SearchBrowseAboutContactDonate
Page Preview
Page 415
Loading...
Download File
Download File
Page Text
________________ ೪೧೦ | ಪಂಪಭಾರತಂ ವ|| ಅಂತು ಕರ್ಣನ ನೋವುಮಂ ವಿಕರ್ಣನ ಸಾವುಮಂ ಕಂಡುಉll ತಕಿನ ಕುಂಭಸಂಭವ ನದೀಜ ಕೃಪ ಪ್ರಮುಖ ಪ್ರವೀರರೆ ಕೊಯಿನೊರ್ವರೋರ್ವರೆ ಬಿಗುರ್ತಿರದಾಂತು ನಿಶಾತ ಬಾಣ ಜಾ | ಲಕ್ಕೆ ಸಿಡಿಲು ಜೋಲ್ಲು ಸೆರಗು ಬಗೆದೋಡಿದರೊಂದು ಪೊಟ್ಟಮೊಂ ದರ್ಕಮಿದಿರ್ಚಲಾಜಿದೆ ಮನಂಗಲಿಗಳ ಕದನತ್ರಿಣೇತ್ರನಾ || ೧೦೮ ಕಂ|| ಮನದೊಳ್ ಕರುಣಿಸಿ ಸಂಮೋ ಹನಾಸ್ತದಿಂದೆಚ್ಚು ಬೀರರು ಬೀರದ ಶಾ | ಸನಮನೆ ನಿಳಿಸುವ ಬಗೆಯಿಂ ದನಿಬರ ಪದವಿಗೆಯನೆಳೆದುಕೊಂಡಂ ಹರಿಗಂ || ೧೦೯ ವಗ ಅಂತು ವರ ಶತಿ ವಿಶದಯಶಃಪಟಂಗಳಂ ನನ್ನಿಪಟಂಗೊಳ್ವಂತ ವಿವಿಧ ಧ್ವಜಪಟಂಗಳಂ ಕೊಂಡು ಗೆಲ್ಲಂಗೊಂಡು ತಾನುಮುತ್ತರನುಂ ವಿರಾಟಪುರಕ್ಕೆ ಮಗುಟ್ಟು ಬರ್ಪಾಗಲ್ಉll ಸೂಸುವ ಸೇಸೆ ಬೀಸುವ ಚಳಚಮರೀರುಹಮಯಿಂ ರಣಾ ಯಾಸ ಪರಿಶ್ರಮಾಂಬು ಲವಮಂ ತವ ಪೀರೆ ಪುರಾಂಗನಾಮುಖಾ | ಬ್ಯಾಸವಗಂಧದೊಳ್ ಬೆರಸಿದೊಂದಲರೊಯ್ಯನೆ ತೀಡ ಪೊಕನಾ ವಾಸವನಂತೆ ಮತ್ಥ ಮಹಿಪಾಳಕಮಂದಿರಮಂ ಗುಣಾರ್ಣವಂ | ೧೧೦ ಮನುಷ್ಯರೂ ಉರಗರೂ (ಮೂರು ಲೋಕದವರೂ) ಹೇಳುವ ಹಾಗೆ ಅರ್ಜುನನು ಭಯಂಕರವಾದ ಬಾಣಗಳಿಂದ ತನಗೆ ಯುದ್ಧದಲ್ಲಿ ಸರಿಸಮವಾಗಿ ಕಾದಿದ ಕರ್ಣನ ಎದೆಗೆ ಹೊಡೆದು ಅವನ ಅಹಂಕಾರವನ್ನು ಕಡಿಮೆ ಮಾಡಿ ಶೂರನಾದ ವಿಕರ್ಣನನ್ನು ಒಂದೆ ಬಾಣದಿಂದ ಕೊಂದನು. ವ|| ಹಾಗೆ ಕರ್ಣನ ನೋವನ್ನೂ ವಿಕರ್ಣನ ಸಾವನ್ನೂ ನೋಡಿ - ೧೦೮. ಸಮರ್ಥರಾದ ದ್ರೋಣ, ಭೀಷ್ಮ ಕೃಪರೇ ಮುಖ್ಯರಾದ ವೀರಾಗ್ರೇಸರರೂ ಗುಂಪುಗುಂಪಾಗಿ ಒಬ್ಬೊಬ್ಬರೂ ಅರ್ಜುನನ ಹರಿತವಾದ ಬಾಣಸಮೂಹಗಳಿಗೆ ತಡೆಯಲಾರದೆ ಹೆದರಿ ಓಡಿಹೋದರು. ಮನಸ್ಸಿನಲ್ಲಿ ಮಾತ್ರ ಶೂರರಾದ ಅವರು ಕದನತ್ರಿಣೇತ್ರನಾದ ಅರ್ಜುನನ ಒಂದು ಹೊತ್ತಿನ ಯುದ್ದಕ್ಕೂ ಪ್ರತಿಭಟಿಸಿ ನಿಲ್ಲಲಾರದೆ ಹೋದರು. ೧೦೯. ಆಗ ಅರ್ಜುನನು ಅವರ ಮೇಲೆ ದಯೆತೋರಿ ಸಮ್ಮೋಹನಾಸ್ತವನ್ನು ಪ್ರಯೋಗಿಸಿ ಅವರು ಮೈಮರೆತಿರಲು ವೀರಶಾಸನವನ್ನು ಸ್ಥಾಪಿಸುವ ಮನಸ್ಸಿನಿಂದ ಅವರೆಲ್ಲರ ಧ್ವಜವನ್ನೂ ಕಸಿದುಕೊಂಡನು. ವರೆಗೆ ಹಾಗೆ ಶ್ರೇಷ್ಠವಾದ ಚಂದ್ರನಂತೆ ವಿಸ್ತಾರವಾಗಿರುವ ಯಶಸ್ಸೆಂಬ ವಸ್ತಗಳನ್ನು ಸತ್ಯಶಾಸನದ ಕಡತವನ್ನು ಸ್ವೀಕರಿಸುವ ಹಾಗೆ ನಾನಾ ರೀತಿಯ ಬಾವುಟಗಳನ್ನು ತೆಗೆದುಕೊಂಡು ಜಯಪ್ರದನಾಗಿ ತಾನೂ (ಅರ್ಜುನನೂ) ಉತ್ತರನೂ ವಿರಾಟನಗರಕ್ಕೆ ಹಿಂತಿರುಗಿ ಬಂದರು. ೧೧೦. ಸೂಸುತ್ತಿರುವ ಮಂತ್ರಾಕ್ಷತೆಗಳೂ ಚಲಿಸುತ್ತಿರುವ ಚಾಮರಗಳೂ ಒಟ್ಟಿಗೆ ಸೇರಿ ಯುದ್ಧಾಯಾಸದಿಂದುಂಟಾದ ಬೆವರುಹನಿಗಳನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy