________________
೪೦೮ / ಪಂಪಭಾರತಂ ಚoll ಅವಧಿಯ ಲೆಕಮಂ ನೆಸಿಪಿ ನಗೆ ಮಾಣದೆ ಕಾದಲೆಂದು ಬಂ
ದವನಿವನರ್ಜುನಂ ತೂಡರ್ದು ನಿಲ್ಲದೆ ನೀನೊಡಗೊಂಡು ಪೋಗು ಗೋ | ವಹಮನಂಗರಾಜ ಕೃಪ ಕುಂಭಭವ ಪ್ರಮುಖ ಪ್ರವೀರರೆಂ ಬಿವರ್ವೆರಸಾಂಪೆನಾನಿನಿಸನೀ ಯಡೆಯೋಳ್ ಕದನತ್ರಿಣೇತ್ರನಂ |
೧೦೨ ವl ಎಂಬುದುಂ ಸುಯೋಧನಂ ಪಿರಿದುಮಾಕುಳಂಬೆರಸು ಗೋಕುಲಮಂ ಕೊಂಡುಪೋಗೆ ಪೋಗಲೀಯದುತ್ತರನಂ ರಥಮಂ ಚೋದಿಸೆಂದು ಮುಟ್ಟೆವಂದುಮ|| ಪಗೆ ತೀರ್ಗುಂ ಬಗೆ ತೀರ್ಗುಮಾ ಕುರುಕುಳಪ್ರಖ್ಯಾತನಂ ಕಾದಿ ತೂ
೬ಗೆ ಗೋವೃಂದಮನಾಂ ಮಗುಟ್ಟಿದವನೆಂದಾರ್ದಚ್ಚು ತನ್ನಂಕದಂ | ಬುಗಳೊಂದೊಂದಲೋಂದು ಲಕ್ಷ ಬಲಮಂದಬಾಡ ದುರ್ಯೋಧನಂ
ಮಿಗೆ ಸೋಲ್ನೋಡೆ ಮಗುಟ್ಟಿದಂ ತುಜುಗಳ ವಿದ್ವಿಷವಿದ್ರಾವಣಂ ll೧೦೩ ಚಂll ಅದಟರ ಚೆನ್ನಪೊಂಗರ ಸಬಂಗಳ ತೋಯ್ತುಟಿಯೊಳ್ ತೊಡಂಕಿ ನಿ
ಲ್ಲದೆ ಪೂಣಮಟ್ಟ ತಮ್ಮ ಮನದೊಳ್ ಮಿಗೆ ಬೆಚ್ಚಿಸಿದಂತೆ ತೋಜುವ | ಗದ ನಿಡುಗೋಡು ಮೇಡುಮಮರುತ್ತುಮಿಳುಂಕಿದ ಕೆಚ್ಚಲೆತ್ತಮ ತಿದ ಕುಡಿವಾಲಮಂದೆಸೆಯ ಕರ್ಬಸುಗಳ ಪರಿಗೊಂಡುವಾಜಿಯೋ | ೧೦೪
ಪರಸೈನ್ಯಭೈರವನಾದ ಅರ್ಜುನನ ಬರವಿಕೆಗೆ ಹೆದರಿ ಗಾಳಿಗೊಡ್ಡಿದ ದೀಪದ ಹಾಗೆ ವಿಶೇಷವಾಗಿ ನಡುಗುತ್ತಿರುವ ಕೌರವಸೈನ್ಯವನ್ನು ಕಂಡು ದುರ್ಯೋಧನನಿಗೆ ಭೀಷ್ಮನು ಹೀಗೆಂದನು. ೧೦೨. ಅಜ್ಞಾತವಾಸದ ಗಡುವಿನ ಲೆಕ್ಕವನ್ನು ಪೂರ್ಣಮಾಡಿ ಸತ್ಯವಾಕ್ಕಿಗೆ ತಪ್ಪದೆ ನಡೆದು ಯುದ್ಧಮಾಡುವುದಕ್ಕಾಗಿ ಬಂದ ಇವನು ಅರ್ಜುನ. ಇವನಲ್ಲಿ ಸಿಕ್ಕಿ ನಿಂತುಕೊಳ್ಳದೆ ನೀನು ಪಶುಸಮೂಹವನ್ನು ಕರ್ಣ, ಕೃಪ, ದ್ರೋಣರೇ ಮುಖ್ಯರಾದ ಯೋಧಾಗ್ರೇಸರರನ್ನು ಒಡಗೊಂಡು ಹಿಂತಿರುಗಿಸು. ಈ ಸ್ಥಳದಲ್ಲಿ ನಾನು ಕದನತ್ರಿಣೇತ್ರನಾದ ಅರ್ಜುನನನ್ನು ಸ್ವಲ್ಪಮಟ್ಟಿಗೆ ಎದುರಿಸುತ್ತೇನೆ ಎಂದನು. ವ|| ದುರ್ಯೊಧನನು ವಿಶೇಷಗಾಬರಿಯಿಂದ ಕೂಡಿ ಪಶುಸಮೂಹವನ್ನೊಡಗೊಂಡು ಹೋಗಲು ಹಾಗೆ ಹೋಗುವುದಕ್ಕೆ ಬಿಡದೆ ಉತ್ತರವನ್ನು ತೇರನ್ನು ನಡೆಸುವಂತೆ ಹೇಳಿ (ಅರ್ಜುನನು ದುರ್ಯೊಧನನ) ಸಮೀಪಕ್ಕೆ ಬಂದನು. ೧೦೩. ಶತ್ರುವೂ ನಾಶವಾಗುತ್ತದೆ. ಇಷ್ಟಾರ್ಥವೂ ನೆರವೇರುತ್ತದೆ. ಆದುದರಿಂದ ಕುರುಕುಲದಲ್ಲಿ ಪ್ರಖ್ಯಾತನಾದ ಈ ದುರ್ಯೋಧನನೊಡನೆ ನಾನು ಯುದ್ದಮಾಡಿ ಗೋಸಮೂಹವನ್ನು ಹಿಂತಿರುಗಿಸುತ್ತೇನೆ ಎಂದು ಆರ್ಭಟಿಸಿ ಹೊಡೆದು ತನ್ನ ಪ್ರಸಿದ್ದವಾದ ಒಂದೊಂದು ಬಾಣದಿಂದಲೂ ಲಕ್ಷಸೈನ್ಯವು ನಾಶವಾಗಲು ದುರ್ಯೋಧನನು ಪೂರ್ಣವಾಗಿ ಸೋತು ಓಡಿಹೋದನು. ಅರ್ಜುನನು ಗೋವುಗಳನ್ನು ಹಿಂತಿರುಗಿಸಿದನು. ೧೦೪. ಶೂರರ ಮತ್ತು ಪರಾಕ್ರಮಶಾಲಿಗಳ ಶವಗಳ ತುಳಿದಾಟದಲ್ಲಿ ಸಿಕ್ಕಿಕೊಂಡು ನಿಂತುಕೊಳ್ಳದೆ ಹೊರಟು ತಮ್ಮ ಮನಸ್ಸಿನಲ್ಲಿ ವಿಶೇಷವಾಗಿ ಹೆದರಿದಂತೆ ಕಾಣುವ ಕೊನೆ ಬಾಗಿಯೂ ನೀಳವಾಗಿಯೂ ಇರುವ ಕೊಂಬುಗಳೂ ಹಿಣಿಲೂ, ಒಳಗೆ ಸೇರಿಕೊಂಡು ಬಿಗಿದುಕೊಂಡಿರುವ ಕೆಚ್ಚಲೂ, ಸಂಪೂರ್ಣವಾಗಿ ಮೇಲೆತ್ತಿಕೊಂಡಿರುವ ಬಾಲದ