮುಂ ತನ್ನ ಮೊಗಮಂ ನೋಡಲ್ ನಾಯ್ಕ ತಲೆಯಂ ಬಾಗಿ ನೆಲನಂ ಬರೆಯುತ್ತುಮಿರ್ದ ವೀರಭಟರುಮಂ ಕಂಡು ಮಗನ ಸಾವಂ ನಿಶ್ಚಿಸಿ ರಾಜಮಂದಿರಮಂ ಪೊಕ್ಕು ರಥದಿಂದಮಿದು ಧರ್ಮಪುತ್ರಂಗಂ ವಾಯುಪುತ್ರಂಗಂ ಪೊಡೆವಟ್ಟು ಕುಳ್ಳಿರ್ಪುದುಮವ‌ ತಲೆಯಂ ಬಾಗಿ ನೆಲನಂ ಬರೆಯುತ್ತುಮಿರೆ ಕಿರೀಟಿ ಕಂಡಿದೇನೆಂದು ಬೆಸಗೊಳೆ ಧರ್ಮಪುತ್ರನಿಂತೆಂದಂಮಸ್ತ ಗುರು ಚಕ್ರವ್ಯೂಹಮಂ ಪಣ್ಣಿದೊಡೆ ಪುಗಲಿದಂ ಬಲ್ಲರಾರೆಂದೊಡಿಂ ನಾ ನಿರೆ ಮತ್ತಾರ್ ಬಲ್ಲರೆಂದೂರ್ವನೆ ರಿಪುಬಳವಾರಾಶಿಯಂ ಪೊಕ್ಕು ಮಿಕ್ಕಾಂ ತರನಾಟಂದಿಕ್ಕಿ ದುರ್ಯೋಧನನ ತನಯರಂ ನೂರ್ವರಂ ಕೊಂದು ತತ್ಸಂ ಗರದೊಳ್ ಕಾದಮ್ಮನಿಂತಾಂತಿಡಿದು ನಿಜಸುತಂ ದೇವಲೋಕಕ್ಕೆ ಸಂದಂ ||೧೧೬ ಬಂದನು. ಮಗನ ಬಗೆಗೆ ಮನೋವ್ಯಥೆ ಮನಸ್ಸನ್ನು ವಿಶೇಷವಾಗಿ ಪೀಡಿಸುತ್ತಿರಲು ಅರ್ಜುನನು ಹೀಗೆಂದನು ೧೧೫. ದಿನದಂತೆ ನಾನು ಯುದ್ಧದಿಂದ ಬರಲು ಎದುರಾಗಿ ಬಂದು ಕೊರಳಿಗೆ ಹಾರಿ ಅಪ್ಪಿಕೊಂಡು ನನ್ನ ಬಾಯಿಂದ ತನ್ನ ಬಾಯಿಗೆ ಸುಖವಾಗಿರುವ ಹಾಗೆ ತಾಂಬೂಲವನ್ನು ಕೊಳ್ಳದೇ ಇರುವ ಮಗನ ಈ ಸಾವಕಾಶವಿದೇನು ಕೃಷ್ಣ? ವ!! ಎನ್ನುತ್ತ ಬೀಡನ್ನು ಸೇರಿ (ಮನೆಯ ಹತ್ತಿರಕ್ಕೆ ಬಂದು) ದುಃಖಸಮುದ್ರದಲ್ಲಿ ಮುಳುಗಾಡುವ ಸೇವಕರನ್ನೂ ತನ್ನ ಮುಖವನ್ನು ನೋಡಲು ನಾಚಿಕೆಯಿಂದ ಕೂಡಿ ತಲೆಯನ್ನು ಬಗ್ಗಿಸಿಕೊಂಡು ನೆಲವನ್ನು ಬರೆಯುತ್ತಿದ್ದ ವೀರಭಟರನ್ನೂ ನೋಡಿ ಮಗನ ಸಾವನ್ನು ನಿಶ್ಚಯಿಸಿದನು. ಅರಮನೆಯನ್ನು ಪ್ರವೇಶಮಾಡಿದನು. ರಥದಿಂದಿಳಿದು ಧರ್ಮರಾಜನಿಗೂ ಭೀಮಸೇನನಿಗೂ ನಮಸ್ಕಾರಮಾಡಿ ಕುಳಿತುಕೊಂಡನು. ಅವರು ತಲೆಯನ್ನು ತಗ್ಗಿಸಿ (ದುಃಖದಿಂದ) ನೆಲವನ್ನು ಬರೆಯುತ್ತಿರಲು ಅರ್ಜುನನು ಇದೇನೆಂದು ಪ್ರಶ್ನೆ ಮಾಡಿದನು. ಧರ್ಮರಾಜನು ಹೀಗೆ ಹೇಳಿದನು. ೧೧೬. ಗುರುವಾದ ದ್ರೋಣಾಚಾರ್ಯರು ಚಕ್ರವ್ಯೂಹವನ್ನು ರಚಿಸಲು ಇದನ್ನು ಪ್ರವೇಶಿಸಲು ತಿಳಿದವರಾರು ಎಂದು ಕೇಳುತ್ತಿರುವಾಗಲೇ ಮತ್ತಾರು ತಿಳಿದಿದ್ದಾರೆ ಎಂದು ಶತ್ರುಸೇನಾಸಮೂಹವನ್ನು ಒಬ್ಬನೇ ಪ್ರವೇಶಿಸಿದನು. ಮೀರಿ ಪ್ರತಿಭಟಿಸಿದವರನ್ನು ಕೊಂದು ದುರ್ಯೋಧನನ ನೂರು ಜನ ಮಕ್ಕಳನ್ನೂ ಸಂಹರಿಸಿ ಆ ಯುದ್ಧದಲ್ಲಿ ನಮ್ಮನ್ನು ರಕ್ಷಿಸಿ ಹೀಗೆ ಎದುರಾಗಿ ಯುದ್ಧಮಾಡಿ ನಿನ್ನ ಮಗನಾದ ಅಭಿಮನ್ಯುವು ದೇವಲೋಕವನ್ನು ಸೇರಿದನು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy