________________
ಈ
ದಶಮಾಶ್ವಾಸಂ / ೪೫೫ ತುಂಗ ಮೃದಂಗ ಶಂಖ ಪಟಹಧ್ವನಿ ದಿಕ್ತಟದಂತನೆಯ ವಾ ರಾಂಗನೆಯರ್ ಚಳಲ್ಕುಳಿತ ಚಾಮರಮಂ ನೆರೆದಿಕ್ಕೆ ಪಂಚ ರ | - ತಂಗಳುಮಂ ಪುದುಂಗೊಳಿಸಿ ಪೊಂಗಳಸಂಗಳೊಳಿರ್ದ ಪುಣ್ಯ ಯಂಗಳೊಳಂ ಮಿಸಿಸಿ ಕಟ್ಟದನಾ ವಿಭು ವೀರಪಟ್ಟಮಂ ೧೫
ವ|| ಅಂತು ಪರಶುರಾಮನನಂಜಿಸಿದ ವೀರಂಗ ವೀರಪಟ್ಟಮಂ ಕಟ್ಟಿ ಪಗೆವರನನ್ನ ಮಂಚದ ಕಾಲೂಲ್ ಕಟ್ಟಿದನೆಂದು ಪೊಟ್ಟಳಿಸುವ ಸುಯೋಧನನ ನುಡಿಯನವಕರ್ಣಿಸಿ ಕರ್ಣನಿಂತೆಂದಂ
ಭಗವತಿಯೇಜುವೇಟ್ಟಿ ತರದಿಂ ಕಥೆಯಾಯ್ತಿವರೇಣ ನೀನಿದಂ ಬಗದಿವರಿನ್ನುಮಾಂತಿವರೆಂದು ವಿಹಿಸಿ ವೀರಪಟ್ಟಮಂ | ಬಗೆಯದೆ ಕಟ್ಟಿದ್ದೆ ಗುರುಗಳಂ ಕುಲವೃದ್ಧರನಾಜಿಗುಯ್ದು ಕೆ ಮಗೆ ಪಗೆವಾಡಿಯೊಳ್ ನಗಿಸಿಕೊಂಡೊಡೆ ಬಂದಪುದೇಂ ಸುಯೋಧನಾ ll೧೬
ಕಂ|| ಕೆಟ್ಟದ ಪಟ್ಟಮೆ ಸರವಿಗೆ
ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಿಂಗಳ ಕ |
ಕೆಟ್ಟ ಮುದುಪಂಗೆ ಪಗೆವರ *, ನಿಟ್ಟೆಲ್ವಂ ಮುಳವೊಡೆನಗೆ ಪಟ್ಟಂಗಟ್ಟಾ |
೧೬
ಕುಳ್ಳಿರಿಸಿದನು. ದೇವಾಸುರಯುದ್ದದಲ್ಲಿ ಷಣ್ಮುಖನಿಗೆ ವೀರಪಟ್ಟವನ್ನು ಕಟ್ಟುವ ಇಂದ್ರನ ರೀತಿಯನ್ನೇ (ಅನುಕರಿಸಿ) ೧೫. ಶ್ರೇಷ್ಠವಾದ ಮೃದಂಗ, ಶಂಖ, ತಮಟೆ, ಮೊದಲಾದವುಗಳ ಉಚ್ಚದ್ವನಿಯು ದಿಕ್ಕುಗಳ ಕೊನೆಯನ್ನು ಮುಟ್ಟುತ್ತಿರಲು ವೇಶ್ಯಾಸ್ತ್ರೀಯರು ಚಲಿಸುತ್ತಿರುವ ಚಾಮರವನ್ನು ಗುಂಪಾಗಿ ಬೀಸುತ್ತಿರಲು ಪಂಚರತ್ನಗಳ ರಾಶಿಗಳಿಂದ ಕೂಡಿದ ಚಿನ್ನದ ಕಲಶಗಳ ಪುಣ್ಯ ತೀರ್ಥಗಳಲ್ಲಿ ಪ್ರೀತಿಯಿಂದ ಸ್ನಾನ ಮಾಡಿಸಿ ಚಕ್ರವರ್ತಿಯಾದ ದುರ್ಯೋಧನನು ಭೀಷ್ಮನಿಗೆ ವೀರಪಟ್ಟವನ್ನು ಕಟ್ಟಿದನು. ವ ಹಾಗೆ ಪರಶುರಾಮನನ್ನೇ ಹೆದರಿಸಿದ ವೀರನಿಗೆ ವೀರಪಟ್ಟವನ್ನು ಕಟ್ಟಿ ಶತ್ರುಗಳನ್ನು ನನ್ನ ಮಂಚದ ಕಾಲಿನಲ್ಲಿ ಕಟ್ಟಿದೆನೆಂದು ಅಹಂಕಾರ ಪಡುತ್ತಿರುವ ದುರ್ಯೊಧನನ ಮಾತನ್ನು ಕೇಳಿ ಕರ್ಣನು ಹೀಗೆಂದನು. ೧೬. ಹಿಂದಿನ ಕಟ್ಟುಕಥೆಯಂತಾಯ್ತು ಇವರ ಯುದ್ದದ ಕತೆ. ಇದನ್ನು ತಿಳಿಯದೆ ನೀನು ಇವರು ಇನ್ನೂ ಪ್ರತಿಭಟಿಸಿ ಯುದ್ದಮಾಡುತ್ತಾರೆ ಎಂದು ಭ್ರಾಂತಿಗೊಂಡು ವಿಚಾರಮಾಡದೆ ಇವರಿಗೆ ಸೇನಾಧಿಪತ್ಯದ ಪಟ್ಟವನ್ನು ಕಟ್ಟಿದೆ. ಗುರುಗಳೂ ಕುಲವೃದ್ಧರೂ ಆದ ಇವರನ್ನು ಯದ್ದರಂಗಕ್ಕೆ ಸೆಳೆದು ನಿಷ್ಟ್ರಯೋಜನವಾಗಿ ಶತ್ರುಗಳ ಗುಂಪಿನಲ್ಲಿ ನಗಿಸಿಕೊಂಡರೆ ನಿನಗೆ ಬರುವ ಪ್ರಯೋಜನವೇನು ದುರ್ಯೊಧನ ? ೧೭. ಕಣ್ಣು ಕಾಣದ ಈ ಮುದುಕನಿಗೆ ಕಟ್ಟಿದ ವೀರಪಟ್ಟವು ಹಗ್ಗಕ್ಕೆ ಸಮಾನವಲ್ಲವೇ? ಆತನು ಧರಿಸಿರುವ ಬಿಲ್ಲು ದಂಟಿಗೆ ಸಮಾನವಲ್ಲವೇ? ಶತ್ರುಗಳ ನಿಟ್ಟೆಲುಬುಗಳನ್ನು ಪುಡಿಮಾಡಬೇಕಾದರೆ