SearchBrowseAboutContactDonate
Page Preview
Page 468
Loading...
Download File
Download File
Page Text
________________ ದಶಮಾಶ್ವಾಸಂ / ೪೬೩ ವ|| ಆಗಳುಭಯಬಲಂಗಳೊಳಂ ಚಾತುರ್ಯಾಮಾವಸಾನಘಟಿತ ಘಂಟಕಾಧ್ವನಿಗಳುಂ ಸಂಧ್ಯಾಸಮಯಸಮುದಿತ ಶಂಖಧ್ವನಿಗಳುಂ ಪಂಚಮಹಾಶಬ್ದವ್ವನಿಗಳುಮೊಡನೊಡನೆ ನೆಗಟ್ಟು ವಾಗಳೆರಡುಂ ಬೀಡುಗಳೊಳಂ ಭೂರೆಂದಾರ್ದು ರವಳಿ ಘೋಷಿಸಿ ಕೊಳ್ಳಿವೀಸಿದಾಗ ಕ೦li , ಉರಿಮುಟ್ಟಿದರಳೆಯಂತಂ ಬರಮುರಿದತ್ತಜನ ಪದ್ಮವಿಷ್ಕರದೆಸಳಂ | ದರಸೀದುವಖಿಳ ದಿಗ್ವಿರ ದರದಂಗಳ್ ಕರಮ್ ಕರಿಪುಗಾಳದುವಾಗಳ್ || ವ|| ಅಂತು ಕೊಳ್ಳಿವೀಸಿದಿಂಬಟೆಯಂಕಂ| ಧೃತ ಧವಳವಸನರಾರಾ ಧಿತಶಿವರರ್ಚಿತ ಸಮಸ್ತಶಸ್ತರ್‌ ನೀರಾ | ಜಿತತುರಗರೊದರ್ ಕೆಲ ರತಿರಥ ಸಮರಥ ಮಹಾರಥಾರ್ಧರಥರ್ಕಳ್ || ಉಡಲುಂ ತುಡಲುಂ ವಸ್ತು ತುಡುಗೆಯನಾನೆಯುಮನರ್ಥಿಸಂತತಿಗೀಯಲ್ | ಬಿಡುವೊನ್ನುಮನಾಳಟ್ಟುವ ತೊಡರೊಳ್ ತೊಡರ್ದಿದ್ರರರಸುಮಕ್ಕಳ್ ಕೆಲಬರ್ || ೩೮ ಭಯಂಕರವೂ ಆಶ್ಚರ್ಯಕರವೂ ಆಗಿ ಎದ್ದಿರುವ ಕೆಂಗಿಡಿಗಳು ತಗಲಿ ಆವರಿಸಲು ಮೇಲೆ ಹಾಯುವ ಹಾಗೆ ಹೊಳೆಯುತ್ತಿರುವ ಆ ಸಂಜೆಗೆಂಪು ಸಾಣೆಗೆ ಕೊಟ್ಟ ಇಟ್ಟಿಗೆಯ ಧೂಳೆನ್ನುವ ಹಾಗಿರಲು ಸೂರ್ಯನು ಮುಳುಗಿದನು. ವ|| ಆಗ ಎರಡು ಸೈನ್ಯಗಳಲ್ಲಿಯೂ ನಾಲ್ಕು ಯಾಮಗಳ ಕಡೆಯಲ್ಲಿ ಉಂಟಾಗುವ ಗಂಟೆಯ ಶಬ್ದಗಳೂ ಸಂಧ್ಯಾಕಾಲದಲ್ಲಿ ಶಂಖಧ್ವನಿಗಳೂ ಪಂಚಮಹಾಧ್ವನಿಗಳೂ ಜೊತೆಜೊತೆಯಲ್ಲಿಯೇ ಉಂಟಾದುವು. ಆಗ ಎರಡು ಬೀಡುಗಳಲ್ಲಿಯೂ ಭೋರೆಂದು ಸಾಮೂಹಿಕ ಶಬ್ದವನ್ನು ಘೋಷಿಸಿ ಆ ಯುದ್ಧಸೂಚಕವಾದ ದೀವಟಿಗೆಗಳನ್ನು ಬೀಸಿದರು. ೩೬. ಬೆಂಕಿ ತಗುಲಿದ ಹತ್ತಿಯಂತೆ ಆಕಾಶವು ಉರಿದುಹೋಯಿತು. ಬ್ರಹ್ಮನ ಕಮಲಾಸನದ ದಳಗಳು ಅರ್ಧ ಸುಟ್ಟವು. ಎಲ್ಲ ದಿಗ್ಗಜಗಳ ದಂತಗಳೂ ವಿಶೇಷವಾಗಿ ಕರಗಾದುವು ವll ಹಾಗೆ ಕೊಳ್ಳಿ ಬೀಸಿದ ಬಳಿಕ ೩೭. ಆ ಸೈನ್ಯದಲ್ಲಿ ವಸ್ತ್ರವನ್ನು ಧರಿಸಿದವರೂ ಶಿವನನ್ನು ಆರಾಧಿಸಿದವರೂ ಸಮಸ್ತ ಆಯುಧಗಳನ್ನು ಪೂಜಿಸಿದವರೂ ಕುದುರೆಗಳಿಗೆ ಆರತಿಯನ್ನೆತ್ತಿದವರೂ ಆದ ಕೆಲವರು ಅತಿರಥ, ಸಮರಥ, ಮಹಾರಥ, ಅರ್ಧರಥರುಗಳು ಪ್ರಕಾಶಿಸಿದರು. ೩೮. ಉಡಲು ವಸ್ತವನ್ನೂ ತೊಡಲು ಆಭರಣವನ್ನೂ ಆನೆಯನ್ನೂ ಯಾಚಕಸಮೂಹಕ್ಕೆ ಕೊಡಲು ಬಿಡಿ ಹೊನ್ನುಗಳನ್ನೂ ಸೇವಕರಿಗೆ ಕಳುಹಿಸುವ ಸಡಗರದಲ್ಲಿ ಕೆಲವು ಅರಸು ಮಕ್ಕಳು ತೊಡಗಿದ್ದರು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy