SearchBrowseAboutContactDonate
Page Preview
Page 461
Loading...
Download File
Download File
Page Text
________________ ೪೫೬ | ಪಂಪಭಾರತಂ ಆದಿಯೊಳವರಂ ಪಿರಿದೊಂ ದಾದರದಿಂ ನಡಪಿದಜ್ಜರಪುದಣಿಂದಂ | ಕಾದರಿವರವರೊಳವರುಂ ಕಾದ‌ ನೆರೆದಿವರೊಳೆಂತು ನಂಬುವ ನೃಪತೀ || ವ|| ಎಂಬುದುಮಾ ನುಡಿಗೆ ಸಿಡಿಲು ಕುಂಭಸಂಭವನಿಂತೆಂದಂಕಂl ಸಿಂಗದ ಮುಪ್ಪು ನೆಗಟೀ ಗಾಂಗೇಯರ ಮುಪ್ಪುಮಿಟಿಕವಡಗುಮ ವನಮಾ | ತಂಗಂಗಳಿನಸುಹೃಚತು ರಂಗಬಲಂಗಳಿನದಂತುಮಂಗಾಧಿಪತೀ || ಕುಲಜರನುದ್ದತರಂ ಭುಜ ಬಲಯುತರಂ ಹಿತರನೀ ಸಭಾಮಧ್ಯದೊಳ | ಗಲಿಸಿದ ಮದದಿಂ ನಾಲಗೆ ಕುಲಮಂ ತುಬ್ಬುವವೊಲ್ಕುಜದ ನೀಂ ಕಡೆನುಡಿವೈ | ೨೦ ವ|| ಎಂದು ನುಡಿದ ಗುರುವಿನ ಕರ್ಣಕಠೋರವಚನಂಗಳೆ ಕರ್ಣ೦ ಕಿನಿಸಿಚಂ!! ಕುಲಮನೆ ಮುನ್ನಮುಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾ ರ್ಮಲವನನಟ್ಟಿ ತಿಂಬುವ ಕುಲಂ ಕುಲಮಲ್ತು ಚಲಂ ಕುಲಂ ಗುಣಂ | ಕುಲಮಭಿಮಾನಮೊಂದೆ ಕುಲಮಣ್ಣು ಕುಲಂ ಬಗೆವಾಗಳೀಗಳೇ ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ || ೨೧ ನನಗೆ ಪಟ್ಟ ಕಟ್ಟಯ್ಯ. ೧೮. ಬಾಲ್ಯದಿಂದಲೂ ಅವರನ್ನು ವಿಶೇಷ ಪ್ರೀತಿಯಿಂದ ಸಾಕಿದ ಅಜ್ಜರಾದುದರಿಂದ ಇವರು ಅವರೊಡನೆ ಕಾದುವುದಿಲ್ಲ. ಅವರೂ ಇವರೊಡನೆ ಪ್ರತಿಭಟಿಸಿ ಕಾದುವುದಿಲ್ಲ. ರಾಜನೇ ಹೇಗೆ ಇವರನ್ನು ನಂಬುತ್ತೀಯೆ? ವll ಎನ್ನಲು ಆ ಮಾತಿಗೆ ದ್ರೋಣನು ಸಿಡಿದು ಹೀಗೆಂದನು. ೧೯. ಸಿಂಹದ ಮುಪ್ಪನ್ನೂ ಭೀಷ್ಕರ ಮುಪ್ಪನ್ನೂ ಅಲ್ಲಗಳೆಯಬೇಡ, ಸಿಂಹವು ಮುಪ್ಪಾದರೆ ಆನೆಗಳಿಗೆ ಸದರವೇನು ? ಹಾಗೆಯೇ ಭೀಷ್ಮರು ಮುದುಕರಾದುದರಿಂದ ಚತುರಂಗಸೈನ್ಯವು ಅವರನ್ನು ಗೆಲ್ಲಬಲ್ಲವೇ? ೨೦. ಸತ್ಕುಲಪ್ರಸೂತರಾದವರನ್ನು ಶ್ರೇಷ್ಠರಾದವರನ್ನು ಎಲ್ಲರಿಗೂ ಹಿತರಾದವರನ್ನು ಕುರಿತು ಈ ಸಭಾಮಧ್ಯದಲ್ಲಿ ಹೆಚ್ಚಿದ ಕೊಬ್ಬಿನಿಂದ ನೀನು ನಿಷ್ಟಯೋಜನವಾಗಿ ತಿರಸ್ಕಾರದ ಮಾತನಾಡಿದ್ದೀಯೆ. ಕುಲವನ್ನು ನಾಲಗೆ ಆಡಿ ತೋರಿಸುತ್ತದೆಯಲ್ಲವೆ? ವl ಎಂದು ನುಡಿದ ಕಿವಿಗೆ ಕರ್ಕಶವಾದ ಮಾತುಗಳಿಗೆ ಕರ್ಣನು ಕೋಪಿಸಿಕೊಂಡು ೨೧. ಮಾತಿಗೆ ಮೊದಲು ಕುಲವನ್ನೇ ಏಕೆ ಕುರಿತು ಘೋಷಿಸುತ್ತೀರಿ? ನಿಮ್ಮ ಕುಲಗಳು ಪ್ರತಿಭಟಿಸಿದವರನ್ನು ಎದುರಿಸಿ ಹಿಂಬಾಲಿಸಿ ತಿಂದು ಹಾಕುತ್ತವೆಯೇನು? ಹುಟ್ಟಿದ ಜಾತಿ ನಿಜವಾದ ಕುಲವಲ್ಲ; ಛಲ-ಕುಲ, ಸದ್ಗುಣ-ಕುಲ, ಆತ್ಮಗೌರವವೊಂದೆ ಕುಲ, ಪರಾಕ್ರಮವೆಂಬುದು ಕುಲ. ವಿಚಾರಮಾಡುವುದಾದರೆ ಈಗ ಈ ಯುದ್ಧದಲ್ಲಿ ಅಣ್ಣಾ, ನಿಮ್ಮ ಈ ಕುಲವು ನಿಮಗೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy