SearchBrowseAboutContactDonate
Page Preview
Page 467
Loading...
Download File
Download File
Page Text
________________ ೪೬೨) ಪಂಪಭಾರತಂ ವ|| ಎಂದಾ ದೂತನಾ ಮಾಚಿಯೊಳೆ ಬಂದು ಪೇಟ ಕೇಳು ಯಮನಂದನನಿಂತೆಂದಂಚಂ|| ಪಗೆ ಮಸೆದಂದೆ ಕೆಯ್ದು ಮಸೆದಿರ್ದುವು ಪೂಜಿಸುವಂಕದಾನೆ ವಾ ಜಿಗಳೆಮಗಿಲ್ಲ ಜಟ್ಟಿಗರೆ ಎನ್ನೊಡವುಟ್ಟಿದರಲ್ಲಿ ನಾಲ್ಕುಮಾ | ನೆಗಳಿವನಾಂ ದಲಿಂ ರಣದೊಳರ್ಚಿಸಿ ಬಿಟ್ಟಪನೇಕ ಮಾಗ್ಟನಾ ವಗಮಿದನಿಂತೆ ಪೇಮ್ ನಾಳೆಯ ಕಾಳೆಗಮಂತ ಗೆಯ್ಯಮಾಂ || ೩೩ ವll ಎಂದಾ ದೂತನಂ ವಿಸರ್ಜಿಸಿ ಪುಂಡರೀಕಾಕ್ಷಂಗೆ ಬಲಿಯನಟ್ಟ ಬರಿಸಿ ನಮ್ಮ ಪಡೆಯೊಳಾರ್ಗೆ ವೀರಪಟ್ಟಮಂ ಕಟ್ಟುವಂ ಪೇಟೆಮನೆಶಾll ಮಾತಂಗಾಸುರವೇರಿಯಲ್ಲಿ ಪಡೆದುಂ ಬಿಲ್ಲಂ ಧನುರ್ವಿದ್ಯೆಗಂ ತಾತಂಗಗ್ಗಳಮಾರುಮಲದನಾ ಶ್ವೇತಂಗಮಂತಾ ನದೀ ಜಾತಂಗಂ ದೊರೆ ಯುದ್ಧಮೆಂದದು ತಚ್ಚತಂಗೆ ಭೂಲೋಕವಿ ಖ್ಯಾತಂಗಗಳ ವೀರಪಟ್ಟಮನುದಾರ ಕಟ್ಟಿದಂ ಧರ್ಮಜಂ || ವ|| ಅಂತು ವಿರಾಟನಂದನನಂ ಧರ್ಮನಂದನಂ ಸೇನಾನಾಯಕನಂ ಮಾಡ ನಾಳೆ ಕಾಳಗವೆಂದು ಪಡೆವಳರ್ ಪೋಗಿ ಸಾಜೆಮೆಂಬುದುಮರ್ ಬೀಡುವೀಡುಗಳೆಲ್ಲಂ ಸಾಟಿದಾಗಚಂ|| ಪಗೆ ಸುಗಿವನ್ನೆಗಂ ಮಸೆವ ವೀರಭಟರ್ಕಳ ರೌದ್ರಮಪ್ಪ ಕೆ ಯುಗಳಿನಗುರ್ವಿನದ್ರುತದಿನುರ್ವಿದ ಕೆಂಗಿಡಿಗಳ್ ಪಳಂಚಿ ತೋ | ಟ್ಟಗೆ ಕೊಳೆ ಪಾಯವೋಲ್ ಪೊಳೆವ ಸಂಜೆಯ ಕೆಂಪದು ಸಾಣೆಗೊಡ್ಡಿದಿ ಮೃಗೆಯ ರಜಂಬೋಲೆಂಬಿನೆಗಮಸ್ತಮಯಕ್ಕಿಟೆದಂ ದಿವಾಕರಂ || ೩೫ ೩೪. ಪ್ರಾರಂಭವಾಗತಕ್ಕದ್ದು. ವ|| ಎಂದು ಹೇಳಿದ ಆ ಮಾತನ್ನು ಆ ದೂತನು ಆ ರೀತಿಯಿಂದಲೇ ಬಂದು ಹೇಳಲಾಗಿ ಧರ್ಮರಾಜನು ಕೇಳಿ ಹೀಗೆಂದನು. ೩೩. ಹಗೆತನ ಪ್ರಾರಂಭವಾದ ದಿನವೇ ಆಯುಧಗಳು ಸಾಣೆಗೊಂಡಿವೆ. ಪೂಜಿಸಬೇಕಾದ ಪ್ರಸಿದ್ದವಾದ ಪ್ರತ್ಯೇಕ ಆನೆ ಕುದುರೆಗಳು ನಮಗಿಲ್ಲ: ನನ್ನೊಡನೆ ಹುಟ್ಟಿದವರೇ ಜಟ್ಟಿಗಳಾದವರಲ್ಲವೇ? ಈ ನಾಲ್ಕು ಆನೆಗಳನ್ನೇ ಪೂಜಿಸಿ ಯುದ್ದದಲ್ಲಿ ಬಿಡುತ್ತೇನೆ. ಏಕೆ ತಡೆಯಲಿ? ಇದನ್ನು ಹೀಗೆಯೇ ಪೂರ್ಣವಾಗಿ ಹೇಳು, ನಾಳೆಯೇ ಯುದ್ಧವಾಗಲಿ. ನಾವೂ ಹಾಗೆಯೇ ಮಾಡುತ್ತೇವೆ. ವ|| ಎಂದು ಆ ದೂತನನ್ನು ಕಳುಹಿಸಿ ಕೊಟ್ಟನು. ಶ್ರೀಕೃಷ್ಣನಿಗೆ ಸಮಾಚಾರವನ್ನು ದೂತರ ಮೂಲಕ ಕಳುಹಿಸಿ ಬರ ಮಾಡಿದನು. 'ನಮ್ಮ ಸೈನ್ಯದಲ್ಲಿ ಯಾರಿಗೆ ವೀರಪಟ್ಟವನ್ನು ಕಟ್ಟೋಣ ಅಪ್ಪಣೆ ಕೊಡಿ' ಎಂದು ಕೇಳಿದನು. ೩೪, ಶ್ವೇತನು ಈಶ್ವರನಲ್ಲಿ ಬಿಲ್ಲನ್ನು ಪಡೆದಿದ್ದಾನೆ. ಬಿಲ್ವಿದ್ಯೆಯಲ್ಲಿ ಆತನನ್ನು ಮೀರಿಸುವವರಾರೂ ಇಲ್ಲ. ಆದುದರಿಂದ ಆ ಶ್ವೇತನಿಗೂ ಭೀಷ್ಮನಿಗೂ ಯುದ್ಧವು ಸಮಾನವಾದುದು ಎಂದು ತಿಳಿದು ಆ ಉದಾರಿಯಾದ ಧರ್ಮರಾಜನು ಭೂಲೋಕವಿಖ್ಯಾತನಾದ ಶ್ವೇತನಿಗೆ ಅತಿಶಯವಾದ ವೀರಪಟ್ಟವನ್ನು ಕಟ್ಟಿದನು. ವ|| ಹಾಗೆ ವಿರಾಟನ ಮಗನಾದ ಶ್ವೇತನನ್ನು ಧರ್ಮರಾಜನು ಸೇನಾನಾಯಕನನ್ನಾಗಿ ಮಾಡಿ ನಾಳೆಯೇ ಯುದ್ಧವೆಂದು ಸೇನಾಧಿಪತಿಗಳು ಹೋಗಿ ಸಾರಿರಿ ಎನ್ನಲು ಅವರು ಬೀಡುಬೀಡುಗಳಲ್ಲೆಲ್ಲ ಘೋಷಿಸಿದರು-೩೫. ಶತ್ರುವು ಹೆದರುವಂತೆ ಮಸೆದಿರುವ ವೀರಭಟರುಗಳ ಭಯಂಕರವಾದ ಆಯುಧಗಳಿಂದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy