SearchBrowseAboutContactDonate
Page Preview
Page 463
Loading...
Download File
Download File
Page Text
________________ ೪೫೮ / ಪಂಪಭಾರತ ವ|| ಎಂದು ಮಹಾ ಪ್ರತಿಜ್ಞಾರೂಢನಾದ ಗಾಂಗೇಯನಳವನಳವಲ್ಲದ ಪೂಗಲ್ಲವರಂ ಬೀಡಿಂಗೆ ಬಿಜಯಂಗೆಯ್ದಿಮೆಂದು ಕಳಿಪಿ ಮುದಿವಸಂ ಯುದ್ಧಸನ್ನದ್ದನಾಗಿ ಪ್ರಯಾಣಭೇರಿಯಂ ಪೊಯ್ದಿದಾಗಮll ಕೆಡದಂ ಪದ್ಮಜನಾಸನಾಂಬುರುಹದಿಂದಾಗಳ್ ಸುರೇಂದ್ರಾಚಳಂ ನಡುಗಿತ್ತರ್ಕನಳುರ್ಕೆಗೆಟ್ಟು ನಭದಿಂ ತೂಳಂ ಮರುಳಸಿದಳ್ | ಮೂಡನಂ ಗೌರಿ ಸಮಸ್ತಮೀ ತ್ರಿಭುವನಂ ಪಂಕೇಜಪತ್ರಾಂಬುವೋಲ್ ನಡುಗಿತ್ತೆಂಬಿನಮುರ್ವಿ ಪರ್ವಿದುದು ತತ್ಸನ್ನಾಹಭೇರೀರವಂ || ೨೬ ವ|| ಅಂತು ಮೊಲಗುವ ಭೇರೀರವದೊಡನೆ ನೆಲಂ ಮೋಲಗೆಯುಂ ತಳೆದ - ವಿಚಿತ್ರಕೇತುಗಳೊಡನುತ್ಪಾತಕೇತುಗಳ್ ಮೂಡೆಯುಂ ಪರ್ವಂಡಿ‌ ಸೂಸುವ ಸೇನೆಯೊಡನೆ ರುಧಿರವರ್ಷಂ ಸುರಿಯೆಯುಂ ಹಿತ ಪುರೋಹಿತ ಜಯ ಜಯ ಧ್ವನಿಗಳೊಡನೆ ಹಾಹಾಕ್ರಂದನ ಧ್ವನಿಗಳನಿಮಿತ್ತಮಾಕಾಶದೊಳ್ ನೆಗಟಿಯುಂ ಕಾದುವೆನೆಂದು ನೆಗಳ ನುಡಿದ ನುಡಿಯುಮಂ ಪಿಡಿದ ಚಲಮುಮಂ ಬಗೆದು ಸರಗಂ ಬೆರಗುಮಂ ಬಗೆಯದೆ ಮಂಗಳಾಭರಣದೊಳ್ ನೆಯ ಕೆಯ್ಯ್ದು ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳಾಯೋಗಂಗೊಂಡು ಬಂದ ಮದಾಂಧಗಂಧಸಿಂಧುರಮಪ್ಪ ಪಟ್ಟವರ್ಧನದ ಬೆಂಗವಾಯ್ತು ಮಾಡುತ್ತೇನೆ. ಪ್ರತಿದಿನವೂ ಯುದ್ದದಲ್ಲಿ ಹತ್ತು ಸಾವಿರ ರಾಜರನ್ನು ಕೆಳಗುರುಳಿಸುತ್ತೇನೆ. (ಕೆಳಗೆ ಮಲಗುವ ಹಾಗೆ ಮಾಡುತ್ತೇನೆ) ವ|| ಎಂದು ಮಹಾಪ್ರತಿಜ್ಞೆಯನ್ನು ಮಾಡಿದ ಭೀಷ್ಮನ ಶಕ್ತಿಯನ್ನು ಅಳತೆಯಿಲ್ಲದಷ್ಟು ಎಲ್ಲರೂ ಹೊಗಳಿದರು. ಅವರನ್ನು ಬೀಡಿಗೆ ದಯಮಾಡಿಸಿ' ಎಂದು ಕಳುಹಿಸಿಕೊಟ್ಟನು. ಮಾರನೆಯದಿನ ಯುದ್ಧಸನ್ನದ್ದನಾಗಿ ಪ್ರಯಾಣಸೂಚಕವಾದ ಭೇರಿಯನ್ನು ಶಬ್ದಮಾಡಿಸಿದನು. ೨೬. ಆ ಭೇರಿಯ ಶಬ್ದವನ್ನು ಕೇಳಿ ಬ್ರಹ್ಮನು ಕಮಲಾಸನದಿಂದ ಉರುಳಿದನು; ಮೇರುಪರ್ವತವು ನಡುಗಿತು. ಸೂರ್ಯನು ಸ್ಥಾನಭ್ರಷ್ಟನಾಗಿ ಆಕಾಶದಿಂದ ಹಾರಿದನು. ಪಾರ್ವತಿಯು ಭ್ರಾಂತಿಗೊಂಡು ಈಶ್ವರನನ್ನು ತಬ್ಬಿಕೊಂಡಳು. ಈ ಸಮಸ್ತ ಭೂಮಂಡಲವು ಕಮಲದೆಲೆಯ ಮೇಲಿನ ನೀರಿನ ಹಾಗೆ ನಡುಗಿತು ಎನ್ನುವಂತೆ ಆ ಪ್ರಯಾಣಭೇರೀ ಶಬ್ದವು ಹೆಚ್ಚಿ ಹಬ್ಬಿತು. ವ|| ಆಗ ಭೂಮಿಯು ಗುಡುಗಿತು. ಎತ್ತಿ ಕಟ್ಟಿರುವ ಚಿತ್ರಮಯವಾದ ಧ್ವಜಗಳೊಡನೆ ಅಪಶಕುನ ಸೂಚಕವಾದ ನಕ್ಷತ್ರಗಳು ಕಾಣಿಸಿಕೊಂಡವು. ವೃದಯರು ಚೆಲ್ಲುವ ಮಂತ್ರಾಕ್ಷತೆಗಳೊಡನೆ ರಕ್ತದ ಮಳೆಯು ಸುರಿಯಿತು. ಹಿತರಾದ ಪುರೋಹಿತರ ಜಯಜಯಶಬ್ದಗಳೊಡನೆ ಅಳುವ ಶಬ್ದವು ಅಕಾರಣವಾಗಿ ಆಕಾಶದಲ್ಲಿ ಉಂಟಾಯಿತು. ಆದರೂ ದುರ್ಯೋಧನನು ಯುದ್ಧ ಮಾಡುತ್ತೇನೆಂದು ಸ್ಪಷ್ಟವಾಗಿ ಆಡಿದ ಮಾತನ್ನೂ ಹಿಡಿದ ಛಲವನ್ನೂ ಯೋಚನೆ ಮಾಡಿ ಭಯವನ್ನೂ ಅಪಾಯವನ್ನೂ ಯೋಚಿಸಲೇ ಇಲ್ಲ. ಮಂಗಳಕರವಾದ ಒಡವೆಗಳಿಂದ ಪೂರ್ಣವಾಗಿ ಅಲಂಕಾರಮಾಡಿಕೊಂಡು ಮುತ್ತು ಮಾಣಿಕ್ಯದ ಆಭರಣಗಳಿಂದ ಅಲಂಕೃತವಾಗಿ ಬಂದ ಮದಗಜವಾದ ಪಟ್ಟದಾನೆಯನ್ನು ಹತ್ತಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy