SearchBrowseAboutContactDonate
Page Preview
Page 456
Loading...
Download File
Download File
Page Text
________________ - ದಶಮಾಶ್ವಾಸಂ ಕಂtl. ಶ್ರೀ ನಾರೀವಲ್ಲಭನಭಿ ಮಾನಧನಂ ಹರಿಗನಾ ಕುರುಕ್ಷೇತ್ರದೊಳಂ | ತೇನುಂ ಮಾಣದೆ ಬಿಟ್ಟುದ ನಾ ನಗು ಸುಯೋಧನಂಗೆ ಚರರಪುವುದುಂ | ಗುರು ಗುರುಸುತ ಶಕುನಿ ಕೃಪಾಂ ಗರಾಜರಂ ಬರಿಸಿ ನುಡಿದನವನಿಪನೇಂ ಕೇ | ಆರ ಪಾಂಡುಸುತರ ಮುನಿಸಿನ ತಳಸಲವಿನ ಚಲದ ಬಲದ ಕಲಿತನದಳವಂ || ಬಂದು ಕುರುಕ್ಷೇತ್ರದೊಳಳ ಮೊಂದಿಗೆ ನಮ್ಮೊಳ್ ಕಡಂಗಿ ಮಿಗೆ ತಳಿಯ | ಲೈಂದಾನುಂ ಬಂದಿರ್ದರಿ ದೇಂ ದಾಯಿಗತನಮನೆಮಗವರ್ ತೋಚಿದಪರ್ || ಮll ಪಡವಳೂಂ ಗಡಮಾ ಬಲಕ್ಕೆ ದಲೆ ಧೃಷ್ಟದ್ಯುಮ್ಮನೆಂಬೋಳೆಯಾ ಪಡೆಯೊಳ್ ಗಂಡನುಮಾ ಮೊಲಂ ದ್ರುಪದನುಂ ಪೇರೊಟ್ಟೆಯಾ ಮತ್ಸ ನುಂ | * ಗಡಮಂತಾ ಬಲಕಾಳನೇನತಿಯಿರೇ ಧರ್ಮಜನಾ ಧರ್ಮಜಂ ಗಡಮೇಂ ನಾಯಕರೊಳ್ಳಿದರ್ ನೆರೆದರೋ ಕಾದಿ ಮನದೊಳ್ | ೪ ವ|| ಎಂಬುದುಂ ಕುಂಭಸಂಭವನಿಂತೆಂದಂಮlು ಕಳವೇ ಕುರುಭೂಮಿಯಂ ಕಳಕವರ್ ವಂದಿರ್ದರೆಂದಂತ ದೋ . ರ್ವಳ ಚಾತುರ್ವಳ ತತ್ಸುಹೃದ್ದಳಮನಿನ್ನೇಗಳಪೈ ಪಾಂಡವರ್ | ಬಳಸಂಪನ್ನರುದಗ್ರದೈವಬಳಸಂಪನ್ನರ್ ಮರುಳಾತನಿ ಮೈುಟಿ ಗಾಂಗೇಯರ ಪೇಟ್ಟದೊಂದು ತುದಿಂ ನೀಂ ಕಾದು ದುರ್ಯೋಧನಾ 11೫ ೧. ಸಂಪಲ್ಲಕ್ಷ್ಮೀಪತಿಯೂ ಅಭಿಮಾನಧನನೂ ಆದ ಅರ್ಜುನನು ಕುರುಕ್ಷೇತ್ರದಲ್ಲಿ ಯಾವ ತಡೆಯೂ ಇಲ್ಲದೆ ಬೀಡುಬಿಟ್ಟುದನ್ನು ಆ ಪ್ರಸಿದ್ಧನಾದ ದುರ್ಯೋಧನನಿಗೆ ದೂತರು ತಿಳಿಸಿದರು. ೨. ದ್ರೋಣ, ಅಶ್ವತ್ಥಾಮ, ಶಕುನಿ, ಕೃಪ, ಕರ್ಣರನ್ನು ಬರಮಾಡಿ ದುರ್ಯೋಧನನು ಹೇಳಿದನು - ಪಾಂಡವರ ಕೋಪದ, ನಿಶ್ಚಯದ, ಛಲದ, ಬಲದ, ಪರಾಕ್ರಮದ ಅಳತೆಯನ್ನು ಕೇಳಿದಿರಾ? ೩. ಸಮರ್ಥರಾಗಿ ಕುರುಕ್ಷೇತ್ರಕ್ಕೆ ಬಂದು ವಿಶೇಷ ಉತ್ಸಾಹದಿಂದ ನಮ್ಮಲ್ಲಿ ಯುದ್ಧಮಾಡುವುದಕ್ಕಾಗಿಯೇ ಬಂದಿದ್ದಾರೆ. ಅವರು ನಮ್ಮಲ್ಲಿ ಎಂತಹ ಜ್ಞಾತಿತ್ವವನ್ನು ತೋರಿಸುತ್ತಿದ್ದಾರೆ! ೪. ಆ ಪಾಂಡವಸೈನ್ಯಕ್ಕೆ ನಿಜವಾಗಿಯೂ ಸೇನಾನಾಯಕ ನಾಗಿರುವವನು ಧೃಷ್ಟದ್ಯುಮ್ಮನೆಂಬ ನೀರುಹಾವು, ಆ ಸೈನ್ಯದಲ್ಲಿ ಶೂರನಾಗಿರುವವರು ದ್ರುಪದನೆಂಬ ಮೊಲ, ಮತ್ಯನೆಂಬ ಒಂಟೆ, ಆ ಸೈನ್ಯಕ್ಕೆ ಯಜಮಾನ ಧರ್ಮದ ಗೊಡ್ಡಾದ ಧರ್ಮರಾಯ (ಅವರ ಯೋಗ್ಯತೆ ನನಗೆ ತಿಳಿಯದೇ ?) ಒಳ್ಳೆಯ ನಾಯಕರು ನನ್ನ ಸೈನ್ಯದೊಡನೆ ಯುದ್ಧಮಾಡುವುದಕ್ಕೆ ಸೇರಿದ್ದಾರೆ! ವ|| ಎಂಬುದಾಗಿ ಹೇಳಲು ದ್ರೋಣಾಚಾರ್ಯನು ಹೀಗೆಂದನು. ೫. ನೀನು ಕುರುಕ್ಷೇತ್ರವನ್ನು ಯುದ್ಧ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy