SearchBrowseAboutContactDonate
Page Preview
Page 529
Loading...
Download File
Download File
Page Text
________________ ೫೨೪ | ಪಂಪಭಾರತಂ ಮ|| ಮದವದ್ದಂತಿಗಳಂ ಕಲುತ್ರಸಗವೊಯ್ಯೋ ಯಾಜಿಯೊಳ್ ಭೀಮನಾ ರ್ದೊದೆದೀಡಾಡಿದೊಡತ್ತಜಾಂಡ ತಟಮಂ ತಾಪನ್ನೆಗಂ ಪಾಳಿ ತಾ | ಆದ ಪೇರಾನೆಯೊಡಳಭೂತಳದೊಳ್ ಸಿಲಿರ್ದುವೋರೊಂದು ಮಾ | ಣದೆ ಬೀರ್ಪುವು ಬಿಟ್ಟು ಬಿಟ್ಟ ತೆದಿಂದಿನ್ನುಂ ಕುರುಕ್ಷೇತ್ರದೊಳ್ ||೬೭ ಕ೦ll ತೊಡರೆ ತಡಂಗಾಲ್ ಪೊಯೊಡೆ ಕೆಡೆದುಂ ತಿವಿದೊಡೆ ಸುರುಳು ಮೋದಿದೊಡಿರದೆ ಲ್ವಡಗಾಗಿ ಮಡಿದು ಬಿಟ್ಟುವು ಗಡಣದ ಕರಿಘಟೆಗಳೇಂ ಬಲಸ್ಥನೊ ಭೀಮಂ || ೬೮ ವ|| ಅಂತಲ್ಲಿ ಹದಿನಾಲ್ಕಾಸಿರ ಮದದಾನೆಯುಮಂ ಕಳಿಂಗನಾಯಕಂ ಭಾನುದತ್ತಂ ಮೊದಲಾಗೆ ನೂರ್ವರರಸುಮಕ್ಕಳುಮಂ ಕೊಂದೊಡೆ ಕೌರವಬಲಮೆಲ್ಲಮೆಲ್ಲನುಲಿದೋಡಿ ಭಗದತ್ತನಾನೆಯ ಮತಯಂ ಪೊಕ್ಕಾಗಲ್ಮ|| ಸ | ನೆಗಂ ದೇವೇಂದ್ರರಾವತದ ಕೆಳೆಯನನ್ನೇಟಿದೀಯಾನೆಯುಂ ದಲ್ `ದಿಗಿಭಂ ದುರ್ಯೊಧನಂ ನಚ್ಚಿದನೆನಗಿದಿರಂ ಭೀಮನೆಂದನೀಗಲ್ | ಮುಗಿಲ೦ ಮುಟ್ಟಿತ್ತು ಸಂದೆನ್ನಳವುಮದಟುಮಂದಾರ್ದು ದೂರ್ದರಯುಕಂ ಭಗದತ್ತಂ ಸುಪ್ರತೀಕದ್ವಿಪಮನುಪಚಿತ್ರೋತ್ಸಾಹದಿಂ ತೋಟೆಕೊಟ್ಟಂ ಗೆ ೬೯ ತಡಮಾಡದೆ ಸಿಡಿಲು ಹೊಡೆಯುವ ಹಾಗೆ ಹೊಡೆಯಲು ರಥಗಳ ಸಮೂಹ, ಬಾವುಟಗಳು, ಆಯುಧಗಳು ಇವುಗಳ ಪರಸ್ಪರ ತಾಕಲಾಟದಲ್ಲಿ ಕತ್ತಿನ ಗಂಟೆಯೊಡನೆ ಆನೆಗಳು ಆ ಘೋರಯುದ್ದದಲ್ಲಿ ಕುಲಪರ್ವತಗಳ ಹಾಗೆ ಕೆಳಕ್ಕೆ ಬಿದ್ದವು. ೬೭. ಸೊಕ್ಕಿದ ಆನೆಗಳನ್ನು ಗುರಿಯಿಟ್ಟು ಅಗಸನು ಒಗೆಯುವ ಹಾಗೆ ಒಗೆದು ಆರ್ಭಟಮಾಡಿ ಭೀಮನು ಯುದ್ದದಲ್ಲಿ ಒದ್ದು ಎಸೆದನು. ಆ ಒಣಗಿದ ಹಿರಿಯಾನೆಯ ಶರೀರಗಳು ಬ್ರಹ್ಮಾಂಡದ ದಡವನ್ನು ತಗಲುವಷ್ಟು ದೂರ ಹಾರಿ ಮೋಡಗಳ ಪದರದ ಮಧ್ಯೆ ಸಿಕ್ಕಿದ್ದು ಅಲ್ಲಿಂದ ಬೆಟ್ಟಗಳು ಬೀಳುವ ಹಾಗೆ ಇನ್ನೂ ಕುರುಕ್ಷೇತ್ರದಲ್ಲಿ ಬೀಳುತ್ತಿವೆ. ೬೮. ಭೀಮನು ಅಡ್ಡಗಾಲಿಗೆ ಸಿಕ್ಕಿಸಿಕೊಂಡು ಒದೆದರೆ ಕೆಳಕ್ಕೆ ಬಿದ್ದೂ ತಿವಿದರೆ ಸುರುಳಿಕೊಂಡೂ ಗುದ್ದಿದರೆ ತಡವಿಲ್ಲದೆ ಎಲುಬು ಮಾಂಸಗಳಾಗಿಯೂ ಆನೆಗಳ ಸಮೂಹವು ರಾಶಿಯಾಗಿ ಬಿದ್ದವು. ಭೀಮನು ಎಷ್ಟು ಬಲಶಾಲಿಯೋ! ವll ಹಾಗೆ ಅಲ್ಲಿ ಹದಿನಾಲ್ಕು ಸಾವಿರ ಮದ್ದಾನೆಗಳನ್ನೂ ಕಳಿಂಗನಾಯಕನಾದ ಭಾನುದತ್ತನೇ ಮೊದಲಾದ ನೂರುಮಂದಿ ರಾಜಕುಮಾರರನ್ನೂ ಕೊಂದನು. ಕೌರವಸೈನ್ಯವೆಲ್ಲ ಮೆಲ್ಲಗೆ ಕೂಗಿಕೊಂಡು ಭಗದತ್ತನಾನೆಯ ಮರೆಯನ್ನು ಹೊಕ್ಕಿತು. ೬೯. ನಾನು ಪ್ರಖ್ಯಾತನಾದವನು; ನಾನು ಹತ್ತಿರುವ ಈ ಆನೆಯೂ ದೇವೇಂದ್ರನ ಐರಾವತದ ಸ್ನೇಹಿತ. ಹಾಗೆಯೇ ದಿಗ್ಗಜವೂ ಹೌದು. ನನ್ನನ್ನು ದುರ್ಯೋಧನನು ನಂಬಿಕೊಂಡಿದ್ದಾನೆ. ಈಗ ನನಗೆ ಭೀಮನೇ ಪ್ರತಿಭಟಿಸಿ ಬಂದಿದ್ದಾನೆ. ಈಗ ನನ್ನ ಪೌರುಷವೂ ಪರಾಕ್ರಮವೂ ಗಗನವನ್ನು ಮುಟ್ಟಿದೆ ಎಂದು ಆರ್ಭಟಮಾಡಿ ಬಾಹುಬಲದ ಅಹಂಕಾರದಿಂದ ಕೂಡಿದ ಭಗದತ್ತನು ಕೂಡಿಕೊಂಡಿರುವ ಉತ್ಸಾಹದಿಂದ ಸುಪ್ರತೀಕವೆಂಬ ಆನೆಯನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy