SearchBrowseAboutContactDonate
Page Preview
Page 457
Loading...
Download File
Download File
Page Text
________________ ೪೫೨ / ಪಂಪಭಾರತಂ ವ|| ಎಂಬುದುಮಾ ಮಾತಂ ಮನದೇಗೊಂಡಂತೆಗೆಯ್ಯನೆಂದನಿಬರುಮಂ ವಿಸರ್ಜಿಸಿ ನಿಶಾಸಮಯದೊಳ್ ಪತ್ತೆಂಟು ಕೆಯೀವಿಗೆಗಳ ಬೆಳಗಿನೊಳಂ ಕತಿಪಯ ಪರಿಜನ ಪರಿವೃತನಾಗಿ ರಾಜರಾಜಂ ಸಿಂಧುಜನರಮನೆಗೆವಂದು ವಾಹನದಿಂದಮಿಂದು ಕುರುಪಿತಾಮಹಂಗಳಗಿ ಪೊಡವಡುವುದುಂ ಪರಸಿ ಮಂಚದೊಳೇಯಲ್ ಕರೆದೊಡೊಲ್ಲಂ ಮಹಾಪ್ರಸಾದಮಿಂತಿರ್ಪನೆಂದು ಮಣಿಮಯ ಹೇಮಾಸನದೊಳ್ ಕುಳ್ಳಿರ್ದನು ನೋಡಿ ಕಜ್ಜಂ ಪುಟ್ಟದೊಡಮಗೆ ಬಟ್ಟೆಯಟ್ಟದೀ ಪೊಟ್ಟಿದಾವುದು ಮನವಾಗೆಂದೆಯೆಂದೊಡೆ ಸುಯೋಧನನಿಂತೆಂದಂ ಕಂ ಹರಿ ಬಲದಿಂ ಪಾಂಡವರನು ವರಮಂ ಪೊತಿಸಿದರೆನ್ನೊಳಾಂ ಕರಮತಿದಾ | ಹರಿಯಂ ಕೋಡಗಗಟ್ಟಾ ಗಿರೆ ಕಟ್ಟಿದೊಡಂದು ನೀಮೆ ಬಿಡಿಸಿದಿರಲ್ಲೇ ಕರಿಗಂ ಪರಮಾಣುಗಮಂ ತರಮಾವುದೊ ನಿಮಗಮಸುರವೈರಿಗಮೇನಂ | ತರಮಂತ ನಿಮ್ಮೊಳಗ್ಗದ ಪರಶುಧರಂ ಪೂಣರ್ದು ತಾನದಂದೇನಾದಂ 2 ಭೂಮಿಯನ್ನಾಗಿ ನಿಷ್ಕರ್ಷಿಸಿದೆ. ನೀನು ಹೇಳಿದ ಹಾಗೆ (ಅದರಂತೆ) ಅವರು ಯುದ್ಧರಂಗಕ್ಕೆ ಬಂದಿದ್ದಾರೆ. ಅವರ ಬಾಹುಬಲವನ್ನೂ ಚತುರಂಗಸೈನ್ಯದ ಬಲವನ್ನೂ ಅವರ ಮಿತ್ರವರ್ಗದ ಶಕ್ತಿಯನ್ನೂ ಇನ್ನೇನೆಂದು ಕೇಳುತ್ತೀಯಾ? ಪಾಂಡವರು ಬಲಸಂಪನ್ನರು, ಉತ್ತಮವಾದ ದೈವಬಲದಿಂದ ಕೂಡಿರುವವರು. ಅವಿವೇಕದ ಮಾತನ್ನು ಬಿಟ್ಟುಬಿಡು, ದುರ್ಯೋಧನಾ, ಭೀಷ್ಮರು ಹೇಳಿದ ರೀತಿಯಲ್ಲಿ ಯುದ್ಧಮಾಡು. ವ|| ಎನ್ನಲು ಆ ಮಾತನ್ನು ಅಂಗೀಕರಿಸಿ ಹಾಗೆಯೇ ಮಾಡುತ್ತೇನೆಂದು ಒಪ್ಪಿದನು. ಅಷ್ಟು ಮಂದಿಯನ್ನೂ ಬಿಟ್ಟು ಕಳೆದು ರಾತ್ರಿಯ ಸಮಯದಲ್ಲಿ ಹತ್ತೆಂಟು ಕೈದೀವಿಗೆಗಳ ಬೆಳಕಿನಲ್ಲಿ ಕೆಲವೇ ಜನ ಸೇವಕರಿಂದ ಕೂಡಿದವನಾಗಿ ಚಕ್ರವರ್ತಿಯಾದ ದುರ್ಯೋಧನನು ಭೀಷ್ಮನ ಅರಮನೆಗೆ ಬಂದನು. ವಾಹನದಿಂದಿಳಿದು ಕುರುಪಿತಾಮಹನಾದ ಭೀಷ್ಮನಿಗೆ ಬಗ್ಗಿ ನಮಸ್ಕಾರ ಮಾಡಿದನು. ಅವರು ಹರಸಿ ಅವನನ್ನು ಮಂಚದ ಮೇಲೆ ಹತ್ತಿ ಕುಳಿತುಕೊಳ್ಳಹೇಳಿದರು, 'ಒಲ್ಲೆ ಹಾಗೆ ಮಾಡಲಾರೆ, ಇದೇ ನನಗೆ ಪರಮಾನುಗ್ರಹ, ಹೀಗಿರುತ್ತೇನೆ, ಎಂದು ರತ್ನಖಚಿತವಾದ ಚಿನ್ನದ ಪೀಠದ ಮೇಲೆಯೇ ಕುಳಿತುಕೊಂಡನು. ಭೀಷ್ಮನು ಅವನನ್ನು ನೋಡಿ 'ಕಾರ್ಯ ವುಂಟಾದರೆ ನಮಗೆ ದೂತರ ಮೂಲಕ ಹೇಳಿಕಳುಹಿಸದೆ ಈ ಹೊತ್ತಿನಲ್ಲಿಯೂ ಮನೆವಾರ್ತೆಗಾಗಿ ಬಂದೆ' ಎಂದರು. ದುರ್ಯೋಧನನು ಹೀಗೆಂದನು-೬, ಆ ಪಾಂಡವರು ಕೃಷ್ಣನ ಬಲದಿಂದ ನಮ್ಮಲ್ಲಿ ಯುದ್ಧವನ್ನು ಹತ್ತಿಸಿದ್ದಾರೆ. ಇದನ್ನು ನಾನು ತಿಳಿದೇ ಅಂದು ಕೃಷ್ಣನನ್ನು ಕೋಡಗಗಟ್ಟಿನಿಂದ ಕಟ್ಟಿದರೆ ಆ ದಿನ ನೀವೆ ಬಿಡಿಸಿದಿರಲ್ಲವೇ ೭. ಆನೆಗೂ ಸೂಕ್ಷ್ಮವಾದ ಅಣುವಿಗೂ ಎಷ್ಟು ವ್ಯತ್ಯಾಸ? ನಿಮಗೂ ಕೃಷ್ಣನಿಗೂ ಯಾವ ಅಂತರ ? ನಿಮ್ಮಲ್ಲಿ ಆ ಪ್ರಸಿದ್ಧನಾದ ಪರಶುರಾಮನು ಜಗಳವಾಡಿ ಆದಿನ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy