SearchBrowseAboutContactDonate
Page Preview
Page 462
Loading...
Download File
Download File
Page Text
________________ ದಶಮಾಶ್ವಾಸಂ ೪೫೭ ಕ೦ll ಗಂಗಾಸುತಂ ಪೃಥಾಸುತ ರಂ ಗೆಲ್ಗೊಡ ತಪಕೆ ಪೋಪೆನವರ್ಗಳ ಕೆಯ್ಯೋಳ್ || ಗಾಂಗೇಯನತಿದೂರಹಿತರ ನಾಂ ಗಲೆ ತಳಿವನನ್ನೆಗಂ ಬಿಲ್ವಡಿಯಂ ! ೨೨ ವ|| ಎಂದು ಕರ್ಣ೦ ಪ್ರತಿಜ್ಞೆಗೆಯ್ದುದುಂ ಸಿಂಧುತನೂಜನಿಂತೆಂದಂಚಂ|| ಕಲಿತನದುರ್ಕು ಜವ್ವನದ ಸೊರ್ಕು ನಿಜೇಶನ ನಚ್ಚು ಮಿಕ್ಕ ತೋ ಆಲದ ಪೊಡರ್ಪು ಕರ್ಣ ನಿನಗುಳ್ಳನಿತೇನನಗುಂಟೆ ಭಾರತಂ | ಕಲಹಮಿದಿರ್ಚುವಂ ಹರಿಗನಪೊಡ ಮಕ್ಕಳಮೇಕೆ ನೀಂ ಪಳಂ ಚಲೆದಪೆಯಣ್ಣ ಸಂಡೆಯಲಪ್ಪುದು ಕಾಣ ಮಹಾಜಿರಂಗದೊಳ್ || ೨೩ ವ|| ಎಂದು ಮತ್ತಮಿಂತೆಂದಂ- ಕ೦ll ಮುದುಪರ ಬಿಲ್ಕಲೈಯುಮಿತಿ ವದಟುಂ ಬಗೆವಾಗಳಣ್ಣನೆಂದಂತುಟಿ ತ ಪದು ಕರಮ ಶುಚಮಕ್ಕು ಕದನದೊಳಿನ್ನನ್ನ ನುಡಿದ ನುಡಿಯಂ ಕೇಳಿ೦ || ೨೪ ಮll ಪಿಡಿಯಂ ಚಕ್ರಮನೆಂಬ ಚಕ್ರಿಯನಿಳಾಚಕ್ರಂ ಭಯಂಗೊಳ್ಳಿನಂ ಪಿಡಿಯಿಪ್ಪಂ ಕರಚಕ್ರಮಂ ನರರಥಂ ತೂಣ್ಣಾ ಕುರುಕ್ಷೇತ್ರದಿಂ 1 ಪಡುವಣ್ಣಾವುದು ಪೋಗೆ ಪೋಗಡಿಸುವ ನಿಚ್ಚಂ ಧರಾಧೀಶರು ಪಡಲಿಟ್ಟಂತಿರ ಮಾಚ್ನೋವದ ಪಯಿಂಛಾಸಿರ್ವರು ಯುದ್ಧದೊಳ್ ||೨೫ ವ್ಯಥೆಯನ್ನುಂಟುಮಾಡುತ್ತದೆ. ೨೨. ಭೀಷ್ಮನು ಪಾಂಡವರನ್ನು ಗೆದ್ದರೆ ನಾನು ತಪಸ್ಸಿಗೆ ಹೋಗಿಬಿಡುತ್ತೇನೆ. ಅವರುಗಳ ಕಯ್ಯಲ್ಲಿ ಭೀಷ್ಮನು ನಾಶವಾದರೆ ಶತ್ರುಗಳನ್ನು ಗೆಲ್ಲುವುದಕ್ಕಾಗಿ ನಾನು ಸಂಧಿಸಿ ಯುದ್ಧಮಾಡುತ್ತೇನೆ. ಅಲ್ಲಿಯವರೆಗೆ ನಾನು ಬಿಲ್ಲನ್ನೇ ಹಿಡಿಯುವುದಿಲ್ಲ. ವ|| ಎಂಬುದಾಗಿ ಕರ್ಣನು ಪ್ರತಿಜ್ಞೆ ಮಾಡಲು ಭೀಷ್ಮನು ಹೀಗೆ ಹೇಳಿದನು. ೨೩. ಕರ್ಣ ಶೌರ್ಯದ ಗರ್ವ, ಯವ್ವನದ ಮದ, ಸ್ವಾಮಿಯ ನಂಬಿಕೆ, ಮೀರಿದ ಬಾಹುಬಲದ ವೈಭವ - ಇವು ನಿನಗಿರುವಷ್ಟು ನನಗಿದೆಯೇನಪ್ಪ, ಇದು ಭಾರತದ ಯುದ್ಧ ಎದುರಿಸುವವನು ಹರಿಗನಾಗಿರುವಾಗ ಈ ಹೀಯಾಳಿಕೆಯೇಕೆ? ನೀನು ಪ್ರತಿಭಟಿಸಿ ಕಾದುವೆಯಣ್ಣಾ, ಈ ಮಹಾಯುದ್ದದಲ್ಲಿ ನಿನಗೂ ಸರದಿ ಬರುತ್ತದೆ ನೋಡುವೆಯಂತೆ ವll ಎಂದು ಪುನಃ ಹೀಗೆಂದನು-೨೪. ನಾನೇನೋ ಮುದುಕ. ಮುದುಕರ ಅಸ್ತವಿದ್ಯಾಕೌಶಲ್ಯವನ್ನೂ ಯುದ್ಧಮಾಡುವ ಪರಾಕ್ರಮವನ್ನೂ ವಿಚಾರಮಾಡಿ ನೋಡಿದರೆ ಕರ್ಣನು ಹೇಳಿದ ಹಾಗೆಯೇ. ತಪ್ಪೇನಿಲ್ಲ, ವಿಶೇಷವಾಗಿ ನಿಜವೇ ಆಗುತ್ತದೆ. ಆದರೂ ಯುದ್ದದಲ್ಲಿ ಇನ್ನು ಮೇಲೆ ನನ್ನ ಪ್ರತಿಜ್ಞೆಯನ್ನು ಕೇಳಿ೨೫. ಚಕ್ರವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವ ಕೃಷ್ಣನ ಕೈಯಲ್ಲಿ ಭೂಮಂಡಲವೆಲ್ಲ ಭಯಪಡುವ ಹಾಗೆ ಚಕ್ರವನ್ನು ಹಿಡಿಸುತ್ತೇನೆ. ಅರ್ಜುನನ ತೇರು ಹಾರಿ ಕುರುಕ್ಷೇತ್ರದಲ್ಲಿ ಪಶ್ಚಿಮಕ್ಕೆ ಎಂಟುಗಾವುದ ಹೋಗುವ ಹಾಗೆ ಬಾಣಪ್ರಯೋಗ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy