SearchBrowseAboutContactDonate
Page Preview
Page 458
Loading...
Download File
Download File
Page Text
________________ ದಶಮಾಶ್ವಾಸಂ / ೪೫೩ ಪಿಡಿದರವರಸುರವೈರಿಯ ನೊಡಂಬಡಿಂ ತೊಬ್ರುವಸದಿನಾಂ ನಿಮ್ಮಡಿಯಂ | ಪಿಡಿದೆನದೇಂ ತಾನೆಚ್ಚು ಪಿಡಿದೊಡವರ್ವಂದು ಪಿಡಿದರೆನ್ನರೆ ಗೆಲ್ಲಂ | ಮll ಕೊರಳೊಳ್ ಕಟ್ಟಿದ ದೇವಿಯಂತಿರುರದೊಳ್ ಶ್ರೀ ತೊಟ್ಟಿಲೊಳ್ ತೊಟ್ಟನಂ ತರಮೆನ್ನೊಳ್ ನೆಲಸಿತ್ತು ನಿಮ್ಮ ದಯೆಯಿಂ ನಿಮ್ಮ ಕರಂ ನಚ್ಚಿ ಸಂ | ಗರಮಂ ಬಲ್ಲಿದರೊಳ್ ಪೊಣರ್ಚಿದನದರ್ಕೆನ್ನೊಳ ರಣ ರಣಾ ಜರದೊಳ್ ಮಾಣದ ಪೊರ್ದುವಂತೆ ಬೆಸಸಿಂ ನಿಮ್ಮೊಂದಭಿಪ್ರಾಯಮಂ || ೯ ವ|| ಎಂದು ನುಡಿದ ತನ್ನ ಮೊಮ್ಮನ ನಯದ ವಿನಯದ ನುಡಿಗಳೆ ಕರುಣಿಸಿ ಕುರುವೃದ್ಧನಿಂತೆಂದಂಮll ಧೃತರಾಷ್ಟಂ ನುಡಿದಾರ್ತನೇ ಹರಿ ಭರಂಗಯಾರ್ತನೇ ನೀಂ ಪ್ರಭಾ ಸುತರಂ ನೋಯಿಸಲಾಗದೆಂದು ನುಡಿದೇನಾಮಾರ್ತವೇ ನಿನ್ನೊರಂ | ಟುತನಂ ಕೈಗವಾಯದಪ್ರೊಡ ಮಹಾಭಾರಾವತಾರಂ ರಣೋ ದೃತನಾಗಂಬುದನಮನಸ್ಕರವೊಲೇಂ ನೀಂ ಪ್ರಾರ್ಥಿಸಲ್ಬಟ್ಟುದೇ 11 ೧೦ ವರಿ ಎಂಬುದುಂ ಮಹಾಪ್ರಸಾದವೆಂದು ದುರ್ಯೊಧನಂ ಪೋದನಿತ್ತ ಗಾಂಗೇಯಂ ತನ್ನಂತರ್ಗತದೊಳ್ ತಾನೇ ಏನಾದ? ೮. ಅವರು ಶ್ರೀಕೃಷ್ಣನನ್ನು ಸಮಾನಪ್ರತಿಪತ್ತಿಯಿಂದ ಆಶ್ರಯಿಸಿದ್ದಾರೆ. ನಾನು ನಿಮ್ಮ ಪಾದವನ್ನು ಸೇವಕವೃತ್ತಿಯಿಂದ ಹಿಡಿದಿದ್ದೇನೆ. ಒಂದು ಸಲ ಹೊಡೆದೂ ಪುನಃ ಆಶ್ರಯಿಸಿದ್ದಾರೆ ಎನ್ನುವುದಿಲ್ಲವೇ (?) ೯. ನಿಮ್ಮದಯೆಯಿಂದ ರಾಜ್ಯಲಕ್ಷ್ಮಿಯು ಕೊರಳಲ್ಲಿ ಕಟ್ಟಿದ ದುರ್ಗಾಪದಕದಂತೆ ತೊಟ್ಟಿಲಲ್ಲಿ ಬಾಲ್ಯತನದಿಂದ ಇಲ್ಲಿಯವರೆಗೆ ಏಕಪ್ರಕಾರವಾಗಿ ನನ್ನಲ್ಲಿ ನೆಲಸಿದ್ದಾಳೆ. ನಿಮ್ಮನ್ನು ಪೂರ್ಣವಾಗಿ ನಂಬಿ ಬಲಿಷ್ಠರಾದವರಲ್ಲಿ ಯುದ್ಧವನ್ನು ಹೂಡಿದ್ದೇನೆ. ಈಗ ರಣರಂಗದಲ್ಲಿ ಯುದ್ದಲಕ್ಷಿಯು ನನ್ನನ್ನೇ ತಪ್ಪದೆ ಸೇರುವಂತೆ ಮಾಡಬೇಕು. ನಿಮ್ಮ ಅಭಿಪ್ರಾಯವನ್ನು ಕೊಡಿರಿ. ವ|| ಎಂದು ನುಡಿದ ತನ್ನ ಮೊಮ್ಮಗನ ವಿನಯದಿಂದ ಕೂಡಿದ ಮಾತುಗಳಿಗೆ ಕರುಣಿಸಿ ಭೀಷ್ಮನು ಹೀಗೆ ಹೇಳಿದನು. ೧೦. ನೀನು ಪಾಂಡವರನ್ನು ನೋಯಿಸಬಾರದು ಎಂದು ಹೇಳಿ ನಿನ್ನ ತಂದೆಯಾದ ದೃತರಾಷ್ಟ್ರನು ನಿನ್ನನ್ನು ತಿದ್ದಲು ಪ್ರಯತ್ನಿಸಿದ. ಕೃಷ್ಣನು ಆರ್ಭಟಮಾಡಿ ನೋಡಿದ. ಅವರಿಬ್ಬರೂ ಸಮರ್ಥರಾಗಲಿಲ್ಲ. ಕುಂತೀ ಪುತ್ರರನ್ನು ನೋಯಿಸಬಾರದೆಂದು ಹೇಳಿದೆವು. ನಾವು ಸಮರ್ಥರಾದವೇ? ನಿನ್ನ ಒರಟುತನ ಕೈಮೀರಿದ್ದಾಯಿತು. ಮುಂದಾಗುವುದಾದರೋ ಮಹಾಭಾರತ ಯುದ್ಧ, ಯುದ್ಧಕಾರ್ಯದಲ್ಲಿ ತೊಡಗು ಎಂದು ನಮ್ಮನ್ನು, ಇತರರ ಹಾಗೆ ನೀನು ಪ್ರಾರ್ಥಿಸಬೇಕೆ ? ವ|| ಎನ್ನಲು ದುರ್ಯೋಧನನು ಮಹಾಪ್ರಸಾದ ಎಂದು ಹೇಳಿಹೋದನು. ಈ ಕಡೆ ಭೀಷ್ಕನು ತನ್ನ ಮನಸ್ಸಿನಲ್ಲಿ ಚಿಂತಾಕ್ರಾಂತನಾದನು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy