SearchBrowseAboutContactDonate
Page Preview
Page 544
Loading...
Download File
Download File
Page Text
________________ ಏಕಾದಶಾಶ್ವಾಸಂ | ೫೩೯ ಚಂll. ಎನಿತಿದಿರಾಂತರಾತಿಬಲಮಂತನಿತಂ ತವೆ ಕೊಂದು ತತ್ಯುಯೋ ಧನ ಸುತರೆನ್ನ. ಬಾಣಗಣದಿಂ ತವದಿರ್ದರೊ ಯುದ್ಧದಾಳೆ ರೋ | ದನಮನಗಾವುದಯ್ಯನೆನಗೇಕೆಯೋ ಶೋಕಿಪನೆಂದು ಧರ್ಮನಂ ದನ ನರನಂದನಂ ನಿನಗೆ ಸಗ್ಗದೊಳೇನಭಿಮನ್ನು ನೋಯನೇ || ೧೦೭ ಕಂ ಜ್ಞಾನಮಯನಾಗಿ ಸಂಸಾ ರಾನಿತ್ಯತೆಯಂ ಜಲಕ್ಕನಾಗದಿರ್ದ | ಜ್ಞಾನಿಯವೋಲ್ ನೀನುಂ ಶೋ ಕಾನಲ ಸಂತಪ್ತ ಚಿತ್ತನಪ್ಪುದು ದೊರೆಯೇ || ೧೦೮ ವll ಎಂದು ಷೋಡಶರಾಜೋಪಾಖ್ಯಾನಮನಳೆಪಿ ಧರ್ಮಪುತ್ರನ ಶೋಕಮನಾಜಿ ನುಡಿದು ಪಾರಾಶರ ಮುನೀಂದ್ರಂ ಪೋದನಿತ್ತಲ್ಚಂil ಅಟಿದುದು ಮತ್ತನೂಜಶತಮಾಷೆಯೊಳಿತ್ತಭಿಮನ್ನುವೊರ್ವನ ತಟಿದನಿದಾವ ಗೆಲ್ಲಮೆನಗಂ ಕಲಿಯಾದನೊ ಪೂಣ್ಣ ಗಂಡವಾ | ತಡೆಯದೆ ಗಂಡನಿಂತಚಿವುದೀಯಟಿವಿನೈನಗಾಜಿರಂಗದೊಳ್ ಗಟಿಯಸುಗೆಂಬಿದಂ ನುಡಿಯುತುಂ ಘಟಸಂಭವನೋಳ್ ಸುಯೋಧನಂ Il೧೦೯ ವ|| ಅಂತು ಬೀಡಿಂಗೆ ಪೋದನನ್ನೆಗಮಿತ್ತ ಸಂಸಪಕಬಳಜಳನಿಧಿಯಂ ಬಡಬಾನಳ ನಳುರ್ವಂತಳುರ್ದು, ನಿಜವಿಜಯಕಟಕಕ್ಕೆ ವಿಜಯಂ ಬರೆವರೆ (ಧರ್ಮರಾಜನನ್ನು ಕುರಿತು) 'ಮಹಾರಾಜ, ಸಂಸಾರಸ್ಥಿತಿಯನ್ನು ತಿಳಿಯದವರಂತೆ ನೀನು ಹೀಗೆ ದುಃಖಿಸಬಾರದು. ೧೦೭, ಪ್ರತಿಭಟಿಸಿದಷ್ಟು ಶತ್ರುಸೈನ್ಯವನ್ನೆಲ್ಲ ಪೂರ್ಣವಾಗಿ ಕೊಂದು ದುರ್ಯೊಧನನ ಮಕ್ಕಳೆಷ್ಟೋ ಜನವನ್ನು ತನ್ನ ಬಾಣದ ಸಮೂಹದಿಂದ ನಾಶಪಡಿಸಿದ ಶೂರನಾದ ನನಗಾಗಿ ಆರ್ಯನಾದ ಧರ್ಮರಾಜನು ಏಕೆ ಅಳುತ್ತಿದ್ದಾನೆ ಎಂದು ಸ್ವರ್ಗದಲ್ಲಿರುವ ಅಭಿಮನ್ಯುವು ನೊಂದುಕೊಳ್ಳುವುದಿಲ್ಲವೆ? ೧೦೮. (ಲೋಕ) ಜ್ಞಾನದಿಂದ ಪರಿಪೂರ್ಣವಾಗಿ ಈ ಸಂಸಾರದ ಅಶಾಶ್ವತೆಯನ್ನು ಚೆನ್ನಾಗಿ ತಿಳಿದೂ ತಿಳಿವಿಲ್ಲದವನ ಹಾಗೆ ನೀನೂ ಶೋಕಾಗ್ನಿಯಿಂದ ಸುಡಲ್ಪಟ್ಟ ಮನಸ್ಸುಳ್ಳವನಾಗುವುದು ಯೋಗ್ಯವೇ ?' ವ|| ಎಂದು ಹದಿನಾರುರಾಜರ ಕಥೆಯನ್ನು ತಿಳಿಸಿ ಧರ್ಮರಾಜನ ದುಃಖವು ಶಮನವಾಗುವ ಹಾಗೆ ಉಪದೇಶಿಸಿ ವ್ಯಾಸಮಹರ್ಷಿಯು ಹೊರಟುಹೋದನು. ಈ ಕಡೆ-೧೦೯. ನಮ್ಮ ಪಕ್ಷದಲ್ಲಿ ನನ್ನ ನೂರುಮಕ್ಕಳೂ ಯುದ್ದದಲ್ಲಿ ನಾಶವಾದರು. ಆ ಪಕ್ಷದಲ್ಲಿ ಅಭಿಮನ್ಯುವೊಬ್ಬನು ಮಾತ್ರ ಸತ್ತಿದ್ದಾನೆ. ನನಗೆ ಯಾವ ಜಯವಿದು. ಶೂರನಾದವನು ಪ್ರತಿಜ್ಞೆ ಮಾಡಿದ ಧೀರವಾಕ್ಕು ನಾಶವಾಗದಂತೆ ಪರಾಕ್ರಮಶಾಲಿಯಾಗಿ ಹೀಗೆ ಸಾಯಬೇಕು. ನನಗೆ ಯುದ್ದದಲ್ಲಿ ಇಂತಹ ಸಾವು ಲಭಿಸಲಿ ಎಂಬ ಈ ಮಾತನ್ನು ಆಡುತ್ತ ದುರ್ಯೊಧನನು ದ್ರೋಣಾಚಾರ್ಯರೊಡನೆ ವ|| ಬೀಡಿಗೆ ಹೋದನು. ಅಷ್ಟರಲ್ಲಿ ಈ ಕಡೆ ಸಂಸಪ್ತಕ ಸೈನ್ಯಸಾಗರವನ್ನು ಬಡಬಾಗ್ನಿ ಸುಡುವಂತೆ ಸುಟ್ಟು ತನ್ನ ಜಯಶಾಲಿಯಾದ ಸೈನ್ಯಕ್ಕೆ 35
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy