SearchBrowseAboutContactDonate
Page Preview
Page 402
Loading...
Download File
Download File
Page Text
________________ ಅಷ್ಟಮಾಶ್ವಾಸಂ / ೩೯೭ ನುಡಿದಾ ಪೊತ್ತಿಗೆನ್ನನಲ್ಲಿಗೆ ವರಿಸವಂಗೆ ತಕ್ಕುದನಾನೆ ಬಲ್ಲೆನೆಂದು ನುಡಿದು ಕಟಿಪಲಾ ದೌಪದಿ ಸಂತಸಂಬಟ್ಟಂತೆಗೆಯ್ದನೆಂದು ಪೋಗಿಚoll ಮಜುದೆವಸಂ ಲತಾಲಲಿತ ಕೀಚಕನಲ್ಲಿಗೆ ಕಾಮನೊಂದು ಕೈ ಸೆಳೆಯನಿಪಂಗರಾಗಮನಿಳೇಶ್ವರವಲ್ಲಭೆಯಟ್ಟಲುಯೊಡಾ | ನಟಿಯದೆ ನಿನ್ನ ನೋಯಿಸಿದೆನೆಂದೆನಗೆಂಬುದನೆಂಬುದೆಂದು ಕಾ ಲೈಂಗಿದೊಡೊಳ್ಳಿತಾಗೆ ನಿನಗಿಂತಿನಿತೊಂದೊಲವುಳ್ಕೊಡೊಲ್ಲೆನೇ || ೭೩ ವ|| ಎಂದು ನಂಬಿ ನುಡಿದು ವಿರಾಟನ ನಾಟಕಶಾಲೆಯನೆ ಪೂರ್ವಸೂಚಿತಕ್ರಮದೊಳ್ ಕುಜುಪುವೇಟ್ಟು ಸೂರ್ಯಾಸ್ತಮಯಸಮಯದೊಳ್ ಭೀಮಸೇನಂಗೆ ತತ್ತಕಮನಳಪಿದೊಡೆ ಬಾಹುಯುದ್ಧಸನ್ನದ್ದನಾಗಿ ಕಲಿಗಂಟಿಕ್ಕಿ ಗಂಡುಡೆಯುಮನುಟ್ಟು ಮೇಲುದನಿಟಿಯ ಮುಸುಕಿಟ್ಟು ಪೊಗಿ ಗುಣಣಯ ಬಾಗಿಲೊಳ್ ಬ್ರೌಪದಿಯನಿರಿಸಿ ವೀರಶ್ರೀಯ ವಿವಾಹಮಂಟಪಮಂ ಪುಗುವಂತೋಳಪೊಕ್ಕು ಕಂl ಸಿಂಗಬಲನೆಂಬರುರ್ವಿನ ಸಿಂಗಮನಸಿಧೇನುಕಿರಣಕೇಸರಮಾಲಾ | ಸಂಗತಮನಡಸಿ ನುಂಗಲ್ ಸಂಗತಬಲನೊಂದು ಶರಭಮಿರ್ಪಂತಿರ್ದಂ ಮಾತನಾಡಿ ಆ ಹೊತ್ತಿಗೆ ನನ್ನನ್ನೂ ಅಲ್ಲಿಗೆ ಬರಮಾಡು. ಅವನಿಗೆ ತಕ್ಕುದನ್ನು ನಾನು ಬಲ್ಲೆ ಎಂದು ಹೇಳಿಕಳುಹಿಸಿದನು. ಬ್ರೌಪದಿಯು ಸಂತೋಷಪಟ್ಟು ಹಾಗೆಯೇ ಮಾಡುತ್ತೇನೆಂದು ಹೋದಳು. ೭೩. ಮಾರನೆಯ ದಿನ ಲತೆಯಂತೆ ಕೋಮಲವಾದ ಶರೀರವುಳ್ಳ ದೌಪದಿಯ ಕಯ್ಯಲ್ಲಿ ಮಹಾರಾಣಿಯಾದ ಸುದೇಷ್ಟೆಯು ಕಾಮನ ಬಂದಿಯೆಂಬ ಒಂದು ಲೇಪನದ್ರವ್ಯವನ್ನು ಕೀಚಕನಲ್ಲಿಗೆ ಕಳುಹಿಸಿದಳು. ಕೀಚಕನು ಬ್ರೌಪದಿಯನ್ನು ಕುರಿತು 'ನಾನು ತಿಳಿಯದೆ ನಿನ್ನೆಯ ದಿನ ನಿನಗೆ ನೋವನ್ನುಂಟುಮಾಡಿದೆ. ಈ ದಿನ ನನಗೆ ಹೇಳಬೇಕಾದುದನ್ನು ಹೇಳು' ಎಂದು ಅವಳ ಕಾಲಿಗೆ ಬಿದ್ದನು. 'ಓಳ್ಳೆಯದು ನಿನಗೆ ಇಷ್ಟು ಪ್ರೀತಿಯಿರುವುದಾದರೆ ನಾನು ಬೇಡವೆನ್ನುತ್ತೇನೆಯೆ ?' ವಎಂದು ನಂಬುವ ಹಾಗೆ ಮಾತನಾಡಿ ಹಿಂದೆಯೇ ಸೂಚಿತವಾಗಿದ್ದಂತೆ ವಿರಾಟನ ನಾಟಕಶಾಲೆಯನ್ನೇ ಗುರುತು ಹೇಳಿ ಸೂರ್ಯನು ಮುಳುಗುವ ವೇಳೆಯಲ್ಲಿ ಭೀಮಸೇನನಿಗೆ ಆ ಸಮಾಚಾರವನ್ನು ತಿಳಿಸಿದಳು. ಭೀಮಸೇನನು ಮಲ್ಲಯುದ್ಧಮಾಡುವುದಕ್ಕೆ ಸಿದ್ಧನಾಗಿ ವೀರಗಚ್ಚೆಯನ್ನು ಹಾಕಿ ಗಂಡಸಿನ ಉಡುಪನ್ನು ಧರಿಸಿ ಮೇಲುಹೊದಿಕೆ (ಉತ್ತರೀಯ)ಯನ್ನು ಕೆಳಗಿನವರೆಗೆ ಮುಸುಕುಹಾಕಿಕೊಂಡು ಹೋಗಿ ಬ್ರೌಪದಿಯನ್ನು ನಾಟ್ಯಶಾಲೆಯ ಬಾಗಿಲಿನಲ್ಲಿರಿಸಿ ವೀರಲಕ್ಷಿಯ ವಿವಾಹಮಂಟಪವನ್ನು ಪ್ರವೇಶಮಾಡುವ ಹಾಗೆ ಒಳಹೊಕ್ಕನು. ೭೪, ಕತ್ತಿಯ ಕಿರಣಗಳೆಂಬ ಕೇಸರದ ಮಾಲೆಯಿಂದ ಕೂಡಿರುವ ಸಿಂಹಬಲ (ಕೀಚಕನೆಂಬ ಸಿಂಹವನ್ನು ಹಿಡಿದು ನುಂಗಲು ಭೀಮನು ಶಕ್ತಿಯುತವಾದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy