SearchBrowseAboutContactDonate
Page Preview
Page 414
Loading...
Download File
Download File
Page Text
________________ TV9 999 ಚಂ|| ಪಟುವಟಿಯಂ ತಗುಳಳುರ್ವ ಬೇಗವೊಲೆಚ್ಚ ಶರಾಳಿಗಳ ಛಟಿಲ್ ಛಟಿಲೆನೆ ಪಾಯ ಪಾಯ್ಕ ಬಿಸುನೆತ್ತರ ಸುಟ್ಟುರೆ ಚಾತುರಂಗಮಂ | ಕಲಕುಮಾಗೆ ಪೇಪಸರಿನ ಪಾಯಿಸಿ ತೇರನೆಯ ತೊ ತಂದುಟಿದತ್ತು ವೈರಿಬಲಮಲ್ಲಮನಮನ ಗಂಧವಾರಣಂ || ೧೦೫ ಕುರುಬಲದೊಳ್ ಕರಂ ನಗು ಬೀರರ ಚೆನ್ನರ ಸಂದ ಚೆನ್ನವೊಂ ಗರ ತಲೆ ತಾಪಣ್ ಕೆದಕಿದಂತೆ ನಿರಂತರವಾಜಿರಂಗದೊಳ್ | ಪರೆದಿರೆ ಲೋಹಿತಾಂಬುಧಿಯೊಳಾನಗಳಟ್ಟೆಗಳಾಡೆ ನೋಡಲ ಚರಿಯುಮಗುರ್ವುಮದ್ಭುತಮುವಾಯ್ತು ರಣಂ ಕದನತ್ರಿಣೇತ್ರನಾ || ೧೦೬ ವ|| ಆಗಳದಂ ಕಂಡಂಗರಾಜಂ ರಾಜರಾಜನ ನಡಪಿದುದುಮಂ ತನ್ನ ಬಲ್ಲಾಳನಮುಮಂ ನೆನೆದು ವಿಕರ್ಣಂಬೆರಸರ್ಣವನಿನಾದದಿಂದಾರುತ್ತುಂ ಬಂದ ಗುಣಾರ್ಣವನೊಳ್ ತಾರೆಚಂl ಸಮೆದುದು ಪೋಗು ಗೋಗ್ರಹಣದಲ್ಲಿಯೇ ಭಾರತಮಂಬ ಮಾತನಂ ದಮರ ನರೋರಗರ್ ನುಡಿಯ ರೌದ್ರಶರಂಗಳಿನೆಚ್ಚು ಯುದ್ಧದೊಳ್ | ಸಮಸಮನಾಗಿ ಕಾದಿದೊಡೆ ಕರ್ಣನ ವಕ್ಷಮನೆಚ್ಚು ಗರ್ವಮಂ ಸಮಯಿಸಿ ಕೊಂದನಂಕದ ವಿಕರ್ಣನನೊಂದ ವಿಕರ್ಣದಿಂ ನರಂ || ೧೦೭ ತುದಿಯೂ ಪ್ರಕಾಶಿಸುತ್ತಿರಲು ಕರಿಯ ಹಸುಗಳು, ಯುದ್ಧರಂಗದಲ್ಲಿ ಓಡಿಹೋದುವು. ವ|| ಹಾಗೆ ಹಸುಗಳನ್ನು ಹಿಂತಿರುಗಿಸಿ ಹಿಂತಿರುಗದೆ ತನಗೆ ಪ್ರತಿಭಟಿಸಿ ನಿಂತ ಶತ್ರುಸೈನ್ಯವನ್ನು ಪುಡಿಮಾಡಿ ನಾಶಪಡಿಸಿದನು. ೧೦೫. ಅರಣ್ಯಮಾರ್ಗವನ್ನನುಸರಿಸಿ ವ್ಯಾಪಿಸುವ ಕಿಚ್ಚಿನ ಹಾಗೆ ಪ್ರಯೋಗ ಮಾಡಿದ ಅರ್ಜುನನ ಬಾಣಸಮೂಹಗಳು ಛಳಿಲ್ ಛಳಿಲ್ ಎಂದು ನುಗ್ಗಿಸುತ್ತಾ ಹರಿದುಬರುತ್ತಿರುವ ಬಿಸಿರಕ್ತದ ಸುಂಟರಗಾಳಿಯಿಂದ ಚತುರಂಗಸೈನ್ಯವನ್ನು ಅಸ್ತವ್ಯಸ್ತವಾಗುವ ಹಾಗೆ ಮಾಡಿದನು. ಹೇಳುವುದಕ್ಕೂ ಒಂದು ಹೆಸರಿಲ್ಲ ಎನ್ನುವ ಹಾಗೆ ತೇರನ್ನು ಹಾಯಿಸಿ ಸೊಕ್ಕಿದಾನೆಯಂತೆ ಅರ್ಜುನನು ಶತ್ರುಸೈನ್ಯವನ್ನೆಲ್ಲ ಸಂಪೂರ್ಣವಾಗಿ ತುಳಿದು ಹಾಕಿದನು. ೧೦೬. ಕೌರವಸೈನ್ಯದಲ್ಲಿ ವಿಶೇಷಪ್ರಖ್ಯಾತರಾದ ವೀರರ ಸೌಂದರ್ಯಶಾಲಿಗಳ ಪ್ರಸಿದ್ದರಾದ ಶೂರರುಗಳ ತಲೆಗಳು ತಾಳೆಯ ಹಣ್ಣು ಹರಡಿರುವ ಹಾಗೆ ಅವಿಚ್ಛಿನ್ನವಾಗಿ ಯುದ್ಧಭೂಮಿಯಲ್ಲಿ ಚದುರಿದುವು, ರಕ್ತಸಮುದ್ರದಲ್ಲಿ ಆನೆಯ ಶರೀರಗಳು ಆಡುತ್ತಿರಲು ಕದನತ್ರಿಣೇತ್ರನಾದ ಅರ್ಜುನನ ಯುದ್ಧವು ನೋಡುವುದಕ್ಕೆ ಆಶ್ಚರ್ಯವೂ ಭಯಂಕರವೂ ಅದ್ಭುತವೂ ಆಯಿತು. ವ|| ಆಗ ಕರ್ಣನು ಅದನ್ನು ನೋಡಿ ದುರ್ಯೋಧನನು ತನ್ನನ್ನು ಸಾಕಿದುದನ್ನೂ ತನ್ನ ಪರಾಕ್ರಮವನ್ನೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy