SearchBrowseAboutContactDonate
Page Preview
Page 527
Loading...
Download File
Download File
Page Text
________________ ೫೨೨) ಪಂಪಭಾರತಂ ವl ಅಂತು ಪಾಂಡವ ಬಲಮೆಲ್ಲಮನಲ್ಲಕಲ್ಲೋಲಂ ಮಾಡಿ ಕಳಶಕೇತನನಜಾತಶತ್ರುವ ಪಿಡಿಯಲೆಯರ್ಷಾಗಲ್ಗ್ರ | ಕಾದಲ್ ಸಂಸಪ್ತಕರ್ಕಳ್ ಕರದೊಡವರ ಬೆನ್ನಂ ತಗುಟ್ಟಾದ ಕಾಯ್ಲಿಂ ಕಾದುತ್ತಿರ್ಪಾತನಂತಾ ಕಳಕಳಮನದಂ ಕೇಳು ಭೋರೆಂದು ಬಂದ | ಚ್ಯಾ ದಿವ್ಯಾಸ್ತಂಗಳಿಂ ತಮ್ಮೊವಜರುಗಿಯ ತಮ್ಮಣ್ಣನ ಶೌರ್ಯದಿಂದಂ ಕಾದಂ ಮುಂ ಬಿಜ್ಜನಂ ಕಾದರಿಗನುಟಿದರಂ ಕಾವುದೇಂ ಚೋದ್ಯಮಾಯೇ 11೬೧ ವ|| ಆಗಳ್ ಮಾರ್ತಾಂಡಂ ಪ್ರಚಂಡಮಾರ್ತಾಂಡನ ಶರ ನಿಕರ ಸುರಿತ ಕಿರಣಂಗಳ ಕವಿಯ ತನ್ನ ಕಿರಣಂಗಳ್ ಮಸುಳಪರಜಳನಿಧಿಗಿಲೆದನಾಗಳೆರಡುಂ ಪಡೆಗಳಪಹಾರಡೂರ್ಯಂಗಳಂ ಬಾಜಿಸಿದಾಗಹರಿಣೀಪುತಂ || ಪಡೆಗಳೆರಡುಂ ಬೀಡಿಂಗಂ ತೆರಳು ನಗುತ್ತಿಯಂ ಪಡೆದದರಂ ಮೆಚ್ಚುತ್ತುತ್ಸಾಹದಿಂ ಪೊಗಲುತ್ತು | ಛಡರೆ ನುಡಿಯುತಂತಿರ್ದಾದಿತ್ಯನಂದುದಯಾದಿಯ ತಡರೆ ಪೋಲಮಟ್ಕಾಗಳ್ ಬಂದೊಡ್ಡಿ ನಿಂದುವು ಕೋಪದಿಂ | ೬೨ ಕಂ! ಅಂತೊಡ್ಡಿ ನಿಂದ ಚಾತು ರ್ದಂತಂ ಕೆಯ್ದಿಸುವನ್ನೆಗಂ ಸೈರಿಸದೋ | ರಂತೆ ಪಡೆದಿರುವಂತೆ ದಿ ಗಂತಾಂತಮನೆಮ್ಮೆ ಪರಿಯ ನೆತ್ತರ ತೋಜನೆಗಳ | ವ|| ಪಾಂಡವಸೈನ್ಯವನ್ನೆಲ್ಲ ಚೆಲ್ಲಾಪಿಲ್ಲಿಯಾಗಿ ಚೆದುರಿಸಿ ದ್ರೋಣನು ಧರ್ಮರಾಜನನ್ನು ಹಿಡಿಯಲು ಬಂದನು. ೬೧. ಸಂಸಪಕರುಗಳು ತಮ್ಮೊಡನೆ ಕಾದಲು ಕರೆಯಲಾಗಿ ಅವರ ಬೆನ್ನಟ್ಟಿಹೋಗಿ ವಿಶೇಷಕೋಪದಿಂದ ಕಾದುತ್ತಿದ್ದ ಅರ್ಜುನನು ಆ ಕಳಕಳಶಬ್ದವನ್ನು ಕೇಳಿ ಭೋರೆಂದು ಬಂದು ಪ್ರಯೋಗಿಸಿದ ಶ್ರೇಷ್ಠವಾದ ಬಾಣಗಳಿಂದ ದ್ರೋಣಾಚಾರ್ಯರು ಹಿಮ್ಮೆಟ್ಟಿಸಲು ಅರ್ಜುನನು ತಮ್ಮಣ್ಣನಾದ ಧರ್ಮರಾಜನನ್ನು ಪರಾಕ್ರಮದಿಂದ ರಕ್ಷಿಸಿದನು. ಮೊದಲು ವಿಜಯಾದಿತ್ಯನನ್ನು ರಕ್ಷಿಸಿದವನಿಗೆ ಉಳಿದವರನ್ನು ರಕ್ಷಿಸುವುದೇನು ಆಶ್ಚರ್ಯವೇ ? ವ! ಆಗ ಸೂರ್ಯನು ಪ್ರಚಂಡಮಾರ್ತಾಂಡನಾದ ಅರ್ಜುನನ ಬಾಣರಾಶಿಯ ಪ್ರಕಾಶಮಾನವಾದ ಕಿರಣಗಳಿಂದ ನಿಸ್ತೇಜವಾಗಿ ಪಶ್ಚಿಮಸಮುದ್ರಕ್ಕಿಳಿದನು. ಆಗ ಎರಡುಸೈನ್ಯಗಳೂ ಯುದ್ಧವನ್ನು ನಿಲ್ಲಿಸಬೇಕೆಂಬ ಸೂಚನೆಯನ್ನು ಕೊಡುವೆ ವಾದ್ಯಗಳನ್ನು ಬಾಜಿಸಿದುವು. ೬೨. ಸೈನ್ಯಗಳೆರಡೂ ತಮ್ಮ ಪಾಳೆಯಗಳ ಕಡೆಗೆ ಹೋಗಿ (ಸೇರಿ) ಖ್ಯಾತಿಯನ್ನು ಪಡೆದು ಸತ್ತವರನ್ನು ಉತ್ಸಾಹದಿಂದ ಮೆಚ್ಚಿ ಹೊಗಳುತ್ತ ಸದ್ಗುಣವು ಪ್ರಕಾಶವಾಗುವ ಹಾಗೆ ಮಾತನಾಡುತ್ತ ಸೂರ್ಯನು ಉದಯಪರ್ವತವನ್ನೇರಲು ಹೊರಟು ಕೋಪದಿಂದ ಬಂದೊಡ್ಡಿ ನಿಂದವು. ೬೩. ಹಾಗೆ ಬಂದೊಡ್ಡಿ ನಿಂತ ಚತುರಂಗಸೈನ್ಯವು (ಯುದ್ಧಸೂಚಕವಾದ) ಕೈಬೀಸುವಷ್ಟರವರೆಗೂ ಸೈರಿಸದೆ ಒಂದೇಸಮನಾಗಿ ಹೆಣೆದುಕೊಂಡು ರಕ್ತಪ್ರವಾಹವು ದಿಗಂತದ ಕೊನೆಯನ್ನು ಸೇರಿ ಹರಿಯುವ ಹಾಗೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy