SearchBrowseAboutContactDonate
Page Preview
Page 528
Loading...
Download File
Download File
Page Text
________________ ೬೪ ಏಕಾದಶಾಶ್ವಾಸಂ | ೫೨೩ ಅಚಿದ ಬಿಲ್ವಡೆ ಮಾಣದೆ ತಟ್ಟಿದ ರಥಮೆಯ ಬಗಿದ ಪುಣ್ಯಳ ಪೊಜತೆಯಿಂ | ಮೋಬೈದ ಕರಿ ಘಟೆ ಜವನಡು ವಯನನುಕರಿಸೆ ವೀರ ಭಟ ರಣರಂಗಂ || ವ|| ಆಗಳ್ ದೃಷ್ಟಕೇತು ವೃಷಸೇನನೊಳ್ ಸಾತ್ಯಕಿ ಭಗದತ್ತನೊಳ್ ದ್ರುಪದ ಧೃಷ್ಟದ್ಯುಮ್ಮರಿರ್ವರುಂ ದ್ರೋಣಾಚಾರ್ಯನೊಳ್ ಪ್ರತಿವಿಂಧ್ಯಂ ಸೌಬಲನೊಳ್ ಘಟೋತ್ಕಚಂ ಕರ್ಣನೋಳ್ ಪೆಣೆದು ಕಾದೆಚಂti ಪೊಸಮಸೆಯಂಬುಗಳ್ ದಸೆಗಳಂ ಮಸುಳ್ಳನ್ನೆಗಮೆಮ್ಮೆ ಪಾಯೆ ಪಾ ಯಿಸುವ ರಥಂಗಳಾ ರಥದ ಕೀಲುಣಿದಾಗಳೆ ಕೆಯ್ಯನಲ್ಲಿ ಕೋ | ದೆಸಗುವ ಸೂತರಂಬು ಕೊಳೆ ಸೂತರುರುಳುಮಿಳಾತಳಕ್ಕೆ ಪಾ ಯಸಿಯೊಳೆ ತಾಗಿ ತಳಿವ ನಿಚ್ಚಟಗೊಪ್ಪಿದರಾಜಿರಂಗದೊಳ್ || ೬೫ ವ|| ಆಗಳ ಕಳಿಂಗರಾಜನ ಗಜಘಟೆಗಳನಿತುಮೊಂದಾಗಿ ಭೀಮಸೇನನ ರಥಮಂ ವಿಳಯ ಕಾಳ ಜಳಧರಂಗಳೆಲ್ಲದೊಂದಾಗಿ ಕುಲಗಿರಿಯಂ ಮುತ್ತುವಂತೆ ಸುತ್ತಿ ಮುತ್ತಿದಾಗಳ್ ಮll. ರಥದಿಂ ಧಾತ್ರಿಗೆ ಪಾಯ್ದು ಕೊಂಡು ಗದೆಯಂ ಕೆಯ್ದಾರ್ದುದಗ್ನನನೋ ರಥಮಿಂದೆಂದು ಕಡಂಗಿ ಮಾಣದೆ ಸಿಡಿಲ್ ಪೊಯ್ಕಂತೆವೋಲ್ ಪೊಯ್ಯುದುಂ | ರಥಯೂಥ ಧ್ವಜ ಶಸ್ತ್ರ ಶಂಖಪುಟದೊಳ್ ಘಂಟಾಸಮೇತಂ ಮಹಾ ರಥನಿಂದಂ ಕುಳಶೈಳದಂತೆ ಕರಿಗಳ್ ಬೀಚಿಂದುವುಗ್ರಾಜಿಯೊಳ್ || ೬೬ ಯುದ್ಧಮಾಡಿದುವು. ೬೯. ವೀರಭಟ ರಣರಂಗವು ನಾಶವಾದ ಬಿಲ್ದಾರರ ಸೈನ್ಯದಿಂದಲೂ ತಪ್ಪದೆ ತಗ್ಗಿದ ರಥದಿಂದಲೂ ಅದರುವ ಹುಣ್ಣುಗಳ ಭಾರದಿಂದಲೂ ಕುಗ್ಗಿದ ಆನೆಗಳ ಸಮೂಹದಿಂದಲೂ ಯಮನು ಅಡುಗೆಮಾಡುವ ಅಡುಗೆಯ ಮನೆಯನ್ನು ಹೋಲುತ್ತಿತ್ತು. ವ|| ಆಗ ಧೃಷ್ಟಕೇತುವು ವೃಷಸೇನನಲ್ಲಿಯೂ ಸಾತ್ಯಕಿಯು ಭಗದತ್ತನಲ್ಲಿಯೂ ದ್ರುಪದ ಧೃಷ್ಟದ್ಯುಮ್ಮರಿಬ್ಬರೂ ದ್ರೋಣಾಚಾರ್ಯನಲ್ಲಿಯೂ ಪ್ರತಿವಿಂದ್ಯನು ಶಕುನಿಯಲ್ಲಿಯೂ ಘಟೋತ್ಕಚನು ಕರ್ಣನಲ್ಲಿಯೂ ಹೆಣೆದುಕೊಂಡು ಕಾದಿದರು. ೬೫. ಹೊಸದಾಗಿ ಮಸೆದ ಬಾಣಗಳೂ, ದಿಕ್ಕುಗಳನ್ನೆಲ್ಲ ಮಲಿನಮಾಡುವ ರೀತಿಯಲ್ಲಿ ವ್ಯಾಪಿಸಲು ಚೋದಿಸುತ್ತಿದ್ದ ರಥಗಳೂ, ಆ ರಥಗಳ ಕೀಲು ಮುರಿದೊಡನೆ ತಮ್ಮ ಕೈಗಳನ್ನೇ ಆ ಕೀಲಿನ ಸ್ಥಾನದಲ್ಲಿ ಪೋಣಿಸಿ ರಥವನ್ನು ನಡೆಸುತ್ತಿದ್ದ ಸಾರಥಿಗಳೂ, ಪ್ರತಿಪಕ್ಷದಿಂದ ಬಂದ ಬಾಣಗಳು ತಮ್ಮ ಶರೀರದಲ್ಲಿ ನಾಟಲು ಸೂತರು ನೆಲಕ್ಕೆ ಉರುಳಿದರೂ ರಥದಿಂದ ನೆಲಕ್ಕೆ ನೆಗೆದು ಕತ್ತಿಯಿಂದ ಘಟ್ಟಿಸಿ (ಪರಸೈನ್ಯವನ್ನು) ಪ್ರತಿಭಟಿಸಿ ಸೈರ್ಯದಿಂದ ಹೋರಾಡುವ ಯೋಧಾಗ್ರೇಸರರೂ ಯುದ್ಧರಂಗದಲ್ಲಿ ಶೋಭಿಸಿದರು. ವ|| ಆಗ ಕಳಿಂಗರಾಜನ ಆನೆಯ ಸಮೂಹವನ್ನೂ ಒಂದಾಗಿ ಭೀಮಸೇನನ ತೇರನ್ನು ಪ್ರಳಯಕಾಲದ ಮೋಡಗಳೆಲ್ಲ ಒಂದಾಗಿ ಕುಲಪರ್ವತವನ್ನು ಮುತ್ತುವಂತೆ ಸುತ್ತಿ ಮುತ್ತಿದುವು. ೬೬. ಭೀಮಸೇನನು ರಥದಿಂದ ಭೂಮಿಗೆ ಹಾರಿ ಗದೆಯನ್ನೆತ್ತಿಕೊಂಡು 'ನನ್ನ ಇಷ್ಟಾರ್ಥ ಈದಿನ ಕೈಗೂಡಿತು' ಎಂದು ಉತ್ಸಾಹಿಸಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy