SearchBrowseAboutContactDonate
Page Preview
Page 530
Loading...
Download File
Download File
Page Text
________________ ಏಕಾದಶಾಶ್ವಾಸಂ | ೫೨೫ ಕoll ಮದಕರಿಯ ಪರಿವ ಭರದಿಂ ದದಿರ್ದೊಡೆ ನೆಲನೊಡ್ಡಿ ನಿಂದ ಚತುರಂಗಮುಮೋ | ರ್ಮೊದಲೆ ನಡುಗಿದುದು ಕೂಡಿದ ಚದುರಂಗದ ಮಣೆಯನಲ್ಲಿದಂತಪ್ಪಿನೆಗಂ || . ೭೦ ವ|| ಆಗಳಸುರನುಯ ನೆಲನನಾದಿ ವರಾಹನಅಸಲೆಂದು ಸಕಳ ಜಳಚರಕಳಿತ ಜಳನಿಧಿಗಳಂ ಕಲಂಕುವಂತೆ ಪಾಂಡವ ಬಳ ಜಳನಿಧಿಯನಳಿಕುಳ ಝೇಂಕಾರ ಮುಖರಿತ ವಿಶಾಳ ಕರಟ ತಟಮಾ ದಿಶಾಗಜೇಂದ್ರಂ ಕಲಂಕೆಚಂ|| ತಳರ್ದುದು ಕರ್ಣತಾಳ ಪವನಾಹತಿಯಿಂ ಜಳರಾಶಿ ಕೆಯ್ಯ ಬ ಧ್ವಳಿಕೆಗೆ ದಿಗ್ಗಜಂ ದೆಸೆಯಿನತ್ತ ತೆರಳುವು ಕಾಯ್ದಿನಿಂ ದಿಶಾ | ವಳಿವೆರಸಂಬರಂ ಪೊಗೆದು ಪೊತ್ತಿದುದಾದ ಮದಾಂಬುವಿಂ ಜಗಂ ಜಳಧಿವೊಲಾಯ್ದಂ ನೆಲೆಯ ಬಣ್ಣಿಪರಾರ್ ಗಳ ಸುಪ್ರತೀಕಮಂ || ೭೧ ಚಂll ಕರ ನಖ ದಂತ ಘಾತದಿನುರುಳ ಚತುರ್ಬಲದಿಂ ತೆರಳ ನೆ ತರ ಕಡಲಾ ಕಡಲ್ಕರೆಗಮಯ್ಯ ಮಹಾಮಕರಂ ಸಮುದ್ರದೊಳ್ | ಪರಿವವೋಲಿಂತಗುರ್ವುವೆರಸಾ ಭಗದತ್ತನ ಕಾಲೋಳಂತಂ ಪರಿದುದೊ ಸುಪ್ರತೀಕ ಗಜಮಚ್ಚರಿಯಪ್ಪಿನಮಾಜಿರಂಗದೊಳ್ || ೭೨ ವ|| ಅಂತು ಪರಿದ ಬೀದಿಗಳೆಲ್ಲಂ ನೆತ್ತರ ತೊಳೆಗಳ ಪರಿಯ ಕೆಂಡದ . ತೊಜಯಂತೆ ಪರಿದ ಸುಪ್ರತೀಕಂ ಕೆಯ್ಯ ಕಾಲ ಕೋಡೇಟಿನೊಳ್ ಬಲಮನೆಲ್ಲಂ ಜವನೆ ಸೈನ್ಯದ ಮುಂದುಗಡೆ ನೂಕಿದನು. ೭೦. ಆ ಮದ್ದಾನೆಯು ನಡೆಯುವ ವೇಗದಿಂದ ಭೂಮಿಯು ಅಲುಗಾಡಲು ಅದರ ಮೇಲೆ ನಿಂತಿರುವ ಚತುರಂಗ ಸೈನ್ಯವೂ ಕಾಯಿಗಳಿಂದ ಕೂಡಿದ ಚದುರಂಗದ ಮಣೆಯನ್ನು ಅಲುಗಾಡಿಸಿದಂತೆ ಇದ್ದಕ್ಕಿದ್ದ ಹಾಗೆ ಒಡನೆಯೇ ನಡುಗಿದವು. ವ|| ಆಗ ರಾಕ್ಷಸನಾದ ಹಿರಣ್ಯಾಕ್ಷನು ಎತ್ತಿಕೊಂಡು ಹೋದ ಭೂದೇವಿಯನ್ನು ಆದಿವರಾಹನಾದ ವಿಷ್ಣುವು ಹುಡುಕಬೇಕೆಂದು ಸಮಸ್ತ ಜಲಚರಗಳಿಂದ ತುಂಬಿದ ಸಮುದ್ರಗಳನ್ನು ಕಲಕಿದ ಹಾಗೆ ಪಾಂಡವಸೇನಾಸಮುದ್ರವನ್ನು ದುಂಬಿಗಳ ಝೇಂಕಾರಶಬ್ದದಿಂದ ಧ್ವನಿಮಾಡಲ್ಪಟ್ಟ ವಿಶಾಲವಾದ ಕಪೋಲಪ್ರದೇಶವುಳ್ಳ ಆ ದಿಗ್ಗಜವು ಕಲಕಿತು. ೭೧. ಅದು ಕಿವಿಯನ್ನು ಬೀಸುವುದರಿಂದುಂಟಾದ ಗಾಳಿಯ ಹೊಡೆತದಿಂದ ಸಮುದ್ರವು ಚಲಿಸಿತು. ಸೊಂಡಿಲಿನ ಬಲವಾದ ಬೀಸುವಿಕೆಗೆ ದಿಗ್ಗಜಗಳು ದಿಕ್ಕುಗಳಿಂದ ಆಚೆಗೆ ಹೋದುವು. (ಅದರ) ಕೋಪದಿಂದ ದಿಕ್ಕುಗಳ ಸಮೂಹದೊಡನೆ ಆಕಾಶವೂ ಹೊಗೆಯಿಂದ ಕೂಡಿ ಉರಿಯಿತು. ಸುರಿದ ಮದೋದಕದಿಂದ ಭೂಮಂಡಲವು ಸಮುದ್ರದ ಹಾಗಾಯಿತು. ಆ ಸುಪ್ರತೀಕವನ್ನು ಸಂಪೂರ್ಣವಾಗಿ ವರ್ಣಿಸುವವರಾರಿದ್ದಾರೆ? ೭೨. ಸೊಂಡಿಲು, ಉಗುರು, ದಂತಗಳ ಹೊಡೆತದಿಂದ ಉರುಳಿ ಬೀಳುವ ಚತುರಂಗ ಬಲದಿಂದ ಹೊರಡುವ ರಕ್ತಸಮುದ್ರವು ಆ ಸಮುದ್ರದವರೆಗೂ ಹರಿಯಲು ಸಮುದ್ರ ಮಧ್ಯೆ ಹರಿಯುವ ದೊಡ್ಡ ಮೊಸಳೆಯ ಹಾಗೆ ಭಯಂಕರತೆಯಿಂದ ಕೂಡಿ ಆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy