SearchBrowseAboutContactDonate
Page Preview
Page 469
Loading...
Download File
Download File
Page Text
________________ ೪೬೪ | ಪಂಪಭಾರತಂ ವ|| ಆ ಪ್ರಸ್ತಾವದೊಳೊರ್ವಂ ತನ್ನ ದೋರ್ವಲದಗುರ್ವಿನೊಳುರ್ವಿಪತಿಯ ನಿಂತೆಂದಂಉll ನಾಳೆ ವಿರೋಧಿ ಸಾಧನ ಘಟಾಘಟಿತಾಹವದಲ್ಲಿ ನಿನ್ನ ಕ ಟ್ಬಾಳಿಕೆ ಮುಂಚಿ ತಾಗದೊಡಮಳ್ಳು ತಾಗಿ ವಿರೋಧಿಸೈನ್ಯ ಭೂ | ಪಾಳರನೊಂದೆ ಪೊಯ್ಯದೊಡಮೀ ತಲೆ ಪೋದೊಡಮಟ್ಟೆಯಟ್ಟ ಕ || ಟ್ವಾಳನೆ ಮುಟ್ಟಿ ತಳಿಯದಿರ್ದೊಡಮಂಜಿದೆನಾಂ ಮಹೀಪತೀ || ೩೯ ವ|| ಎಂದು ತನ್ನ ಮನದ ಪೊಡರ್ಫುಮಂ ಕೂರ್ಪುಮನುಂಟುಮಾಡಿ ನುಡಿದಂ ಮತ್ತೊರ್ವಂ ತನ್ನನಾಳಂ ಪೆರ್ಚಿ ಪೊರೆದುದರ್ಕೆ ಕರಂ ಮೆಯ್ಯರ್ಚಿ ನುಡಿದಂಚಂil ಒದವಿದ ನಿನ್ನದೊಂದು ದಯೆ ಮೇಣ್ ಪಿರಿದೂ ನೆಗಳನ್ನ ಗಂಡುಮಾ ದದಟುಮಳುರ್ಕೆಯುಂ ಪಿರಿದೊ ಸಂದಯಮಾದಪುದಿಂದಿಲ್ಲಿ ತೂ | ಗಿದೊಡತಿಯ ಬಾರದದು ಕಾರಣದಿಂ ರಿಪುಭೂಪ ದಂತಿದಂ ತದ ತೊಲೆಯೊಳ್ ಪರಾಕ್ರಮದಿನನ್ನನೆ ಭೂಪತಿ ತೂಗಿ ತೋಜನೇ ೪೦ ವ|| ಎಂದು ತನ್ನ ಸೆರಗುಂ ಬೆರಗುಮಿಲ್ಲದ ಕಲಿತನಮನಳಿಯ ನುಡಿದ ಮತ್ತಮೊಂದೆಡೆ ಯೊಳೊರ್ವ ವೀರಭಟನುದಾರ ವೀರರಸರಸಿಕನಾಗಿಚಂ|| ಕುದುರೆಯನೇದಂಬೆರಸು ಸೌಳೆನೆ ವೋಗಿರೆ ಪೊಯ್ಯುಮೆಯ್ದೆ ಕ ಟ್ನದಿರೊಳೆ ನೂಕಿದಾನೆಗಳ ಕೋಡುಗಳಂ ಬಳೆವೋಗೆ ಪೊಯ್ಯುಮಾಂ | ತದಟರನೊಂದವೊಯ್ದುಮರಡುಂ ಬಲಮನ್ನನೆ ನೋಡ ತಕ್ಕಿನ ನದಟುಮನನ್ನ ವೀರಮುಮನಾಜಿಯೊಳೆನ್ನರಸಂಗ ತೋಜುವೆಂ || ೪೧ ವ|| ಆ ಸಂದರ್ಭದಲ್ಲಿ ಒಬ್ಬನು ತನ್ನ ತೋಳಬಲದ ಆಧಿಕ್ಯದಿಂದ ರಾಜನಿಗೆ ಹೀಗೆ ಹೇಳಿದನು -೩೯. ಎಲೈ ರಾಜನೆ ನಾಳೆ ನಡೆಯಲಿರುವ ಶತ್ರುಸೈನ್ಯದ ಗಜಯುದ್ದದಲ್ಲಿ ನಿನ್ನ ಶೂರರಿರಲು ಅವರನ್ನು ಮುಂಚಿ ಶತ್ರುಸೈನ್ಯವನ್ನು ಪ್ರತಿಭಟಿಸುತ್ತೇನೆ. ಭಯವುಂಟಾಗುವಂತೆ ತಗುಲಿ ಶತ್ರುರಾಜರನ್ನು ಒಂದೇಸಮನಾಗಿ ಹೊಡೆದು ಹಾಕುತ್ತೇನೆ. ಈ ತಲೆ ಹೋದರೂ ಮುಂಡವೇ ಶೂರರನ್ನು ಬೆನ್ನಟ್ಟಿ ಹೋಗಿ ತಗಲಿ ಕತ್ತರಿಸುತ್ತದೆ. ಹಾಗೆ ಮಾಡದಿದ್ದರೆ ನಾನು ಅಂಜಿದವನಾಗುತ್ತೇನೆ. ವಗಿ ಎಂದು ತನ್ನ ಮನದ ಉತ್ಸಾಹವನ್ನೂ ಕೆಚ್ಚನ್ನೂ ಪ್ರದರ್ಶನ ಮಾಡಿ ತೋರಿಸಿದನು. ಮತ್ತೊಬ್ಬನು ತನ್ನ ಯಜಮಾನನು ತನ್ನನ್ನು ವಿಶೇಷವಾಗಿ ಸಾಕಿದುದಕ್ಕೆ ತೃಪ್ತಿಗೊಂಡು ಮೆಯ್ಯುಬ್ಬಿ ಮಾತನಾಡಿದನು-೪೦. ನನ್ನಲ್ಲಿ ನಿನಗುಂಟಾದ ದಯೆ ಹೆಚ್ಚಿನದೊ ಅಥವಾ ನನ್ನ ಪ್ರಸಿದ್ಧವಾದ ಪೌರುಷವೂ ಪರಾಕ್ರಮವೂ ಕೀರ್ತಿಯೂ ದೊಡ್ಡದೋ ಎನ್ನುವುದು ಸಂದೇಹವಾಗಿದೆ. ಇಲ್ಲಿ ಇವೆರಡನ್ನೂ ತೂಗಿ ನೋಡಲು ಸಾಧ್ಯವಿಲ್ಲ. ಆದುದರಿಂದ ಶತ್ರುರಾಜರ ಆನೆಯ ದಂತದ ತಕ್ಕಡಿಯಲ್ಲಿ ಪರಾಕ್ರಮದ ದೃಷ್ಟಿಯಿಂದ ನನ್ನನ್ನು ತಾನೇ ತೂಗಿ ತೋರಿಸುತ್ತೇನೆ. ವ|| ಎಂದು ತನ್ನ ಭಯವೂ ಅಪಾಯವೂ ಇಲ್ಲದ ಶೌರ್ಯವನ್ನು ಸ್ಪಷ್ಟವಾಗಿ ಪ್ರದರ್ಶಿಸಿದನು. ಬೇರೊಂದು ಸ್ಥಳದಲ್ಲಿ ವೀರಭಟನು ಔದಾರ್ಯದಿಂದ ಕೂಡಿದ ವೀರರಸದಲ್ಲಿ ಮಗ್ನನಾಗಿ ನುಡಿದನು. ೪೧. ಹತ್ತಿದ ಕುದುರೆಯೊಡನೆ ಸವಾರನನ್ನು 'ಸಿಲ್' ಎಂದು ಕತ್ತರಿಸುವ ಹಾಗೆ ಚೆನ್ನಾಗಿ ಹೊಡೆದು,
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy